ಬೆಂಗಳೂರು: ಕನ್ನಡದ ಅಸ್ಮಿತೆಯನ್ನೇ ಪ್ರಮುಖ ಚುನಾವಣಾ ವಿಷ್ಯವಾಗಿಸಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್‍ಗೆ ಸಖತ್ ಟಾಂಗ್ ಕೊಟ್ಟು ಟ್ವಿಟ್ಟರ್‍ನಲ್ಲಿ ಟ್ರೆಂಡ್ ಸೃಷ್ಟಿಸಿದ್ರು.
ಸಿದ್ದರಾಮಯ್ಯ ಚಾಮುಂಡೇಶ್ವರಿ ಜೊತೆಗೆ ಬಾದಾಮಿಯಲ್ಲೂ ಸ್ಪರ್ಧೆ ಮಾಡ್ತಿರೋ ಬಗ್ಗೆ ವ್ಯಂಗ್ಯವಾಡಿ ರಾವ್, ಹಿಂದಿಯಲ್ಲಿ ಟ್ವೀಟಿಸಿದ್ರು. ತಮ್ಮ ಮೇಲೆಯೇ ಹಿಂದಿ ಹೇರಿಕೆಗೆ ತಿರುಗೇಟು ಕೊಟ್ಟ ಮುಖ್ಯಮಂತ್ರಿ, ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಟ್ವೀಟ್ ಮಾಡಿ ಸರ್, ಹಿಂದಿ ಅರ್ಥವಾಗಲ್ಲ ಅಂತ ಮರು ಟ್ವೀಟಿಸಿದ್ರು.
Advertisement
ಈ ಟ್ವೀಟ್ ಬೆನ್ನಲ್ಲೇ ಮೈಕ್ರೋಬ್ಲಾಗ್‍ನಲ್ಲಿ ರಾವ್ ವಿರುದ್ಧ ಟೀಕೆಗಳು ಕೇಳಿ ಬಂದವು. ಇದರಿಂದ ಅನಿವಾರ್ಯವಾಗಿ ರಾವ್, ಏನ್ ಸಿದ್ದರಾಮಯನವ್ರೇ ಹೆದರಿಬಿಟ್ರಾ..? ಭಾರೀ ಮಸಲತ್ತು ಮಾಡಿ ಚಾಮುಂಡೇಶ್ವರಿ ಆರಿಸಿಕೊಂಡ್ರಿ. ಈಗ ಭಯದಿಂದ ಎರಡು ದೋಣಿಯಲ್ಲಿ ಕಾಲಿಡಲು ಹೊರಟಿದ್ದೀರಿ, ಚಿಂತೆ ಬೇಡ. ನೀವೆಲ್ಲಿ ಸ್ಪರ್ಧಿಸಿದ್ರೂ ಪೂರ್ತಿ ಕರ್ನಾಟಕವನ್ನೇ ಕಾಂಗ್ರೆಸ್ ಮುಕ್ತ ಮಾಡ್ತೀವಿ ಅಂತ ತಮ್ಮ ಹಿಂದಿ ಟ್ವೀಟನ್ನು ಕನ್ನಡಕ್ಕೆ ಅನುವಾದಿಸಿದ್ರು.
Advertisement
ಇದಕ್ಕೆ ಇಂಗ್ಲೀಷ್‍ನಲ್ಲಿ ಉತ್ತರ ಕೊಟ್ಟ ಸಿದ್ದರಾಮಯ್ಯ, ಎರಡೂ ಕ್ಷೇತ್ರಗಳಲ್ಲಿ ಜನ ನನ್ನ ಹಣೆಬರಹ ನಿರ್ಧಾರ ಮಾಡ್ತಾರೆ. ಅದರ ಚಿಂತೆ ನಿಮಗೆ ಬೇಡ. ಆದ್ರೆ ನಿಮ್ಗೆ ಕನ್ನಡದಲ್ಲಿ ಟ್ವೀಟ್ ಮಾಡೋದನ್ನು ಕಲ್ಸಿದ್ನಲ್ಲ ಅದಕ್ಕೆ ಖುಷಿ ಆಗ್ತಿದೆ ಅಂತ ತಿರುಗೇಟು ನೀಡಿದ್ರು.
Advertisement
ಇತ್ತ ಕೃಷ್ಣಬೈರೇಗೌಡ ಉರ್ದು ಭಾಷೆಯಲ್ಲಿ ನೀಡಿದ್ದ ಜಾಹೀರಾತು ಉಲ್ಲೇಖಿಸಿದ ಬಿಜೆಪಿ, ನೀವು ನಿಮ್ಮವರು ಹಿಂದಿ ಭಾಷೆಯಲ್ಲಿ ಜಾಹೀರಾತು ಕೊಟ್ಟಾಗ ನಮಗೂ ಅರ್ಥ ಆಗ್ಲಿಲ್ಲ ಸರ್ ಅಂತ ವ್ಯಂಗ್ಯವಾಡಿದೆ.
Advertisement
.@Siddaramaiah जी डर गए क्या?
कड़ी मशक्कत के बाद आपने चामुंडेश्वरी सीट चुनी फिर अब वहां भी हार सामने देखकर दूसरी जगह तलाश कर रहे हैं, मैं आपका संशय खत्म करने के लिए स्पष्ट कर दूं न सिर्फ आपकी दोनों सीट बल्कि पूरा कर्नाटका कांग्रेस मुक्त बनने जा रहा है।
— P Muralidhar Rao (@PMuralidharRao) April 21, 2018
ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಸರ್. ಹಿಂದಿ ಅರ್ಥವಾಗುವುದಿಲ್ಲ https://t.co/i9rbgLyFJU
— Siddaramaiah (@siddaramaiah) April 21, 2018
ಏನ್ ಸಿದ್ದರಾಮಯ್ಯನವ್ರೇ ಹೆದರಿಬಿಟ್ರಾ?
ಭಾರೀ ಮಸಲತ್ತು ಮಾಡಿ ಚಾಮುಂಡೇಶ್ವರಿ ಕ್ಷೇತ್ರ ಆರಿಸಿಕೊಂಡ್ರಿ. ಈಗ ಭಯದಿಂದ ಎರಡು ದೋಣಿಯಲ್ಲಿ ಕಾಲಿಡಲು ಹೊರಟಿದ್ದೀರಿ! ಚಿಂತೆ ಬೇಡ, ನೀವೆಲ್ಲಿ ಸ್ಪರ್ಧಿಸಿದರೂ ನಾವು ಪೂರ್ತಿ ಕರ್ನಾಟಕವನ್ನೇ ಕಾಂಗ್ರೆಸ್ ಮುಕ್ತ ಮಾಡುತ್ತೇವೆ. https://t.co/rPZ2XI1NEI
— P Muralidhar Rao (@PMuralidharRao) April 21, 2018
Leaders with pan Karnataka appeal do not fear any part of the state.
People will decide my fate in both the constituencies, you don’t worry about it.
But I am happy I taught you to tweet in Kannada! https://t.co/3Yz443H0hX
— Siddaramaiah (@siddaramaiah) April 21, 2018
ಸಿದ್ಧರಾಮಯ್ಯ ಸರ್, ನೀವು ಮತ್ತು ನಿಮ್ಮವರು ಹಿಂದಿ, ಉರ್ದು ಭಾಷೆಗಳಲ್ಲಿ ಜಾಹೀರಾತು ಕೊಟ್ಟಾಗ ನಮಗೂ ಅರ್ಥಾ ಆಗಿರ್ಲಿಲ್ಲ ಸರ್. pic.twitter.com/wYoe34SZ8E
— BJP Karnataka (@BJP4Karnataka) April 21, 2018