– ಆಪರೇಷನ್ ಕಮಲ ನಡೆಸಲು ಕೋಟಿ ಕೋಟಿ ಎಲ್ಲಿಂದ ಬರುತ್ತೆ..!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಸಿಎಂ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮಂಡಿಸಿರುವ ಡೋಂಗಿ ಬಜೆಟ್ ರೀತಿ ನಾನು ಬಜೆಟ್ ಮಂಡಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಆಪರೇಷನ್ ಕಮಲ ನಡೆಸಲಾಗುತ್ತದೆ ಎಂಬ ಸುದ್ದಿಗಳ ನಡುವೆಯೇ ಇಂದು ಸಿಎಂ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‍ಡಿ ದೇವೇಗೌಡ ಅವರನ್ನು ನಗರದ ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
Advertisement
Advertisement
ಎಚ್‍ಡಿಡಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಎಚ್‍ಡಿಕೆ, ಬಿಜೆಪಿ ಅವರು ಆಪರೇಷನ್ ಮಾಡುತ್ತಿರುವುದು ದಿನನಿತ್ಯ ಮಾಹಿತಿ ಲಭಿಸುತ್ತಿದೆ. ನಿನ್ನೆ ಕೂಡ ಯಾವ ಯಾವ ಶಾಸಕರಿಗೆ ಎಷ್ಟು ಆಫರ್ ನೀಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇದೆ. ಈ ಬಗ್ಗೆ ಸ್ವತಃ ಶಾಸಕರೇ ಮಾಹಿತಿ ನೀಡಿದ್ದಾರೆ. ಆದರೆ ಆಪರೇಷನ್ ಕಮಲ ಮಾಡಲು ಬಿಜೆಪಿ ನಾಯಕರಿಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ ಎಂಬುವುದೇ ನನಗೆ ಶಾಕ್ ತಂದಿದೆ. ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ಕಪ್ಪು ಹಣ ತಡೆಯುತ್ತೇವೆ ಎಂದು ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ನಾಯಕರು ಶಾಸಕರಿಗೆ ನೀಡುವ ಆಫರ್ ನೋಡಿದ್ರೆ ಶಾಕ್ ಆಗುತ್ತದೆ. ನನ್ನ ಕಡೆಯಿಂದ ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡಲು ಅಡ್ಡಿ ಇಲ್ಲ, ಅವರು ಸಂತೋಷವಾಗಿ ಮಾಡಿಕೊಳ್ಳಲಿ ಎಂದರು.
Advertisement
ಡೋಂಗಿ ಬಜೆಟ್: ಪ್ರಧಾನಿ ಮೋದಿ ಅವರು ರೀತಿ ನಾನು ಡೋಂಗಿ ಬಜೆಟ್ ಮಂಡಿಸುವುದಿಲ್ಲ. ಉತ್ತಮ ಬಜೆಟ್ ಮಂಡಿಸುತ್ತೇನೆ. ನನ್ನ ಬಜೆಟ್ ಮೇಲೆ ಎಲ್ಲರೂ ನಿರೀಕ್ಷೆ ಇಟ್ಟುಕೊಳ್ಳಬಹುದು. ಎಲ್ಲರ ಪರವಾದ ಬಜೆಟ್ ಮಂಡಿಸುತ್ತೇನೆ. ಸ್ಟೀಲ್ ಬ್ರಿಡ್ಜ್ ಯೋಜನೆ ಮಾತ್ರಯನ್ನು ಮಾತ್ರ ಜನರ ಅಭಿಪ್ರಾಯಕ್ಕೆ ಬಿಡುತ್ತೇನೆ, ಆ ಮೂಲಕ ಅವರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಬಜೆಟ್ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv