ಚಿಕ್ಕಮಗಳೂರು: ಮಕ್ಕಳಿಗೆ ಗೊತ್ತಾಗಬೇಕಿರುವುದು ಹೇಗೆ ಬದುಕಬೇಕು, ಈ ದೇಶ ಯಾವ ರೀತಿ ಧರ್ಮದ ಆಧಾರದ ಮೇಲಿತ್ತು ಎನ್ನುವುದು. ಹೀಗಾಗಿ ಭಗವದ್ಗೀತೆಯನ್ನು ಪಠ್ಯಪುಸ್ತಕಕ್ಕೆ ತರಬೇಕು ಎನ್ನುವ ಬಗ್ಗೆ ಸರ್ಕಾರ ಆಲೋಚನೆ ಮಾಡುತ್ತಿರುವಲ್ಲಿ ವಾಸ್ತವಿಕತೆ ಇದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೇಳಿದರು.
1947ರಲ್ಲಿ ಸ್ವಾತಂತ್ರ‍್ಯದ ಬಳಿಕ ಬಂದ ಮೊದಲ ಸರ್ಕಾರ ಭಾರತಕ್ಕೆ ಆಕ್ರಮಣಾಕಾರರಾಗಿ ಬ್ರಿಟಿಷರು, ಮೊಘಲರು, ಡಚ್ಚರು ಬಂದಿದ್ದರು ಎಂದು ತೋರಿಸಬೇಕಿತ್ತು. ನಾನು-ನೀವು ಓದಿರೋ ಪಾಠದಲ್ಲಿ ಯಾವನೋ ಲಾರ್ಡ್ ವೆಲ್ಲೆಸ್ಲಿ, ಲಾರ್ಡ್ ಕರ್ಜನ್‌ನನ್ನು ತಂದು ಅವರನ್ನೇ ಲಾರ್ಡ್ ಎಂದು ಹೇಳಿಕೊಟ್ಟಿರುವುದು ದುರಂತ. ಅಲೆಕ್ಸಾಂಡರ್‌ನನ್ನು ಮಕ್ಕಳಿಗೆ ಗ್ರೇಟ್ ಎಂದು ಹೇಳಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗೆ ಹೇಳುತ್ತಿರುವ ಪಾಠವೇ ಸರಿಯಿಲ್ಲ ಎಂದರು. ಇದನ್ನೂ ಓದಿ: ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜಪಾನ್ 3.2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ: ಮೋದಿ
Advertisement
Advertisement
ಇದೀಗ ತಡವಾಗಿಯಾದರೂ ಈ ದೇಶದ ಒಳಗಡೆ ಈ ರೀತಿ ಆಲೋಚನೆ ಮಾಡುವಂತಹ ಒಂದು ನಾಯಕತ್ವ ಬಂದಿದೆ. ಆ ನಾಯಕತ್ವಕ್ಕೆ ಧನ್ಯವಾದ. ಕರ್ನಾಟಕ ಮಾತ್ರವಲ್ಲ, ದೇಶದ ತುಂಬಾ ಇದೇ ರೀತಿಯ ನಾಯಕತ್ವ ಬರಬೇಕು. ದೇಶದ ಧರ್ಮಗ್ರಂಥಗಳಾದ ರಾಮಾಯಣ, ಮಹಾಭಾರತವೇ ನಮಗೆ ಆಧಾರಸ್ತಂಭ. ಅವು ಒಂದೇ ನದಿಯ ಎರಡು ದಂಡೆಗಳು. ಕೇವಲ ಭಗವದ್ಗೀತೆ ಅಲ್ಲ. ರಾಮಾಯಣ-ಮಹಾಭಾರತದ ಎಲ್ಲಾ ಅಂಶಗಳೂ ಪಠ್ಯದಲ್ಲಿ ಬರಬೇಕು. ಆಗ ಧರ್ಮದ ಆಧಾರದ ಮೇಲೆ ದೇಶ ಉಳಿಯುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್ ಇವೆಂಟ್ ತಡವಾಗಿ ಆರಂಭ
Advertisement
ಮಹಾಭಾರತ-ರಾಮಾಯಣ ಒಂದು ನದಿಯ ಎರಡು ದಂಡೆಗಳಿದ್ದಂತೆ. ಭಾರತ ಎರಡು ದಂಡೆಗಳ ಮಧ್ಯೆ ಹರಿಯುವ ನದಿ. ರಾಮಾಯಣ ಹಾಗೂ ಮಹಾಭಾರತ ನಿಜವಾಗಿ ನಡೆದಿರುವಂತಹ ಎರಡು ಘಟನೆಗಳು ಎನ್ನುವುದು ನಮ್ಮ ನಂಬಿಕೆ. ಶ್ರೀಕೃಷ್ಣ ಭಗವದ್ಗೀತೆಯನ್ನು ಜನ ಧರ್ಮದ ಆಧಾರದಲ್ಲಿ ಬದುಕಬೇಕೆಂದು ಹೇಳಿದ್ದಾರೆಯೇ ವಿನಃ ಬೇರೇನಕ್ಕೂ ಅಲ್ಲ ಎಂದರು.