ಬೆಂಗಳೂರು: ಎಫ್‌ಐಆರ್ (FIR) ಆದ ತಕ್ಷಣ ಸಿಎಂ (CM Siddaramaiah) ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆಗ್ರಹಿಸಿದ್ದಾರೆ.
ಮುಡಾ ಹಗರಣ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ ತೀರ್ಪಿನ ಬೆನ್ನಲ್ಲೇ ಜಯನಗರದ (Jayanagar) ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಹತ್ತರ ತಿರುವಿನ ದಿನವಾಗಿದೆ. ರಾಜ್ಯದ ಆಡಳಿತ ನಡೆಸುವ ಮುಖ್ಯಮಂತ್ರಿ ಮೇಲೆ ಆಪಾದನೆ ಬಂದು ಹೈಕೋರ್ಟ್ ಆದೇಶ ಆಗಿದೆ. ಜನ ಪ್ರತಿನಿಧಿಗಳ ಕೋರ್ಟ್ ಎಫ್‌ಐಆರ್ ಆಗಲಿ ಎಂದು ಹೇಳಿದೆ ಎಂದರು.ಇದನ್ನೂ ಓದಿ: ಸಿದ್ದರಾಮಯ್ಯನವರು ಕೂಡಲೇ ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಬೇಕು: ವಿಜಯೇಂದ್ರ ಆಗ್ರಹ
Advertisement
Advertisement
ನಮ್ಮ ಮೇಲೆ ಆಪಾದನೆ ಇಲ್ಲ. ಇದು ಬಿಜೆಪಿ ಪ್ರೇರಿತ ಎಂದು ರಾಜಕೀಯ ದಾಳ ಹೂಡಿದ್ದರು. ರಾಜಭವನ ಅನುಮತಿ ಕೊಟ್ಟ ತಕ್ಷಣ ರಾಜಭವನ ಕಡೆ ಕಾಂಗ್ರೆಸ್ ಅವರು ತಿರುಗಿಬಿಟ್ಟರು. ರಾಜಭವನವನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಸ್ಫೋಟಿಸುತ್ತೀವಿ ಎಂದು ಕಾಂಗ್ರೆಸ್ ಅವರು ವಿಜೃಂಭಣೆ ಮಾಡಿದ್ದರು. ಈಗ ತನಿಖೆಗೆ ಸೂಕ್ತ ಎಂದು ಆದೇಶ ಆಗಿದೆ ಎಂದು ಹೇಳಿದರು.
Advertisement
ಒರಿಜಿನಲ್ ಕೇಸ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇತ್ತು. ಈಗ ಜನಪ್ರತಿನಿಧಿಗಳ ನ್ಯಾಯಾಲಯ ಸ್ಟೇಟ್‌ಮೆಂಟ್ ಕೊಟ್ಟಿದೆ. ಗರ್ವನರ್ ಹೇಳಿದ್ದರಲ್ಲಿ ಸತ್ಯಾಂಶ ಕಾಣುತ್ತಿದೆ ಎಂದು ಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಅವರು ಇನ್ನೂ ಯಾವುದಕ್ಕೇ ಕಾಯುತ್ತಿದ್ದಾರೆ. ಬಿಜೆಪಿ ಕೇಸ್ ಹಾಕಿಲ್ಲ. ಕೇಸ್ ಹಾಕಿರುವುದು ಆರ್‌ಟಿಐ ಕಾರ್ಯಕರ್ತರು. ಬಿಜೆಪಿಯದ್ದು ಸೇಡಿನ ರಾಜಕಾರಣ. ಗರ್ವನರ್ ಅವರು ಬಿಜೆಪಿ ಕೇಂದ್ರ ಎಂದಿದ್ದರು. ಈಗ ಎರಡೂ ನ್ಯಾಯಾಲಯ ಹೇಳಿದೆ ಏನು ಹೇಳ್ತೀರಾ ಎಂದು ಪ್ರಶ್ನಿಸಿದರು.
Advertisement
ಇದೇ ವೇಳೆ ಪರಮೇಶ್ವರ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಲೋಕಾಯುಕ್ತ ಪೊಲೀಸ್ ಕರ್ನಾಟಕ ಪೊಲೀಸ್ ಅಂಡರ್‌ನಲ್ಲೇ ಬರುತ್ತದೆ. ಪರಮೇಶ್ವರ್ ಅವರು ಲೋಕಾಯುಕ್ತ ಸ್ವಾತಂತ್ರ‍್ಯ ಸಂಸ್ಥೆ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಯಾರು? ನಾವು ಸಿಬಿಐಗೆ ವಹಿಸಿ ಎಂದು ಆಗ್ರಹ ಮಾಡುತ್ತೇವೆ ಎಂದರು.ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೇಳೋ ವಿಪಕ್ಷಗಳಿಗೆ ನೈತಿಕತೆ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್