– ಕ್ಯಾಬಿನೆಟ್ ತೀರ್ಮಾನ ಅನುಕೂಲಕರವಾಗಿರುತ್ತೆ ಅಂತ ಭಾವಿಸಿದ್ದೇನೆ: ಹರಿಪ್ರಸಾದ್
ಬೆಂಗಳೂರು: ಕಾಂತರಾಜು ಸಮಿತಿ ವರದಿ (Kantaraj Committee Report) ಜಾರಿಗೊಳಿಸುವಂತೆ ಹಿಂದುಳಿದ ವರ್ಗಗಳ ನಾಯಕರು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಅಕ್ಟೋಬರ್ 18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದರು.
ವಿಧಾನಸೌಧದಲ್ಲಿಂದು (Vidhana Soudha) ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು. ಸಭೆಯಲ್ಲಿ ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್, ಹೆಚ್.ಎಂ ರೇವಣ್ಣ, ಜಯಪ್ರಕಾಶ್ ಹೆಗ್ಡೆ, ಕಾಂತರಾಜು, ಬೋಸರಾಜು, ರಾಘವೇಂದ್ರ ಹಿಟ್ನಾಳ್, ದ್ವಾರಕನಾಥ್, ಬೈರತಿ ಸುರೇಶ್, ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಾಂತರಾಜ್ ಸಮಿತಿ ವರದಿ ಜಾರಿ ಮಾಡುವಂತೆ ಒತ್ತಾಯ ಹೇರಲಾಯಿತು. ಇದೇ ವೇಳೆ ಸಿಎಂ ಪರ ಹಿಂದ ವರ್ಗಗಳು ನಿಲ್ಲುವುದಾಗಿ ನಿಯೋಗದಿಂದ ಭರವಸೆಯನ್ನೂ ನೀಡಲಾಯಿತು. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಆತಂಕ ಬೇಡ – ಅನಾರೋಗ್ಯದ ಬಗ್ಗೆ ರತನ್ ಟಾಟಾ ಸ್ಪಷ್ಟನೆ
Advertisement
Advertisement
ಸಭೆಯ ಬಳಿಕ ಮಾತನಾಡಿದ ಸಿಎಂ, ಕುಮಾರಸ್ವಾಮಿ (HD Kumaraswamy) ಅವರ ಅವಧಿಯಲ್ಲಿ ವರದಿ ಕೊಡಲು ಕಾಂತರಾಜು ಸಮಯ ನಿಗದಿ ಮಾಡಿದ್ದರು. ಆದರೆ ಕುಮಾರಸ್ವಾಮಿ ವರದಿ ತೆಗೆದುಕೊಳ್ಳಲಿಲ್ಲ. ಈಗ ನಮ್ಮ ಅವಧಿಯಲ್ಲಿ ವರದಿ ಜಾರಿಗೆ ಮನವಿ ಮಾಡಿದ್ದಾರೆ. ಜಯಪ್ರಕಾಶ್ ಹೆಗ್ಡೆ ವರದಿ ಕೊಟ್ಟಿದ್ದಾರೆ. ವರದಿ ಜಾರಿಗೆ ಒತ್ತಾಯ ಇದೆ. ವಾರದ ಹಿಂದೆ ನಾನೇ ಹೇಳಿದ್ದೆ. ವರದಿ ಜಾರಿ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತಿರ್ಮಾನ ಮಾಡ್ತೇನೆ ಅಂದಿದ್ದೆ. ಇವತ್ತು ಹಿಂದುಳಿದ ವರ್ಗಗಳ ನಾಯಕರು ಒತ್ತಾಯ ಮಾಡಿದ್ದಾರೆ. 10 ಸಂಪುಟ ಸಭೆಯಲ್ಲಿ ಇಡಲ್ಲ. ಅ.18ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಇಡ್ತೇನೆ. ಕ್ಯಾಬಿನೆಟ್ ಹೇಗೆ ಹೇಳುತ್ತೋ ಹಾಗೆ ಮಾಡ್ತೇವೆ. ಸಂಪುಟ ನಿರ್ಣಯದಂತೆ ತೀರ್ಮಾನ ಕೈಗೊಳ್ತೀವಿ ಎಂದರು.
Advertisement
Advertisement
ಇದು ಹಿಂದುಳಿದ ವರ್ಗಗಳ ಸಮೀಕ್ಷೆ ಮಾತ್ರ ಅಲ್ಲ, ಏಳು ಕೋಟಿ ಜನರ ಸಮೀಕ್ಷೆ. ದೇಶದಲ್ಲಿ ಮೊದಲ ಬಾರಿಗೆ ಇಂಥ ಸಮೀಕ್ಷೆ ರಾಜ್ಯದಲ್ಲಿ ನಡೆದಿದೆ. ನಾನು ಈ ವರದಿ ನೋಡಿಲ್ಲ, ಓದಿಲ್ಲ. ಈ ಹಿಂದೆ ವರದಿ ಸ್ವೀಕಾರಕ್ಕೆ ಕುಮಾರಸ್ವಾಮಿ, ನಂತರ ಬಿಜೆಪಿ ಸರ್ಕಾರವೂ ಒಪ್ಪಲಿಲ್ಲ. ಮತ್ತೆ ನಾವು ಅಧಿಕಾರಕ್ಕೆ ಬಂದ ನಂತರ ವರದಿ ಪಡೆದಿದ್ದೇವೆ. ವರದಿ ಜಾರಿಗೆ ಬಹಳ ಒತ್ತಡ ಇದೆ. ಅಕ್ಟೋಬರ್ 18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬಸ್‌ಗೆ ಬೈಕ್ ಅಡ್ಡಬಂದಿದ್ದಕ್ಕೆ ಡ್ರೈವರ್, ನಿರ್ವಾಹಕನ ಜೊತೆ ಬೈಕ್ ಸವಾರನ ಹೊಡೆದಾಟ
ತೀರ್ಮಾನ ಅನುಕೂಲಕರವಾಗಿರುತ್ತೆ ಅಂತ ಭಾವಿಸಿದ್ದೇನೆ:
ಸಭೆಯ ಬಳಿಕ ಪರಿಷತ್ ಸದಸ್ಯ ಹರಿಪ್ರಸಾದ್ ಮಾತನಾಡಿ, ಸಿಎಂ ಎಲ್ಲರಿಗೂ ಭರವಸೆ ನೀಡಿದ್ದಾರೆ. ಹಿಂದುಳಿದ ವರ್ಗದ ಆಯೋಗದ ವರದಿಯನ್ನ ಚರ್ಚಿಸೋದಾಗಿ ಹೇಳಿದ್ದಾರೆ. ಕ್ಯಾಬಿನೆಟ್‌ನಲ್ಲಿಟ್ಟು ಅದನ್ನ ಪರಿಶೀಲಿಸಿ ಕ್ರಮ ಜರುಗಿಸೋದಾಗಿ ಹೇಳಿದ್ದಾರೆ. ಕ್ಯಾಬಿನೆಟ್‌ನಲ್ಲಿ ಬರುವ ತೀರ್ಮಾನ ಅನುಕೂಲಕರವಾಗಿರತ್ತೆ ಅಂತ ಭಾವಿಸುತ್ತೇವೆ. 170 ಕೋಟಿ ರೂ.ನಲ್ಲಿ ಈ ಸಮೀಕ್ಷೆ ಆಗಿದೆ. ಇದು ಸಮಗ್ರ ಕರ್ನಾಟಕ ಜನತೆಯನ್ನ ಒಳಗೊಂಡು, ಎಲ್ಲರ ಸ್ಥಿತಿಗತಿಗಳನ್ನ ಶೈಕ್ಷಣಿಕವಾಗಿ ಆರ್ಥಿಕವಾಗಿ ಅಳತೆ ಮಾಡಲಾಗಿದೆ. ಈ ವರದಿಯಲ್ಲಿ ಸಮೀಕ್ಷೆಯಲ್ಲಿ ಎಲ್ಲರ ವಿಚಾರಗಳಿವೆ. ಇದಕ್ಕೆ ಲಿಂಗಾಯತ ದಲಿತರು, ಹೊರತಾಗಿಲ್ಲ. ದುರ್ಬಲ ವರ್ಗದವರಿಗೆ ಮೀಸಲಾತಿ ಕೊಡಲು ಇದರಿಂದ ಸಾಧ್ಯ. ವರದಿ ಜಾರಿ ಆದ ಮೇಲೆ, ಚರ್ಚೆ ಸಮಯದಲ್ಲಿ ಅದು ವೈಜ್ಞಾನಿಕ ವೋ ಇಲ್ಲವೋ ಗೊತ್ತಾಗುತ್ತೆ ಎಂದು ತಿಳಿಸಿದರು.
ಸಭೆಯ ಬಳಿಕ ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ನಾವು ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡ್ತೇವೆ ಅನ್ನುವ ಸಿಎಂ ನಿಲುವನ್ನು ಸ್ವಾಗತ ಮಾಡ್ತೇವೆ. ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ. ಸಭೆಯಲ್ಲಿ ಬಿಜೆಪಿ ನಿಲುವು ಏನು ಅಂತ ತಿಳಿಸಿದ್ದೇನೆ. ವರದಿ ಸಂಪುಟದಲ್ಲಿ ಚರ್ಚೆ ಆಗಲಿ, ವರದಿಯಲ್ಲಿ ಏನಿದೆ ಅಂತ ಗೊತ್ತಾದ ಮೇಲೆ ಬಿಜೆಪಿ ಮುಂದಿನ ನಡೆ ಇಡಲಿದೆ ಎಂದು ಹೇಳಿದರು.