ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ ನಕಲು ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಾಘವೇಂದ್ರ ಬಂಧಿತ ಆರೋಪಿ. ಕೆಎಎಸ್ ಅಧಿಕಾರಿ ಒಬ್ಬರಿಗೆ ಪೋಸ್ಟಿಂಗ್ ನೀಡುವಂತೆ ನಕಲಿ ಟಿಪ್ಪಣಿ ತಯಾರಿಸಿದ್ದರು. ಸಿಎಂ ಆಫೀಸ್ ಹೆಸರಲ್ಲಿ ನಕಲಿ ಟಿಪ್ಪಟಿ ಸೃಷ್ಟಿ ಮಾಡಲಾಗಿತ್ತು.
Advertisement
ವಿಧಾನಸೌಧದ ಸಚಿವಾಲಯದಿಂದ ದೂರು ನೀಡಲಾಗಿತ್ತು. ದೂರಿನ ಅನ್ವಯ ಕೇಸ್ ದಾಖಲು ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ರಾಘವೇಂದ್ರ ಹಾವೇರಿಯ ರಾಣೇಬೆನ್ನೂರು ಮೂಲದವರು.
Advertisement
ಈ ಹಿಂದೆ ರಾಜ್ಯದ ಹಲವಾರು ಎಂಎಲ್ಎಗಳ ಬಳಿ ಪಿಎ ಆಗಿ ಕೆಲಸ ಮಾಡಿದ್ದರು. ಈಗ ಪೋಸ್ಟಿಂಗ್ ಕೊಡಿಸಲು ಹಣ ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.