ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಂತಾಪ ವ್ಯಕ್ತ ಪಡಿಸಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡಿ, ‘ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀಮುರಳಿ ಹೇಳಿದ್ದೇನು?
ಸ್ಪಂದನಾ (Spandana) ಸಾವಿನ ವಿಚಾರ ಕುರಿತಂತೆ ನಟ ಶ್ರೀಮುರಳಿ ಪ್ರತಿಕ್ರಿಯೆ ನೀಡಿದ್ದು,’ಅಣ್ಣ ನನಗೆ ಕಾಲ್ ಮಾಡಿ ಹೇಳಿದ್ದು ಇಷ್ಟೆ. ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ ಅಂತ. ಆಮೇಲೆ ಏನಾಯಿತು ಎನ್ನುವುದರ ಕುರಿತು ನಾಳೆಯೇ ಸ್ಪಷ್ಟತೆ ಸಿಗಲಿದೆ. ಅತ್ತಿಗೆಯ ಅಗಲಿಗೆ ಆಘಾತ ಮೂಡಿಸಿದೆ’ ಎಂದು ಹೇಳಿದರು. ಇದನ್ನೂ ಓದಿ:ತಮಿಳಿಗೆ ಹಾರಿದ ‘ಸೀತಾರಾಮಂ’ ನಟಿ- ಶಿವಕಾರ್ತಿಕೇಯನ್‌ಗೆ ಮೃಣಾಲ್ ನಾಯಕಿ
ಸ್ಪಂದನಾ ಅವರು ಸಂಬಂಧಿಗಳ ಜೊತೆ ಪ್ರವಾಸಕ್ಕೆ ತೆರಳಿದ್ದರು. ಶೂಟಿಂಗ್ ಮುಗಿಸಿಕೊಂಡು ವಿಜಯ ರಾಘವೇಂದ್ರ (Vijaya Raghavendra) ಕೂಡ ಅವರೊಂದಿಗೆ ಭಾಗಿಯಾಗಿದ್ದರು. ನಿನ್ನೆಯಷ್ಟೇ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸರಿಯಾದ ಮಾಹಿತಿ ಇನ್ನೂ ಅವರ ಕುಟುಂಬಕ್ಕೆ ತಲುಪಿಲ್ಲ.
ಈಗಾಗಲೇ ವಿಜಯ ರಾಘವೇಂದ್ರ ಕುಟುಂಬ ಮತ್ತು ಸ್ಪಂದನಾ ಅವರ ಕುಟುಂಬ ಬ್ಯಾಂಕಾಕ್ (Bangkok)ಗೆ ತೆರಳಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ನಾಲ್ಕು ದಿನಗಳ ಹಿಂದೆಯಷ್ಟೇ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರು ತನ್ನ ಕಾಲೇಜು ಸ್ನೇಹಿತರೊಂದಿಗೆ ಥಾಯ್ ಲ್ಯಾಂಡ್‍ಗೆ ಪ್ರವಾಸ ಹೋಗಿದ್ದರು. ಭಾನುವಾರ ಸಂಜೆ ಶಾಫಿಂಗ್ ಮುಗಿಸಿ ಹೋಟೇಲ್ ನತ್ತ ಹೋಗಬೇಕಾದರೆ ಸ್ಪಂದನಾ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸ್ಪಂದನಾ ಮೃತಪಟ್ಟಿರುವುದಾಗಿ (Passway) ವೈದ್ಯರು ತಿಳಿಸಿದ್ದಾರೆ.
Web Stories