ಸಿಎಂ ಬಿಎಸ್‍ವೈ ಕಾವೇರಿ ನಿವಾಸದಲ್ಲಿ ಕಾಮಧೇನು ವಾಸ್ತವ್ಯ!

Public TV
1 Min Read
CM BSY COW copy

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕಾವೇರಿ ನಿವಾಸಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಲಚಗೆರೆ ಗ್ರಾಮದಿಂದ ಗೀರ್ ತಳಿಯ ಮೂರು ಕಾಮಧೇನುಗಳು ಶುಭ ಶುಕ್ರವಾರದ ಅಮೃತ ಗಳಿಗೆಯಲ್ಲಿ ಪ್ರವೇಶ ಮಾಡಿವೆ.

CM BSY COW a copy

ಗುಜರಾತಿನಿಂದ ತಂದು ನೆಲಮಂಗಲ ತಾಲೂಕಿನ ಯಲಚಗೆರೆಯ ಮುಖಂಡ ಎಂಬಿಟಿ ರಾಮಕೃಷ್ಣಪ್ಪರವರ ತೋಟದಲ್ಲಿ ಸಾಕಲಾಗಿದ್ದ ಗೀರ್ ತಳಿಯ ಹಸುಗಳನ್ನು ಇಂದು ಶುಕ್ರವಾರ ಸಂಜೆ ಹಸುಗಳನ್ನು ಬೆಂಗಳೂರಿನ ಸಿಎಂ ಮನೆಗೆ ಬರು ಮಾಡಿಕೊಳ್ಳಲಾಗಿದೆ. ಗಿರ್‍ತಳಿಯ ಒಂದು ಹಸು, ಕರು ಹಾಗೂ 7 ತಿಂಗಳ ಗರ್ಭದರಿಸಿರುವ ಹಸುವನ್ನು ಟೆಂಪೋ ಮೂಲಕ ಕಾವೇರಿ ನಿವಾಸಕ್ಕೆ ರವಾನೆ ಮಾಡಲಾಯಿತು.

ಗಿರ್ ತಳಿಯ ಹಸುವಿನ ಹಾಲು ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಶಾಸಕರು ಹಾಗೂ ಸಚಿವರು ಸಹ ಗಿರ್ ತಳಿಯ ಹಸುಗಳ ಸಾಕಲು ಮುಂದಾಗಿದ್ದಾರೆ. ಸಿಎಂ ಆಪ್ತಕಾರ್ಯದರ್ಶಿ ವಿಶ್ವನಾಥ್ ಕೂಡ ಎರಡು ಹಸು ಖರೀದಿಸಿದ್ದು ಮುಖ್ಯಮಂತ್ರಿಗಳು ಒಲವು ಗಿರ್ ಹಸುಗಳ ಕಡೆ ಮೂಡಿದೆ ಎನ್ನಲಾಗಿದೆ. ಕಾವೇರಿ ನಿವಾಸದಲ್ಲಿ ಈಗಾಗಲೇ ನಿರ್ಮಾಣವಾಗಿದ್ದ ಹಸುವಿನ ಕೊಟ್ಟಿಗೆಯನ್ನು ರಿಪೇರಿ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿಎಂ ನಿವಾಸಕ್ಕೆ ಇದೇ ಹಸುವಿನಿಂದ ಹಾಲನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *