ಪಾಟ್ನಾ: ಬೇರೆ ರಾಜ್ಯಗಳಿಂದ ಬರುವವರು ಮದ್ಯ ಸೇವಿಸಬೇಕು ಅಂದರೆ ಬಿಹಾರಕ್ಕೆ ಬರಲೇಬೇಡಿ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ರಾಜ್ಯಕ್ಕೆ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗಾಗಿ ಮದ್ಯ ನಿಷೇಧ ಕಾನೂನನ್ನು ಸಡಿಲಗೊಳಿಸುವ ಬಗ್ಗೆ ಸೋಮವಾರ ಸಸಾರಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಭೇಟಿ ನೀಡುವವರಿಗೆ ಮದ್ಯ ಸೇವಿಸಲು ಅವಕಾಶ ನೀಡಿ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ಸಾಧ್ಯವೇ? ನಾವು ಅವರಿಗೆ ಮದ್ಯಪಾನ ಮಾಡಲು ಅವಕಾಶ ನೀಡುತ್ತಿವಾ? ಬೇರೆ ರಾಜ್ಯಗಳಿಂದ ಬರುವವರು ಮದ್ಯ ನಿಷೇಧಿಸಿರುವುದರಿಂದ ಸಮಸ್ಯೆಯಾಗುತ್ತದೆ ಅಂದರೆ ಬಿಹಾರಕ್ಕೆ ಬರಲೇಬೇಡಿ. ನೀವು ಬಿಹಾರಕ್ಕೆ ಬರುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಡಿ.30ರಿಂದ ಕೇರಳದಲ್ಲಿ ನೈಟ್ ಕರ್ಫ್ಯೂ
Advertisement
Advertisement
ಹೊರ ರಾಜ್ಯದಿಂದ ಬರುವ ಪ್ರವಾಸಿಗರಿಗೋಸ್ಕರ ಮದ್ಯ ನಿಷೇಧ ಕಾನೂನನ್ನು ಸಡಿಲಗೊಳಿಸುವ ಪ್ರಶ್ನೆಯೇ ಇಲ್ಲ. ಮದ್ಯ ಸೇವಿಸುವವರು ಎಷ್ಟೇ ವಿದ್ಯಾವಂತರು, ತಿಳುವಳಿಕೆಯುಳ್ಳವರಾಗಿದ್ದರೂ ಅವರನ್ನು ಸಮರ್ಥರು ಎಂದು ಪರಿಗಣಿಸಲಾಗುವುದಿಲ್ಲ. ಅಂತವರು ಮಹಾತ್ಮ ಗಾಂಧಿ ಹಾಗೂ ಸಮಾಜದ ವಿರೋಧಿಗಳು ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಭಾರತದ 2ನೇ ಲಸಿಕೆ ತುರ್ತು ಬಳಕೆಗೆ WHO ಅನುಮೋದನೆ