ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಗುತ್ತಿಗೆದಾರರ ಬಾಕಿ ಜಾಸ್ತಿ ಆಗಿದ್ದು, ಗುತ್ತಿಗೆದಾರರ ಬಾಕಿ ಹಣ ಒಂದೇ ಸಾರಿ ಬಿಡುಗಡೆ ಮಾಡಲು ನಾನು ಪ್ರಿಂಟ್ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಗುತ್ತಿಗೆದಾರರ ಸಂಘದ (Contractors Association) ಮೇಲೆ ಗರಂ ಆಗಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಂಘದ ಸಮಾವೇಶವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಈ ವೇಳೆ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್, ಬಾಕಿ ಉಳಿದಿರುವ ಬಿಲ್ ಒಂದೇ ಸಾರಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಬಿಜೆಪಿ (BJP) ಸರ್ಕಾರದಲ್ಲಿ ಬಾಕಿ ಬಿಲ್ ಜಾಸ್ತಿ ಆಗಿದೆ. ಬಾಕಿ ಬಿಲ್‍ಗೆ ಕಾರಣ ಬಿಜೆಪಿಯವರು. ಹಣ ಇಲ್ಲದೇ ಹೋದರು ಟೆಂಡರ್ ಕರೆದು ಬಾಕಿ ಜಾಸ್ತಿ ಮಾಡಿದ್ದಾರೆ. ಸುಮಾರು 1 ಲಕ್ಷದ 20 ಸಾವಿರ ಕೋಟಿ ರೂ. ಟೆಂಡರ್ ಕರೆದಿದ್ದರು. ಈಗ ಎಲ್ಲವನ್ನೂ ಒಂದೇ ಸಾರಿ ಕೊಡಿ ಎಂದು ಬೇಡಿಕೆ ಇಟ್ಟಿದ್ದೀರಾ. ಎಲ್ಲಿಂದ ಒಂದೇ ಸಾರಿ ಕೊಡಲಿ. ನಾನೇನ್ ಪ್ರಿಂಟ್ ಮಾಡ್ಲಾ? ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಮೋದಿ ಕುಟುಂಬದ ಬಗ್ಗೆ ಹೇಳಿಕೆ ನೀಡಿರುವ ಲಾಲು ವಿರುದ್ಧ ಬಿಜೆಪಿ ವಾಗ್ದಾಳಿ
Advertisement
ನಾನು ಸುಳ್ಳು ಹೇಳೋದಿಲ್ಲ, ಹಿಂದೆ ಸಿಎಂ ಇದ್ದಾಗ ದುಡ್ಡು ಕೊಟ್ಟು ಟೆಂಡರ್ ಕರೆಯುತ್ತಿದ್ದೆ. ಬಿಜೆಪಿಯವರು ಹಣ ಇಲ್ಲದೆ ಹೋದರೂ ಟೆಂಡರ್ ಕರೆದಿದ್ದರು. ಅವರು ಟೆಂಡರ್ ಕರೆದಾಗ ನೀವು ಯಾಕೆ ಹಣ ಇಲ್ಲದೆ ಕೆಲಸ ಮಾಡಿದ್ರಿ ಎಂದು ಗುತ್ತಿಗೆದಾರನ್ನು ಪ್ರಶ್ನಿಸಿದ್ದಾರೆ. ಸರ್ಕಾರ ಹೇಳಿದೆ ಎಂದು ಕೆಲಸ ಮಾಡಬಾರದು. ದುಡ್ಡು ಇಲ್ಲ ಎಂದರೆ ಕೆಲಸ ಮಾಡಬಾರದು. 1/3 ರಷ್ಟು ಹಣ ಇದ್ದರೆ ಮಾತ್ರ ಕೆಲಸ ಮಾಡಬೇಕು. ನಾನೇ ಹೇಳಿದ್ರೂ ನೀವು ಕೆಲಸ ಮಾಡಬಾರದು ಎಂದು ಗುತ್ತಿಗೆದಾರರಿಗೆ ತಿಳಿಸಿದ್ದಾರೆ.
Advertisement
Advertisement
ನಾನು ಹಿಂದೆ ಸಿಎಂ ಆಗಿದ್ದಾಗ ಮತ್ತು ಈಗ ಎನ್‍ಓಸಿ ರಿಲೀಸ್ ಮಾಡೋಕೆ 5 ಪೈಸೆ ಯಾರಾದ್ರು ಕಂಟ್ರಾಕ್ಟರ್ ನಿಂದ ಹಣ ತೆಗೆದುಕೊಂಡಿರೊದು ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಭ್ರಷ್ಟಾಚಾರ ಒಂದೇ ಸಾರಿ ನಿರ್ಮೂಲನೆ ಮಾಡೋಕೆ ಸಾಧ್ಯವಿಲ್ಲ. ಕಂಟ್ರಾಕ್ಟರ್‍ಗಳು ನಮ್ಮ ಜೊತೆ ಕೆಲಸ ಮಾಡಬೇಕು. ಸರ್ಕಾರ ಮತ್ತು ಕಂಟ್ರಾಕ್ಟರ್ ಒಟ್ಟಾಗಿ ಕೆಲಸ ಮಾಡಬೇಕು. ಮೊನ್ನೆ 4 ಸಾವಿರ ಕೋಟಿ ರೂ. ಹಣ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿದ್ದೇನೆ. ಕರ್ನಾಟಕದ ಕಂಟ್ರಾಕ್ಟರ್ ಕೆಲಸ ಮಾಡಲಿ ಎಂದು ಹಣ ಬಿಡುಗಡೆ ಮಾಡಿದ್ದೇನೆ. ಬೇರೆ ರಾಜ್ಯದ ಕಂಟ್ರಾಕ್ಟರ್ ಬಂದಿದ್ದಾರೆ. ಅವರನ್ನು ಏಕಾಏಕಿ ಓಡಿಸಲು ಸಾಧ್ಯವಿಲ್ಲ. ಮುಂದೆ ಹಂತ ಹಂತವಾಗಿ ಬೇರೆ ರಾಜ್ಯದವರಿಗೆ ಪ್ಯಾಕೇಜ್ ಸಿಸ್ಟಮ್ ರದ್ದು ಮಾಡಿ, ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ಕೊಡುತ್ತೇವೆ. ಗುತ್ತಿಗೆದಾರರ ಕ್ವಾಲಿಟಿ ಕಂಟ್ರೋಕ್‍ಗೆ ಕಟ್ಟಡ ನಿರ್ಮಾಣಕ್ಕೆ ಜಾಗ ಕೇಳಿದ್ದೀರಿ. ಯಾವುದೇ ವಿವಾದ ಇಲ್ಲದ ಜಾಗವನ್ನ ಹುಡುಕಿದ್ರೆ ಕಡಿಮೆ ಹಣದಲ್ಲಿ ನಾವು ಅ ಜಾಗ ಕೊಡ್ತೀವಿ. ನೀವು ಸ್ವಲ್ಪ ದುಡ್ಡು ಹಾಕಿ. ನಾವು ಸ್ವಲ್ಪ ದುದ್ಡು ಕೊಡ್ತೀವಿ ಎಂದಿದ್ದಾರೆ.
Advertisement
ನಾನು ವಿಪಕ್ಷ ನಾಯಕನಾಗಿದ್ದಾಗ 40% ಕಮೀಷನ್ ನಡೆಯುತ್ತದೆ ಎಂದು ಸಂಘದವರು ಹೇಳಿದ್ರು. ಈಗ ಇದಕ್ಕಾಗಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ನೇಮಕ ಮಾಡಿದ್ದೇನೆ. ಅವರು ತನಿಖೆ ಮಾಡ್ತಿದ್ದಾರೆ. ಕರ್ನಾಟಕದಲ್ಲಿ 40% ಕಮೀಷನ್ ಇರೋದನ್ನು ಕಡೆಗಾಣಿಸೋದೆ ನಮ್ಮ ಉದ್ದೇಶ. ನಿಮಗೆ ಯಾರಾದ್ರೂ ಕಮಿಷನ್ ಬೇಡಿಕೆ ಇಟ್ಟರೆ ನಾಗಮೋಹನ್ ದಾಸ್ ಆಯೋಗಕ್ಕೆ ದೂರು ಕೊಡಿ. ನಮ್ಮ ಸರ್ಕಾರ ಸಾಧ್ಯವಾದ ಮಟ್ಟಿಗೆ ಭ್ರಷ್ಟಾಚಾರ ನಿರ್ಮೂಲನೆಗೆ ಕೆಲಸ ಮಾಡುತ್ತದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡ್ತೀವಿ. ನೀವೆಲ್ಲರೂ ನಮ್ಮ ಜೊತೆ ಕೈ ಜೋಡಿಸಿ ಕೆಲಸ ಮಾಡಬೇಕು. ನಾವು ಗುತ್ತಿಗೆದಾರರ ಪರವಾಗಿ ಇದ್ದೇವೆ. ಒಂದೇ ಸಾರಿ ಬಾಕಿ ಬಿಲ್ ಕೊಡೋಕೆ ಆಗಲ್ಲ. ಹಂತ ಹಂತವಾಗಿ ಹಣ ರಿಲೀಸ್ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ, ಸುಮ್ಮನೆ ಕೂರೋದಕ್ಕಾಗುತ್ತಾ?: ವಿರೋಧಿಗಳಿಗೆ ದೊಡ್ಡಗೌಡ್ರು ಟಾಂಗ್