ಬೆಳಗಾವಿ: ಜಿಲ್ಲೆಯಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ 10 ದಿನ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ. ಆದರೆ ಇಲ್ಲೂ ಸಿಎಂ ಕುಮಾರಸ್ವಾಮಿ ಅವರ ವಾಸ್ತವ್ಯಕ್ಕೆ ವಾಸ್ತು ದೋಷ ಅಡ್ಡಿ ಉಂಟಾಗಿದೆ.
ಸಿಎಂ ಕುಮಾರಸ್ವಾಮಿ ಅವರು ನಗರದ ನ್ಯೂ ಸರ್ಕ್ಯೂಟ್ ಹೌಸ್ ಬದಲು ವಿಟಿಯು ಗೆಸ್ಟ್ ಹೌಸ್‍ಗೆ ವಾಸ್ತವ್ಯ ಹೂಡಲು ಶಿಫ್ಟ್ ಆಗಲಿದ್ದಾರೆ. ನ್ಯೂ ಸರ್ಕ್ಯೂಟ್ ಹೌಸ್ ವಾಸ್ತು ಸರಿ ಇಲ್ಲ ಎಂದು ಸಿಎಂ ವಾಸ್ತವ್ಯಕ್ಕೆ ಹಿಂದೇಟು ಹಾಕಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ. ಸಚಿವ ಎಚ್.ಡಿ.ರೇವಣ್ಣ ಅವರ ಸೂಚನೆ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಟಿಯುಗೆ ಶಿಫ್ಟ್ ಆಗಿಲಿದ್ದಾರೆ.
Advertisement
Advertisement
ವಿಟಿಯು ಗೆಸ್ಟ್ ಹೌಸನ್ನು ಅಧಿಕಾರಿಗಳಾದ ಬೆಳಗಾವಿ ಪ್ರಾದೇಶಿಕ ಆಯುಕ್ತ ಮೇಘಣ್ಣವರ್, ಡಿಸಿ ಎಸ್.ಬಿ ಬೊಮ್ಮನಹಳ್ಳಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸರ್ಕ್ಯೂಟ್ ಹೌಸ್ ಸಿಎಂ ಕುಮಾರಸ್ವಾಮಿ ಅವರಿಗೆ ಕಾಯ್ದಿರಿಸಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಮಾಡಿದ್ದರು. ಸರ್ಕ್ಯೂಟ್ ಹೌಸ್ ವಾಸ್ತವ್ಯದಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.
Advertisement
ವಿಟಿಯು ಅತಿಥಿ ಗೃಹ ಬೆಳಗಾವಿಯಿಂದ 18 ಕಿ.ಮೀ ದೂರವಿದೆ. ಇದರಿಂದ ಸಿಎಂ ಭೇಟಿಗೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲದೇ ಸುವರ್ಣ ಸೌಧದಿಂದ ವಿಟಿಯು ಅತಿಥಿ ಗೃಹಕ್ಕೆ ಸಿಎಂ ನಿತ್ಯ ಓಡಾಟ ಮಾಡಬೇಕಾಗುತ್ತದೆ. ಬೆಳಗಾವಿಯ ಪ್ರಮುಖ ರಸ್ತೆಯಲ್ಲಿ ಸಿಎಂ ಓಟಾಡದಿಂದ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಕೂಡ ಇದೆ. ಇತ್ತ ಸಿಎಂ ಕುಮಾರಸ್ವಾಮಿ ಅವರು ಸಾರ್ವಜನಿಕರಿಂದ ದೂರು ಉಳಿಯಲು ವಿಟಿಯು ಆಯ್ಕೆ ಮಾಡಿಕೊಂಡ್ರಾ ಎಂಬ ಅನುಮಾನ ಮೂಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv