– ಕೆ.ಎನ್.ರಾಜಣ್ಣ ಮನೆಯ ಔತಣಕೂಟಕ್ಕೆ ಸಿದ್ದರಾಮಯ್ಯ ಮಿಸ್
ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ತುಮಕೂರು ಪ್ರವಾಸ ರದ್ದುಗೊಳಿಸಿದ್ದಾರೆ.
ವಿಧಾನಸೌಧದಲ್ಲಿ ಸರಣಿ ಸಭೆ ನಡೆಯುತ್ತಿದೆ. ಕಾರ್ಖನೆ ಮಾಲೀಕರು, ರೈತರ ಜೊತೆ ಸಭೆ ಅಪೂರ್ಣವಾದ ಹಿನ್ನೆಲೆಯಲ್ಲಿ ಸಿಎಂ ತುಮಕೂರು (Tumakuru) ಪ್ರವಾಸ ರದ್ದಾಗಿದೆ. ಇದನ್ನೂ ಓದಿ: ಹತ್ತರಗಿ ಟೋಲ್ ಬಳಿ ಕಲ್ಲು ತೂರಾಟ ನಡೆಸಿದವರು ರೈತರಲ್ಲ: ಶಶಿಕಾಂತ ಗುರೂಜಿ
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ನಿವಾಸದಲ್ಲಿ ಸಿಎಂಗೆ ಔತಣಕೂಟ ಏರ್ಪಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಸಭೆ ಬಳಿಕ ಸಿದ್ದರಾಮಯ್ಯ ಅವರು ತುಮಕೂರಿಗೆ ಪ್ರವಾಸ ಬೆಳೆಸಲು ಯೋಜಿಸಿದ್ದರು. ಆದರೆ, ಈಗ ರಾಜಣ್ಣ ಔತಣಕೂಟಕ್ಕೆ ಸಿಎಂ ಮಿಸ್ ಆಗಿದ್ದಾರೆ.
ಟನ್ ಕಬ್ಬಿಗೆ 3,500 ಬೆಲೆ ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ – ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ


