ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaaramaiah) ಹೆಲಿಕಾಪ್ಟರ್, ವಿಮಾನ ಪಯಣಕ್ಕೆ ಕೋಟಿ ಕೋಟಿ ಖರ್ಚಾಗಿದೆ. 2023 ರಿಂದ ಈವರೆಗೆ ನವೆಂಬರ್‌ವರೆಗೆ 47 ಕೋಟಿ ಖರ್ಚಾಗಿದೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ (MLC Ravikumar) ಕೇಳಿದ ಪ್ರಶ್ನೆಗೆ ಸರ್ಕಾರ ಉತ್ತರ ಕೊಟ್ಟಿದೆ. ರಾಜ್ಯದ ಬಹುತೇಕ ಜಿಲ್ಲೆಗಳು, ದೆಹಲಿ, ಹೈದರಾಬಾದ್, ಚೆನ್ನೈಗೆ ಹೋಗಲು ಹೆಲಿಕಾಪ್ಟರ್, ವಿಮಾನ ಬಳಕೆ ಮಾಡಿದ್ದಾರೆ. ಮೈಸೂರಿಗೆ ಹೋಗಿ ಬರಲು ಎರಡೂವರೆ ವರ್ಷದಲ್ಲಿ 5 ಕೋಟಿಗೂ ಅಧಿಕ ಬಳಕೆಯಾಗಿದೆ. ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 1 ಲಕ್ಷ ದಂಡ, 3 ವರ್ಷ ಜೈಲು – ರಾಜ್ಯ ಸರ್ಕಾರ ಮಸೂದೆ ಮಂಡನೆ
ಸಿಎಂ ವಾಯುಯಾನ – ಯಾವ ವರ್ಷ ಎಷ್ಟು ಖರ್ಚು?
* 2023-24 – 12.23 ಕೋಟಿ ( 12 ಕೋಟಿ 23 ಲಕ್ಷದ 44 ಸಾವಿರದ 365 ರೂ. )
* 2024-25 – 21.11 ಕೋಟಿ ( 21 ಕೋಟಿ 11 ಲಕ್ಷದ 38 ಸಾವಿರದ 784 ರೂ. )
* 2025 ಏಪ್ರಿಲ್‌ನಿಂದ ನವೆಂಬರ್ – 14.03 ಕೋಟಿ ( 14 ಕೋಟಿ 03 ಲಕ್ಷದ 41 ಸಾವಿರದ 198 ರೂ.)
* ಒಟ್ಟು ಖರ್ಚು – 47.38 ಕೋಟಿ (47 ಕೋಟಿ 38 ಲಕ್ಷದ 24 ಸಾವಿರದ 347 ರೂ.)


