Connect with us

Districts

ರಾಜ್ಯದ ಸಂಸದರ ಜೊತೆ ಇಂದು ಸಿಎಂ ಸಭೆ

Published

on

ನವದೆಹಲಿ: ಮೂರು ದಿನಗಳ ಅಧಿಕೃತ ಭೇಟಿಗಾಗಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯದ ಸಂಸದರ ಜೊತೆ ಸಭೆ ನಡೆಸಲಿದ್ದಾರೆ.

ಇಂದು ಸಂಜೆ ಏಳು ಗಂಟೆಗೆ ಕರ್ನಾಟಕ ಭವನದ ಸಭಾಂಗಣದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ರಾಜ್ಯದ ಹಿತಾಸಕ್ತಿ ರಕ್ಷಣೆ ಹೇಗೆ? ಸದ್ಯದಲ್ಲೇ ಹೊರಬೀಳಲಿರುವ ಮಹದಾಯಿ ನ್ಯಾಯಾಧೀಕರಣದ ತೀರ್ಪು ಇನ್ನಿತರ ವಿಚಾರಗಳ ಕುರಿತಂತೆ ಸಂಸದರ ಜೊತೆ ಮಾತನಾಡಲಿದ್ದಾರೆ.

ನೀರಿನ ಬಳಕೆ ಹಾಗೂ ಬೆಳೆ ಪದ್ಧತಿ ಸೇರಿದಂತೆ ಹಲವು ವಿಚಾರದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ. ಪ್ರಾಧಿಕಾರ ಅಸ್ತಿತ್ವಕ್ಕೆ ತಂದಿರುವುದನ್ನು ಸಂಸತ್ತಿನಲ್ಲಿ ಒಕ್ಕೊರಲಿನಿಂದ ಪ್ರಶ್ನಿಸುವಂತೆ ಎಚ್‍ಡಿಕೆ ಸಂಸದರಿಗೆ ಮನವಿ ಮಾಡುವ ಸಾಧ್ಯತೆಯಿದೆ.

ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಮಂಗಳವಾರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ರಾಜ್ಯದ ಹೆದ್ದಾರಿ ಯೋಜನೆಗಳಿಗೆ ಅನುದಾನ ಒದಗಿಸುವ ಬಗ್ಗೆ ಚರ್ಚಿಸಿದರು.

 

 

Click to comment

Leave a Reply

Your email address will not be published. Required fields are marked *