ಬೆಂಗಳೂರು: ಮುಡಾ ಸೈಟ್ ಹಗರಣದ (MUDA Scam) ಸುದ್ದಿ ಜೋರಾಗುತ್ತಿರುವ ಸಮಯದಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) ಮೇಲೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ದಲಿತ (Dalit) ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗವನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅ ಜಾಗದಲ್ಲಿ ಡಿಸಿಎಂ ಆಗಿದ್ದಾಗ ಮನೆ ಕಟ್ಟಿದ್ದಾರೆ ಅಂತ ಸಿದ್ದರಾಮಯ್ಯ ಮೇಲೆ ನೇರ ಆರೋಪ ಮಾಡಿದ್ದಾರೆ.
Advertisement
ಜೆಪಿ ಭವನದಲ್ಲಿ ಮಾತನಾಡಿದ ಅವರು, ಮುಡಾದಲ್ಲಿ 15 ಸೈಟ್ ಅಕ್ರಮವಾಗಿ ಪಡೆದ ಪ್ರಕರಣ ಒಂದು ಕಡೆಯಾದರೆ ಇದು ಇನ್ನೊಂದು ಅಕ್ರಮ. ಸಿದ್ದರಾಮಯ್ಯ ಡಿಸಿಎಂ ಆಗಿ ಮೈಸೂರಿನಲ್ಲಿ ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ಸಿದ್ದರಾಮಯ್ಯ ಅವರೇ ಮನೆ ಕಟ್ಟಿದ್ದೀರಿ? ಬೇಕಾ ದಾಖಲೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜೀವನವು ಖಟಾ-ಖಟ್ ಅಲ್ಲ, ಕಠಿಣ ಪರಿಶ್ರಮ ಬೇಕು: ರಾಹುಲ್‌ಗೆ ಜೈಶಂಕರ್ ಟಾಂಗ್
Advertisement
Advertisement
ದಲಿತನಿಗೆ ಹಂಚಿಕೆಯಾದ ಮುಡಾ ಸೈಟ್‌ನಲ್ಲಿ ಅಕ್ರಮವಾಗಿ ಸಿದ್ದರಾಮಯ್ಯ ಮನೆ ಕಟ್ಟಿದ್ದಾರೆ. ಮುಡಾ ಕೇಸ್ ಮಾತ್ರ ಅಲ್ಲ. ಮೈಸೂರಿನಲ್ಲಿ ಸೀರಿಸ್ ಆಫ್ ಅಕ್ರಮ ಕೇಸ್ ಸಿದ್ದರಾಮಯ್ಯರದ್ದು ಇದೆ ಅಂತ ಆರೋಪ ಮಾಡಿದರು.
Advertisement
ಮುಡಾಗೆ 24 ಸಾವಿರ ರೂ. ಪಾವತಿಸಿ ದಲಿತ ವಿಕಲಚೇತನ ಮುಡಾದಿಂದ ಜಾಗ ಪಡೆದಿದ್ದರು. ಅ ಜಾಗವನ್ನು ಸಾಕಮ್ಮ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದರು. ಜಾಗವನ್ನು ಸಾಕಮ್ಮನಿಂದ ತೆಗೆದುಕೊಂಡು ಸಿದ್ದರಾಮಯ್ಯ ಮನೆ ಕಟ್ಟಿದ್ದಾರೆ. ಮನೆ ಕಟ್ಟಿದ ಬಳಿಕ ಆತ ಬಂದು ನೋಡಿದರೆ ಯಾರೋ ಮನೆ ಕಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಜನ ಇದನ್ನು ಮರೆತಿರಬಹುದು. ಅದರೆ ಕುಮಾರಸ್ವಾಮಿ ಬಳಿ ಈಗಲೂ ದಾಖಲೆಗಳು ಇದೆ ಎಂದರು. ಇದನ್ನೂ ಓದಿ: ಹೊಟ್ಟೆ ತುಂಬ ಊಟ ಕೊಡಿ ಪ್ಲೀಸ್ – ಅರೆಹೊಟ್ಟೆಯಲ್ಲಿ ವಸತಿ ಶಾಲಾ ವಿದ್ಯಾರ್ಥಿನಿಯರ ಪರದಾಟ
ನನ್ನದು ತೆರೆದ ಪುಸ್ತಕ ಅಂತಾರೆ ಸಿದ್ದರಾಮಯ್ಯ. ದಲಿತನ ಜಾಗದಲ್ಲಿ ಕಟ್ಟಿದ್ದ ಮನೆ ಯಾರಿಗೆ ಸೇಲ್ ಮಾಡಿದ್ದೀರಿ? ಈಗ ಈ ಮನೆ ಯಾರ ಕೈಯಲ್ಲಿ ಇದೆ? ಸುಮ್ಮನೆ ಹೆಸರಿಗೆ ಮಾತ್ರ ಸಿದ್ದರಾಮಯ್ಯ ಮಾರಾಟ ಮಾಡಿದ್ದೇನೆ ಎಂದು ತೋರಿಸಿದ್ದಾರೆ. ಆ ದಾಖಲಾತಿ ತೆಗೆದರೆ ಸಿದ್ದರಾಮಯ್ಯ ವಿರುದ್ದ ದೊಡ್ಡ ರಾಮಾಯಣ ಶುರುವಾಗುತ್ತದೆ ಅಂತ ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಗೆ ದಲಿತನ ಜಾಗದಲ್ಲಿ ಮನೆ ಕಟ್ಟಿರೋ ಬಗ್ಗೆ ಮಾತಾಡೋಕೆ ಹೇಳಿ. ದಲಿತನ ಜಾಗ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿರೋ ಬಗ್ಗೆ ಸಿಎಂ ಅವರಿಗೆ ಹೇಳೋಕೆ ಹೇಳಿ ಮಾಧ್ಯಮಗಳಿಗೆ ಸೂಚಿಸಿದರು.