ಯಾದಗಿರಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೇರೂರಲ್ಲಿ ನಿಗದಿಯಾಗಿದ್ದ ಗ್ರಾಮ ವಾಸ್ತವ್ಯ ರದ್ದಾಗಿದ್ದಕ್ಕೆ ಸಿಎಂ ಕ್ಷಮೆ ಕೇಳಿದ್ದಾರೆ.
ಇಂದು ನಡೆಯಬೇಕಿದ್ದ ಕಲಬುರಗಿ ಜಿಲ್ಲೆಯ ಹೇರೂರು ಬಿ ಗ್ರಾಮದ ಗ್ರಾಮ ವಾಸ್ತವ್ಯ ಸ್ಥಗಿತಗೊಂಡ ಬಗ್ಗೆ ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಸಿಎಂ, ನಾನು ಬರುತ್ತೇನೆಂದು ಕಲಬುರಗಿ ಜಿಲ್ಲೆಯ ಜನ ತುಂಬಾ ನಿರೀಕ್ಷೆ ಇಟ್ಟಿದ್ದರು. ಆದರೆ ಅಲ್ಲಿ ಭಾರೀ ಮಳೆಯ ಕಾರಣ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಮಧ್ಯರಾತ್ರಿ 2 ಗಂಟೆಯ ತನಕ ಡಿ.ಸಿ ಮತ್ತು ಸಚಿವರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಷ್ಟೇ ಪ್ರಯತ್ನ ಪಟ್ಟರೂ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದ ಮೊದಲಿಗೆ ನಾನು ಹೇರೂರು ಗ್ರಾಮ ಜನರಿಗೆ ಕ್ಷಮೆ ಕೇಳುತ್ತೆನೆ. ಆದರೆ ಮಳೆ ಬಂದಿರುವುದು ಖುಷಿಯಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಜುಲೈ ತಿಂಗಳಲ್ಲಿ ನಡೆಯುವ ಅಧಿವೇಶನ ಸಮಯ ನೋಡಿಕೊಂಡು ದಿನಾಂಕ ತಿಳಿಸುತ್ತೇನೆ. ಯಾದಗಿರಿ ಜಿಲ್ಲೆಯ ಗ್ರಾಮ ವಾಸ್ತವ್ಯದಲ್ಲಿ ಸಾಕಷ್ಟು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಶುಕ್ರವಾರದ ಜನತಾದರ್ಶನದಲ್ಲಿ ಕೆಲವನ್ನು ಬಗೆಹರಿಸಿದ್ದೇನೆ ಎಂದರು. ಇದನ್ನೂ ಓದಿ: ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ
Advertisement
ನಿನ್ನೆ ಸ್ವೀಕರಿಸಿದ ಅರ್ಜಿಗಳ ವರ್ಗಿಕರಣ ಮಾಡಲಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಯ ಅರ್ಜಿಗಳನ್ನ ಡಿಸಿ, ಸಿಇಒ ವಿಲೇವಾರಿ ಮಾಡಲಿದ್ದಾರೆ. ಉದ್ಯೋಗ ಅವಕಾಶ ನೀಡಬೇಕೆಂದು ಬೇಡಿಕೆ ಇರೋ 100 ಮನವಿಗಳಿವೆ. ಖಾಸಗಿ ವ್ಯಕ್ತಿಗಳೊಂದಿಗೆ ಚರ್ಚಿಸಿ ಉದ್ಯೋಗ ಕಲ್ಪಿಸಲಾಗುತ್ತದೆ. ದೀರ್ಘಾವಧಿಯ ಕಾರ್ಯಕ್ರಮಗಳಿಗೆ ಶೀಘ್ರವೇ ಚಾಲನೆ ನೀಡಲಾಗುತ್ತದೆ. ಶಾಲೆಗೆ ಹೋಗಲು ಬಸ್ ಕೇಳಿದ್ದಾರೆ. ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.
Advertisement
ಇದೇ ವೇಳೆ ಅಪಘಾತದಲ್ಲಿ ದೇಹದ ಸ್ವಾಧೀನ ಕಳೆದುಕೊಂಡ ಭೀಮಾರೆಡ್ಡಿಗೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ವಿತರಿಸಿದ್ದಾರೆ. ಈ ಪರಿಹಾರದ ಚೆಕ್ ಅನ್ನು ಸಿಎಂ ಅವರು ಭೀಮಾರೆಡ್ಡಿ ಪೋಷಕರ ಕೈಗೆ ನೀಡಿದ್ದಾರೆ. ನಂತರ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅರಳಿ ಸಸಿ ನೆಟ್ಟು ಸಿಎಂ ನೀರು ಹಾಕಿದರು. ಇದೇ ವೇಳೆ ಗಾರ್ಡ್ ಆಫ್ ಆನರ್ ಮೂಲಕ ಸಿಎಂಗೆ ಯಾದಗಿರಿ ಜಿಲ್ಲಾಡಳಿತ ಗೌರವ ಸಮರ್ಪಣೆ ಮಾಡಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]