Connect with us

`ಕೈ’ ಸಭೆಯಲ್ಲಿ ಪ್ರತಾಪ್ ಸಿಂಹ, ಹೆಗ್ಡೆ ಭಾಷಣಕ್ಕೆ ಸಿಎಂ ಮೆಚ್ಚುಗೆ!

`ಕೈ’ ಸಭೆಯಲ್ಲಿ ಪ್ರತಾಪ್ ಸಿಂಹ, ಹೆಗ್ಡೆ ಭಾಷಣಕ್ಕೆ ಸಿಎಂ ಮೆಚ್ಚುಗೆ!

ಬೆಂಗಳೂರು: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತು ಸಂಸದ ಪ್ರತಾಪ್ ಸಿಂಹರಂತೆ ನಾವು ಕೂಡ ಜನರ ಮುಂದೆ ಬಹಳ ಅಗ್ರೆಸ್ಸಿವ್ ಆಗಿ ಮಾತಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ಚುನಾವಣಾ ಪ್ರಚಾರ ಸಮಿತಿ ಸದಸ್ಯರ ಮಹತ್ವದ ಸಭೆಯಲ್ಲಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಅನಂತ್ ಕುಮಾರ್ ಹೆಗಡೆ ಹಾಗೂ ಪ್ರತಾಪ್ ಸಿಂಹ ಬಹಳ ಅಗ್ರೆಸ್ಸಿವ್ ಆಗಿ ಮಾತಾಡ್ತಾರೆ. ಆದ್ರೆ ಕಾಂಗ್ರೆಸ್ ನಲ್ಲಿ ಅಗ್ರೆಸ್ಸಿವ್ ಆಗಿ ಮಾತಾನಾಡುವವರು ಯಾರು ಇಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಹಳ ಜನ ಅಂದುಕೊಂಡಿದ್ದಾರೆ ಅನಂತ್ ಕುಮಾರ್ ಹೆಗ್ಡೆ ಮತ್ತು ಪ್ರತಾಪ್ ಸಿಂಹ ಮಾತುಗಳಿಂದ ಬಿಜೆಪಿಗೆ ನೆಗಟಿವ್ ಆಗುತ್ತೆ ಅಂತ. ಆದ್ರೆ ಅದು ಪಾಸಿಟಿವ್ ಆಗ್ತಾ ಇದೆ. ಜನ ಅವರ ಅಗ್ರೆಸ್ಸಿವ್ ಆಗಿ ಮಾತಾನಾಡುವ ಶೈಲಿಯನ್ನು ಇಷ್ಟ ಪಡುತ್ತಾರೆ. ಹಾಗಾಗಿ ನಾವು ಕೂಡ ಜನರ ಮುಂದೆ ಬಹಳ ಅಗ್ರೆಸ್ಸಿವ್ ಆಗಿ ಮಾತಾಡಬೇಕು. ಆದ್ರೆ ಮಾತಾನಾಡುವ ವೇಳೆ ಮಾತಿನ ಹಿಡಿತ ಕಳೆದುಕೊಳ್ಳಬಾರದು ಅಂತ ಸಿಎಂ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.


ಸಭೆಗೆ ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯ, ಸಂಸದರಾದ ಕೆಎಚ್ ಮುನಿಯಪ್ಪ, ಹರಿಪ್ರಸಾದ್, ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ಎಚ್ ಸಿ ಮಹದೇವಪ್ಪ, ಕಾಗೋಡು ತಿಮ್ಮಪ್ಪ, ಟಿ ಬಿ ಜಯಚಂದ್ರ, ಎಚ್ ಆಂಜನೇಯ, ಪ್ರಿಯಾಂಕ ಖರ್ಗೆ, ಪ್ರಮೋದ್ ಮದ್ವರಾಜ್, ತನ್ವೀರ್ ಸೇಠ್, ರಮಾನಾಥ್ ರೈ, ರಮೇಶ್ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯೆ ಜಯಮಾಲ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಸ್ಯಾಂಡಲ್‍ವುಡ್ ಕಲಾವಿದರಾದ ಸಾಧು ಕೋಕಿಲಾ, ಮಾಲಾಶ್ರೀ, ಅಭಿನಯ ಹಾಗೂ ಪ್ರಚಾರ ಸಮಿತಿ ಸದಸ್ಯರು ಕೂಡ ಪಾಲ್ಗೊಂಡಿದ್ದರು.

Advertisement
Advertisement