ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭದ ದುಬಾರಿ ವೆಚ್ಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಲೆಕ್ಕ ಕೇಳಿದ್ದಾರೆ.
ದುಬಾರಿ ವೆಚ್ಚದ ಬಿಲ್ ನೋಡಿ ನೆರೆಯ ಆಂಧ್ರ ಸಿಎಂ ಕಕ್ಕಾಬಿಕ್ಕಿಯಾಗಿದ್ದಾರೆ. ನಾನು ಉಳಿದುಕೊಂಡಿದ್ದು ಕೇವಲ 4-5 ಗಂಟೆ ಮಾತ್ರವಾಗಿದ್ದು, ಉಳಿದುಕೊಳ್ಳಲು ಪ್ರೆಸಿಡೆನ್ಶಿಯಲ್ ಸೂಟ್‍ಕೊಟ್ಟಿದ್ದರು. ಹೀಗಾಗಿ ಇದ್ದ ಕೆಲವೇ ಗಂಟೆಗೆ 9 ಲಕ್ಷ ಬಿಲ್ ಹೇಗೆ ಮಾಡಿದ್ರು. ಈ ಕುರಿತು ತನಿಖೆ ಆಗಬೇಕು. ನಮ್ಮ ಹೆಸರಲ್ಲಿ ಸುಳ್ಳು ಲೆಕ್ಕ ಕೊಡಲು ಸಾಧ್ಯವಿಲ್ಲ. ನಾಲ್ಕೈದು ಗಂಟೆ ವಾಸ್ತವ್ಯಕ್ಕೆ ಇಷ್ಟೊಂದು ಖರ್ಚಾಗಿದ್ಯಾ ಅಂತ ಅವರು ಪ್ರಶ್ನಿಸಿದ ಅವರು ಲೆಕ್ಕ ಕೊಡುವಂತೆ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ.
ಚಂದ್ರಬಾಬು ನಾಯ್ಡು ತಾಜ್ ವೆಸ್ಟೆಂಡ್‍ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು 2 ಲಕ್ಷ ಬಿಲ್ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಚಂದ್ರಬಾಬು ಹೆಸರಲ್ಲಿ ಮತ್ತೆ ಮೂರು ಇನ್‍ವಾಯ್ಸ್‍ಗಳು ರೆಡಿ ಮಾಡಿರುವುದು ಪತ್ತೆಯಾಗಿದೆ. ಪ್ರತಿಯೊಂದು ಇನ್‍ವಾಯ್ಸ್‍ಗೆ 15 ಸಾವಿರ ರೂ. ಬಿಲ್ ಮಾಡಲಾಗಿದೆ. ಎಲ್ಲಾ ಸೇರಿಸಿದ್ರೂ ಆಗೋದು ಎರಡೂವರೆ ಲಕ್ಷ. ಆದ್ರೆ ಅದು ಹೇಗೆ 9 ಲಕ್ಷ ಬಿಲ್ ಮಾಡಿದ್ರು ಎಂಬ ಪ್ರಶ್ನೆಯೊಂದು ಉದ್ಭವವಾಗಿದೆ. ಇದನ್ನೂ ಓದಿ: 7 ನಿಮಿಷದ ಪ್ರಮಾಣವಚನ ಸಮಾರಂಭಕ್ಕೆ 42 ಲಕ್ಷ ರೂ. ಖರ್ಚು: ಯಾರಿಗೆ ಎಷ್ಟು ಖರ್ಚು? ಇಲ್ಲಿದೆ ಮಾಹಿತಿ
ಒಟ್ಟಿನಲ್ಲಿ ಪ್ರಮಾಣವಚನ ನೆಪದಲ್ಲಿ ಅಧಿಕಾರಿಗಳು ಫೇಕ್ ಬಿಲ್ ಸೃಷ್ಟಿಸಿ ದುಡ್ಡು ಹೊಡೆಯೋಕೆ ಹೊರಟಿದ್ದಾರಾ ಎಂಬ ಪ್ರಶ್ನೆಯೊಂದು ಎದುರಾಗಿದ್ದು, ಈ ಕುರಿತು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಇದನ್ನೂ ಓದಿ: ದುಂದುವೆಚ್ಚಕ್ಕೆ ಕಡಿವಾಣ ಹಾಕ್ತೀನಿ ಅಂದಿದ್ದ ಸಿಎಂ ಪ್ರಮಾಣವಚನಕ್ಕೆ ಖರ್ಚಾಗಿರೋದು ಬರೋಬ್ಬರಿ 42ಲಕ್ಷ ರೂ.!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews