– ನನಗೂ ಬೇಡ ಎಂದ ಡಿಸಿಎಂ!
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತೆ ಕುಂಕುಮ ಇಟ್ಟುಕೊಳ್ಳಲು ನಿರಾಕರಿಸಿದ್ದಾರೆ.
Advertisement
ಹಾಸನದಲ್ಲಿ (Hassan) ನಡೆದ ಜನಕಲ್ಯಾಣ ಸಮಾವೇಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K Shivakumar) ನಗರದ ಹೊರವಲಯದಲ್ಲಿರುವ ಹೊಯ್ಸಳ ರೆಸಾರ್ಟ್‌ಗೆ ಆಗಮಿಸಿದ್ದರು. ಈ ವೇಳೆ, ರೆಸಾರ್ಟ್ ಸಿಬ್ಬಂದಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸ್ವಾಗತ ಕೋರುವ ವೇಳೆ ಕುಂಕುಮ ಇಡಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಬೇಡ, ಬೇಡ ಎಂದು ತಿಲಕ ಇಟ್ಟುಕೊಳ್ಳಲು ನಿರಾಕರಿಸಿದ್ದಾರೆ.
Advertisement
Advertisement
ಈ ವೇಳೆ ಸಚಿವ ಕೆ.ರಾಜಣ್ಣ, ತಿಲಕ ಅಷ್ಟೇ ಸರ್ ಎಂದು ಹೇಳಿದರು. ಆದರೆ ಸಿಎಂ ಬೇಡ ಎಂದು ತೆರಳಿದರು. ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ರೆಸಾರ್ಟ್ ಗೆ ಆಗಮಿಸಿದ ವೇಳೆ ಕೂಡ ರೆಸಾರ್ಟ್ ಸಿಬ್ಬಂದಿಗಳು ಅವರಿಗೂ ತಿಲಕ ಇಡಲು ಮುಂದಾದರು. ಆಗ ಡಿಕೆಶಿ ಕೂಡ ತಿಲಕ ಇಟ್ಟುಕೊಳ್ಳದೆ, ಬೇಡ ಎಂದು ತೆರಳಿದ್ದಾರೆ.