ಬೆಂಗಳೂರು: ಕಾಂಗ್ರೆಸ್ಸಿನಲ್ಲಿ (Congress) ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ಏನು ಇಲ್ಲ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಡಿ.ಕೆ. ಶಿವಕುಮಾರ್ (DK Shivakumar) ಹೇಳಿಕೊಂಡರೂ ಅದು ಕೃತಿಯಲ್ಲಿ ಮಾತ್ರ ಕಂಡುಬರುತ್ತಿಲ್ಲ. ಸಿದ್ದರಾಮಯ್ಯನವರ (Siddaramaiah) ಪೂರ್ಣಾವಧಿ ಸಿಎಂ ಹೇಳಿಕೆ ಇಬ್ಬರ ನಡುವೆ ಅಂತರವನ್ನು ಸೃಷ್ಟಿಸಿದಂತೆ ಕಂಡುಬಂದಿದೆ.
ಗದಗದಲ್ಲಿ (Gadag) ನಡೆದ ಕರ್ನಾಟಕ 50 ಸಂಭ್ರಮ ಕಾರ್ಯಕ್ರಮದಲ್ಲಿ ಅಕ್ಕ-ಪಕ್ಕವೇ ಕೂತಿದ್ದರೂ ನೆಪ ಮಾತ್ರಕ್ಕೂ ಒಬ್ಬರು ಪರಸ್ಪರ ಮಾತನಾಡಿಲ್ಲ. ಪರಸ್ಪರ ನೋಡಿಕೊಳ್ಳಲೇ ಇಲ್ಲ. ಇಬ್ಬರು ಪಕ್ಕದಲ್ಲಿ ಕುಳಿತಿದ್ದರೂ ಯಾರೋ ಅನಾಮಿಕ ವ್ಯಕ್ತಿಗಳಂತೆ ಕುಳಿತಿದ್ದರು. ಇಬ್ಬರೂ ನಾನೊಂದು ತೀರ ನೀನೊಂದು ತೀರ ಎಂಬಂತೆ ವರ್ತಿಸಿದ್ದಾರೆ. ಕಾರ್ಯಕ್ರಮ ಆರಂಭವಾದ 15 ನಿಮಿಷದ ನಂತರ ಇಬ್ಬರು ಮಾತಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನಂತರ ಡಿಕೆಶಿಯೇ ಸಿಎಂ ಆಗಬೇಕು: ಶಾಸಕ ಉದಯ್ ಗೌಡ
Advertisement
Advertisement
ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ವೇದಿಕೆ ಮೇಲೆ ಇರುವ ನಾಯಕರ ಹೆಸರು ಹೇಳುವಾಗ, ಡಿಸಿಎಂ ಡಿಕೆ ಶಿವಕುಮಾರ್ ಹೆಸರನ್ನೇ ಹೇಳಲೇ ಇಲ್ಲ. ಆಗ ಪಕ್ಕದಲ್ಲಿದ್ದವರು ನೆನಪಿಸಿದ ಕಾರಣ ಡಿಕೆ ಶಿವಕುಮಾರ್ ಅವರ ಹೆಸರನ್ನು ಸಿದ್ದರಾಮಯ್ಯ ಹೇಳಿದರು. ಸಿಎಂ-ಡಿಸಿಎಂ ಅವರ ಈ ನಡೆಗಳು ರಾಜ್ಯಾದ್ಯಂತ ಈಗ ಚರ್ಚೆಗೆ ಗ್ರಾಸವಾಗಿವೆ. ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗ್ತಾರೆ; AICC ಸೂಚನೆಗೆ ಹೆದರಲ್ಲ: ಕೆಎನ್ ರಾಜಣ್ಣ ಸಂಚಲನದ ಹೇಳಿಕೆ
Advertisement
ಶನಿವಾರ ಸಿಎಂ ಸಿದ್ದರಾಮಯ್ಯ ಸಂಪುಟ ಸಚಿವರೊಂದಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ನಾಳೆಯ ಸಭೆಯಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ? ಯಾರೆಲ್ಲಾ ಭಾಗವಹಿಸುವುದಿಲ್ಲ ಎನ್ನುವುದು ಸದ್ಯದ ಕುತೂಹಲ.
Advertisement
ಐದು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡಿದ ಬೆನ್ನಲ್ಲೇ ಡಿಕೆಶಿ ಬೆಂಬಲಿಗರು “ಡಿಕೆ ಶಿವಕುಮಾರ್ ಮುಂದಿನ ಸಿಎಂ” ಎಂಬ ಘೋಷಣೆಯನ್ನು ಮೊಳಗಿಸಿದ್ದಾರೆ. ಅಷ್ಟೇ ಅಲ್ಲದೇ ಹೂಮಳೆಗೈದು ಮುಂದಿನ ಸಿಎಂ ಡಿಕೆಗೆ ಜಯವಾಗಲಿ ಎಂದಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ನೀನು ಸಿಎಂ ಆಗು ಅಂದ್ರೆ ನಾನು ಸಿದ್ಧ: ಪ್ರಿಯಾಂಕ್ ಖರ್ಗೆ
ಸಿದ್ದು ಬಣದ ದಲಿತ ಸಿಎಂ ದಾಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಸಂತೋಷ ಎಂದು ಮುಂದೆ ಸಾಗಿದ್ದಾರೆ. ಮದ್ದೂರು ಶಾಸಕ ಕದಲೂರು ಉದಯ್, ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯ ನಂತರ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ನಮ್ಮ ಬಯಕೆ ಎಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ನಂತರ ಪರಮೇಶ್ವರ್ ಎಂಬ ದಾಳ ಉರುಳಿಸಿದ್ದ ಸಚಿವ ಕೆಎನ್ ರಾಜಣ್ಣಗೆ ಟಕ್ಕರ್ ಕೊಟ್ಟಿದ್ದಾರೆ.
Web Stories