ಬೆಂಗಳೂರು: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. 7ನೇ ವೇತನ ಆಯೋಗದ (7th Pay Commission) ವೇತನ ಪರಿಷ್ಕರಣೆಯನ್ನು ಆಗಸ್ಟ್ 1 ರಿಂದಲೇ ಅನ್ವಯವಾಗುವಂತೆ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಏಳನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ಏಳನೇ ವೇತನ ಆಯೋಗ ವರದಿ ನೀಡಿ, ಶಿಫಾರಸು ಮಾಡಿದೆ. ಆ.1 ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ – ಎಂ.ಬಿ ಪಾಟೀಲ್ ಘೋಷಣೆ
30% ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. 27.5% ವೇತನ ಹೆಚ್ಚಳ ಮಾಡಲಾಗುವುದು. ಮೂಲವೇತನ 17 ಸಾವಿರದಿಂದ 27 ಸಾವಿರ ವರೆಗೆ ಹೆಚ್ಚಳವಾಗಲಿದೆ. ಗರಿಷ್ಠ 1,50,600 ದಿಂದ 2,43,000 ವರೆಗೂ ವೇತನ ಹೆಚ್ಚಳವಾಗಲಿದೆ. ಪಿಂಚಣಿ ಕನಿಷ್ಠ 8 ಸಾವಿರದಿಂದ 13 ಸಾವಿರಕ್ಕೆ ಹೆಚ್ಚಾಗಲಿದೆ. ಗರಿಷ್ಠ ಪಿಂಚಣಿ 75,300 ರೂ. ನಿಂದ 1,20,600 ವರೆಗೂ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರ ವೇತನ ಹೆಚ್ಚಳದಿಂದ ವಾರ್ಷಿಕವಾಗಿ 20,208 ಕೋಟಿ ಹೆಚ್ಚುವರಿ ವೆಚ್ಚ ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಸದನದಲ್ಲಿ ವಾಲ್ಮೀಕಿ ನಿಗಮ ಹಗರಣ ಗದ್ದಲ – ಸಿಎಂ, ಸಚಿವರ ವಿರುದ್ಧ ಬಿಜೆಪಿ ನಾಯಕರ ಕಿಡಿ