-ಏನಿದು ಟ್ರಬಲ್…? ಯಾಕಾಗಿ ಈ ಸಂಚಿನ ಆಟ….?
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆದಾಗಿನಿಂದಲೂ ಒಂದಿಲ್ಲೊಂದು ಗೊಂದಲಗಳು ಹುಟ್ಟಿಕೊಳ್ಳುತ್ತಲೇ ಇವೆ. ಸಂಪುಟ ವಿಸ್ತರಣೆಯಿಂದ ಹಿಡಿದು ಅನುದಾನದ ಹಂಚಿಕೆಯಲ್ಲಿಯೂ ಬೇಧಭಾವ ಮಾಡಲಾಗುತ್ತಿವೆ ಎಂದು ಕಾಂಗ್ರೆಸ್ ಕೆಲ ನಾಯಕರು ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಪ್ರತಿಬಾರಿ ಅಸಮಾಧಾನದ ಹೊಗೆ ಕಾಣುತ್ತಿದ್ದಂತೆ ಎರಡು ಪಕ್ಷಗಳ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಶಮನ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ತಲೆಬಿಸಿಯನ್ನು ಕಡಿಮೆ ಮಾಡಿಕೊಳ್ಳಲು ಸಿದ್ದರಾಮಯ್ಯ ಹೊಸ ತಂತ್ರವನ್ನು ಹೂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಯಾಕಾಗಿ ಈ ಸಂಚಿನ ಆಟ….?
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಎರಡನೇ ದರ್ಜೆ ಶಾಸಕರಂತೆ ಕಾಣಲಾಗುತ್ತೆ ಎಂಬ ಆರೋಪ ಮೊದಲಿನಿಂದಲು ಕೇಳಿ ಬರುತ್ತಿದೆ. ಶಾಸಕರ ಈ ಎಲ್ಲ ಅಸಮಧಾನ, ಆಕ್ರೋಶ ಶಮನಕ್ಕೆ ಡಿಸೆಂಬರ್ 8ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಮುಹೂರ್ತದಲ್ಲಿ ಶಾಸಕರ ಸಮಸ್ಯೆ ಪರಿಹಾರಕ್ಕೆ ಸ್ವತಃ ಸಿಎಂ ಕುಮಾರಸ್ವಾಮಿ ಅವರನ್ನೆ ಆಹ್ವಾನಿಸುವ ಮೂಲಕ ಸಿದ್ದರಾಮಯ್ಯ ಹೊಸ ದಾಳ ಉರುಳಿಸಿದ್ದಾರೆ.
Advertisement
Advertisement
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನ ಸಿದ್ದರಾಮಯ್ಯನವರು ಡಿಸೆಂಬರ್ 8 ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರು ಏನೆಲ್ಲಾ ಸಮಸ್ಯೆ ಎದುರಿಸುತ್ತಿದ್ದಾರೆ. ನೀವೇ ಸ್ವತಃ ಸಮಸ್ಯೆ ಆಲಿಸಿ ಎಂದು ಸಿಎಂ ಕುಮಾರಸ್ವಾಮಿಯನ್ನ ಸಿಎಲ್ ಪಿ ಸಭೆಗೆ ಆಹ್ವಾನಿಸಲಾಗಿದೆಯಂತೆ. ಸಿದ್ದರಾಮಯ್ಯ ಸರ್ಕಾರದ ವಿರುದ್ದ ಹಿಂದಿನಿಂದ ಕುತಂತ್ರ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ತೆರೆ ಎಳೆಯಲು ಮಾಜಿ ಸಿಎಂ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಇನ್ನೊಂದೆಡೆ ಸಚಿವ ಹೆಚ್.ಡಿ.ರೇವಣ್ಣ ಹಸ್ತಕ್ಷೇಪ, ಸಮರ್ಪಕ ಅನುದಾನ ಬಿಡುಗಡೆ ಸಮಸ್ಯೆ, ಕಾಂಗ್ರೆಸ್ ಶಾಸಕರ ಬೇಡಿಕೆಗೆ ಸ್ಪಂದನೆ ಇಲ್ಲದಿರುವುದು ಎಲ್ಲದಕ್ಕು ಸಿಎಂ ಕುಮಾರಸ್ವಾಮಿಯವರೆ ಶಾಸಕರಿಗೆ ಉತ್ತರ ಕೊಡಲು ವೇದಿಕೆ ಸೃಷ್ಟಿಯಾಗಿದೆ. ಹೀಗೆ ಶಾಸಕರಿಂದ ಸರ್ಕಾರದ ವಿರುದ್ಧ ದೂರು ಕೇಳಿ ಕೇಳಿ ಸುಸ್ತಾದ ಸಿದ್ದರಾಮಯ್ಯ ಈಗ ಸ್ವತಃ ಮುಖ್ಯಮಂತ್ರಿಗಳನ್ನ ತಮ್ಮ ಪಕ್ಷದ ಶಾಸಕರ ಮುಂದೆ ಕೂರಿಸಲು ವೇದಿಕೆ ಸಿದ್ದಪಡಿಸಿದ್ದಾರೆ. ಸಿಎಲ್ ಪಿ ಸಭೆಯಲ್ಲಿ ಭಾಗವಹಿಸುವ ಭರವಸೆ ನೀಡಿರುವ ಸಿಎಂ ಕಾಂಗ್ರೆಸ್ ಶಾಸಕರ ಚಕ್ರವ್ಯೂಹದಲ್ಲಿ ಸಿಲಿಕಿ ಒದ್ದಾಡ್ತಾರಾ…? ಇಲ್ಲಾ ಚಕ್ರವ್ಯೂಹ ಬೇದಿಸಿ ಸೈ ಅನ್ನಿಸಿಕೊಳ್ತಾರಾ ಅನ್ನೋದು ಸದ್ಯದ ಕುತೂಹಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv