DistrictsKarnatakaLatestMysuru

ನಾನು ಈ ಸ್ಥಾನಕ್ಕೆ ಬರಲು ತ್ರಿಪುರ ಸುಂದರಿ ಅಮ್ಮನೂ ಕಾರಣ: ಎಚ್‍ಡಿಕೆ

– ನನಗಾಗಿ ಏನೂ ಬೇಡಿಕೊಂಡಿಲ್ಲ

ಮೈಸೂರು: ನಾನು ಈ ಸ್ಥಾನಕ್ಕೆ ಬರಲು ತ್ರಿಪುರ ಸುಂದರಿ ಅಮ್ಮನೂ ಕಾರಣ. ದೇವಿಯ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಟಿ.ನರಸೀಪುರದ ಮೂಗೂರಿನಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ನಾನು ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿಯಾಗಿಯೇ ಮೂಗುರು ಒಳಗೆ ಬರುತ್ತೇನೆಂದು ಹರಕೆ ಹೊತ್ತಿದ್ದೆ. ಈಗ ಸಿಎಂ ಸ್ಥಾನ ಸಿಕ್ಕಿರುವುದುದರಿಂದ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿದರು.

ತ್ರಿಪುರ ಸುಂದರಿ ಅಮ್ಮನ ದೇವಾಲಯದ ಅಭಿವೃದ್ಧಿಗೆ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಇಡೀ ದೇವಾಲಯದ ಸಮಗ್ರ ಅಭಿವೃದ್ಧಿಯಾಗಬೇಕು. ತಾಯಿಯ ಆರ್ಶೀವಾದ ಇದ್ದರೆ ರಾಜ್ಯದಲ್ಲಿ ಮಳೆ ಬೆಳೆಯಾಗುತ್ತದೆ. ನನಗಾಗಿ ಏನೂ ಬೇಡಿಕೊಂಡಿಲ್ಲ. ನನ್ನಿಂದ ಈ ರಾಜ್ಯದ ಜನರ ಕಷ್ಟಗಳನ್ನ ಪರಿಹರಿಸುವಂತೆ ಬೇಡಿಕೊಂಡಿದ್ದೇನೆ ಎಂದರು.

ಮೈತ್ರಿ ಸರ್ಕಾರದ ಯೋಜನೆಗಳು ರಾಜ್ಯದ ಜನರಿಗೆ ತಲುಪಬೇಕು. ರೈತರು ಆತ್ಮಹತ್ಯೆಗೆ ಮುಂದಾಗಬಾರದು. ಯಾವುದೇ ಸಮಸ್ಯೆಗಳನ್ನು ಒಂದೇ ರಾತ್ರಿಗೆ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಸ್ವಲ್ಪ ಸಮಯದಲ್ಲಿ ಎಲ್ಲವೂ ಬದಲಾವಣೆಯಾಗಲಿದೆ ಎಂದು ಹೇಳಿದರು.

ಈ ವೇಳೆ ಸಿಎಂ ಕುಮಾರಸ್ವಾಮಿ ಅವರಿಗೆ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಪುಟ್ಟರಾಜು, ಶಾಸಕ ಅಶ್ವಿನ್‍ಕುಮಾರ್ ಸಾಥ್ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button