ಬೆಂಗಳೂರು: ಚುನಾವಣೆ ಬದ್ಧ ವೈರಿಗಳೆಂದು ಬಿಂಬಿತರಾಗಿರುವ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಬ್ಬರೂ ಒಬ್ಬರಿಗೊಬ್ಬರು ಟ್ವಿಟ್ಟರ್ ನಲ್ಲಿ ಗುಡ್ ಲಕ್ ಅಂತಾ ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ರಾಜಕೀಯ ನಾಯಕರುಗಳು ತಮ್ಮ ಕ್ಷೇತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ವಿರೋಧಿ ನಾಯಕರಿಗೆ ತಮ್ಮ ಮೊನಚು ಮಾತುಗಳಿಂದ ವ್ಯಂಗ್ಯ ಮಾಡುತ್ತಿದ್ದಾರೆ.
ಸಿಎಂ ಟ್ವೀಟ್: ಬಿಜೆಪಿಯ ಮಿಷನ್ 150, ಮಿಷನ್ 50ಗೆ ಇಳಿದು ಈಗ ಅದು ಮಿಷನ್ 1+1 ಗೆ ಬಂದು ತಲುಪಿದೆ. ಇಡೀ ರಾಜ್ಯ ಸೋತರೂ ಅವರಿಗೆ ಚಾಮುಂಡೇಶ್ವರಿ ಮತ್ತು ವರುಣಾ ಗೆಲ್ಲಬೇಕಂತೆ. ಸೋಲನ್ನು ಅವರೇ ಒಪ್ಪಿಕೊಂಡ ನಂತರ ಹೇಳೋದೇನಿದೆ. Good Luck..
ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುತ್ತಿದ್ದಂತೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿಯವರೇ ನಿಮ್ಮ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿಯ ಮಿಷನ್ 150 ಇಲ್ಲಿಯ ತನಕ ನಿಶ್ಚಿತವಾಗಿತ್ತು. ಈಗ ಇದಕ್ಕೆ 1+1 ಸೇರಿ, ನಮ್ಮ ಮಿಷನ್ 152ಗೆ ಏರಿದೆ. ರಾಜ್ಯದ ಜನತೆ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ. Good Luck.
ಇತ್ತ ಕೇಂದ್ರ ಸಚಿವ ಸದಾನಂದ ಗೌಡ ಸಹ ಟ್ವಿಟ್ಟರ್ ಸಿಎಂ ಕಾಲೆಳೆದಿದ್ದಾರೆ. ಮಾನ್ಯ ಶ್ರೀ ಸಿದ್ದರಾಮಯ್ಯನವರೆ ನಿಮ್ಮಂತ ಹೋರಾಟಗಾರರು ಯುದ್ಧ ಶುರುವಾಗುವ ಮೊದಲೇ ಶಸ್ತ್ರ ತ್ಯಾಗ ಮಾಡಲು ಹೊರಟಿರುವುದು ಒಳ್ಳೆಯದಲ್ಲ. ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರವನ್ನು ಈಗಲೇ ನಿರಾಶೆಯಿಂದ ಕೈ ಚೆಲ್ಲಬೇಡಿ. ಅದೇ ರೀತಿ ನಿಮ್ಮ ವ್ಯಂಗ್ಯ ನಿಮಗೆ ತಿರುಗುಬಾಣವಾಗುವಾಗ ಸಮಯ ಮಿಂಚಿರುತ್ತದೆ ಅಂತಾ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಮಿಷನ್ 150, ಮಿಷನ್ ೫೦ಗೆ ಇಳಿದು ಈಗ ಅದು ಮಿಷನ್ 1+1 ಗೆ ಬಂದು ತಲುಪಿದೆ. ಇಡೀ ರಾಜ್ಯ ಸೋತರೂಅವರಿಗೆ ಚಾಮುಂಡೇಶ್ವರಿ ಮತ್ತು ವರುಣಾ ಗೆಲ್ಲಬೇಕಂತೆ. ಸೋಲನ್ನು ಅವರೇ ಒಪ್ಪಿಕೊಂಡ ನಂತರ ಹೇಳೋದೇನಿದೆ. Good Luck.
— Siddaramaiah (@siddaramaiah) April 3, 2018
ಮುಖ್ಯಮಂತ್ರಿಯವರೇ ನಿಮ್ಮ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿಯ ಮಿಷನ್ 150 ಇಲ್ಲಿಯ ತನಕ ನಿಶ್ಚಿತವಾಗಿತ್ತು. ಈಗ ಇದಕ್ಕೆ 1+1 ಸೇರಿ, ನಮ್ಮ ಮಿಷನ್ 152ಗೆ ಏರಿದೆ.
ರಾಜ್ಯದ ಜನತೆ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ, Good Luck ! https://t.co/A6sMnEntMh
— B.S.Yediyurappa (@BSYBJP) April 3, 2018
ಮಾನ್ಯ ಶ್ರೀ @siddaramaiah ರವರೆ ನಿಮ್ಮಂತ ಹೋರಾಟಗಾರರು ಯುದ್ಧ ಶುರುವಾಗುವ ಮೊದಲೇ ಶಸ್ತ್ರ ತ್ಯಾಗ ಮಾಡಲು ಹೊರಟಿರುವುದು ಒಳ್ಳೆಯದಲ್ಲ . ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರವನ್ನು ಈಗಲೇ ನಿರಾಶೆಯಿಂದ ಕೈ ಚೆಲ್ಲಬೇಡಿ . ಅದೇ ರೀತಿ ನಿಮ್ಮ ವ್ಯಂಗ್ಯ ನಿಮಗೆ ತಿರುಗುಬಾಣ ವಾಗುವಾಗ ಸಮಯ ಮಿಂಚಿರುತ್ತದೆ https://t.co/KXUJ0FXFtQ
— Sadananda Gowda (@DVSadanandGowda) April 3, 2018