ಬೆಂಗಳೂರು: ರಾಜ್ಯದಲ್ಲಿ ಪವರ್ ಶೇರಿಂಗ್ ಗದ್ದಲ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆಯೇ ಕಾಂಗ್ರೆಸ್ ನಾಯಕರ ಬ್ರೇಕ್‍ಫಾಸ್ಟ್, ಲಂಚ್ ಪಾಲಿಟಿಕ್ಸ್‌ಗಳು ಹೆಚ್ಚಾಗ್ತಿವೆ. ಈ ಮಧ್ಯೆ ಶನಿವಾರ ಸಿಎಂ (CM Siddaramaiah), ಡಿಸಿಎಂ (DCM D.K Shivakumar) ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಿದ್ದಾರೆ ಎಂಬ ವಿಚಾರ ಹೊರಗೆ ಬಿದ್ದಿದೆ.
ಸಿಎಂ ನಿವಾಸ ಕಾವೇರಿಯಲ್ಲಿ ಬೆಳಗ್ಗೆ 9:30ಕ್ಕೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯಲಿದೆ ಎನ್ನಲಾಗಿದೆ. ಮೊದಲು ನೀವಿಬ್ಬರು ಮಾತನಾಡಿಕೊಂಡು ಸ್ಪಷ್ಟತೆಗೆ ಬನ್ನಿ, ಯಾವುದೇ ಗೊಂದಲ ಇಟ್ಟುಕೊಂಡು ದೆಹಲಿಗೆ ಬರದಂತೆ ಹೈ ಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ. ಇದನ್ನೂ ಓದಿ: ತಂದೆಯ ಪರ ಬ್ಯಾಟಿಂಗ್ – ಜಾತಿ ಅಸ್ತ್ರ ಪ್ರಯೋಗಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಯತೀಂದ್ರ
ಇವತ್ತು (ನ.28) ಸಚಿವ ಮುನಿಯಪ್ಪ ಜೊತೆ ಎಂಎಲ್‍ಸಿ ಹರಿಪ್ರಸಾದ್ ಬ್ರೇಕ್‍ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಈ ಸಭೆಯಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಗುರುವಾರ (ನ.27) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹದೇವಪ್ಪ ಜೊತೆ ಬಿ.ಕೆ ಹರಿಪ್ರಸಾದ್ ಬ್ರೇಕ್‍ಫಾಸ್ಟ್ ಮೀಟಿಂಗ್ ನಡೆಸಿದ್ದರು. ಮತ್ತದೇ ನೆಪದಲ್ಲಿ ಇವತ್ತು ಕೂಡ ಮುನಿಯಪ್ಪ ಜೊತೆ ಚರ್ಚಿಸಿದ್ದಾರೆ. ಆದಷ್ಟು ಬೇಗ ಹೈಕಮಾಂಡ್ ಕರೆಸಿ ಮಾತಾಡಿ ಗೊಂದಲ ಬಗೆಹರಿಸಬೇಕು. ಗೊಂದಲದಿಂದ ನಮ್ಮ ಸರ್ಕಾರದ ಕಾರ್ಯಕ್ರಮಗಳು ಜನಕ್ಕೆ ಕಾಣ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ರು. ಇನ್ನು ಹರಿಪ್ರಸಾದ್ ಪ್ರತಿಕ್ರಿಯಿಸಿ ಹಳೆಯ ಸ್ನೇಹಿತರು. ಹಾಗಾಗಿ ಭೇಟಿ ಮಾಡಿದ್ವಿ.. ಪವರ್ ಶೇರಿಂಗ್ ವಿಚಾರದಲ್ಲಿ ಆದಷ್ಟು ಬೇಗ ಎಐಸಿಸಿ ಅಧ್ಯಕ್ಷರು, ಹೈಕಮಾಂಡ್ ಗೊಂದಲ ಬಗೆಹರಿಸಬೇಕು ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ತತ್ವ ಸಿದ್ಧಾಂತ ಒಪ್ಪಿ ಯಾರು ಬೇಕಾದ್ರೂ ಬರಬಹುದು – ಡಿಕೆಶಿಗೆ ರೇಣುಕಾಚಾರ್ಯ ಪರೋಕ್ಷ ಆಹ್ವಾನ

