-ತಾತ್ಕಾಲಿಕ ಖುಷಿ ಆದ್ರು ಸಿಗುತ್ತೆ ಅಂದ್ಕೊಂಡೆ, ಆದ್ರೆ ನಿರೀಕ್ಷೆ ಹುಸಿಯಾಗಿದೆ
ಬೆಂಗಳೂರು: ಕೇಂದ್ರ ಸರ್ಕಾರ ಬಿಜೆಟ್ ಮೇಲೆ ನಾನು ಹೆಚ್ಚಿನ ನಿರೀಕ್ಷೆ ಹೊಂದಿದ್ದೆ. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು, ನಮ್ಮ ಬಿಜೆಪಿ ನಾಯಕರು ರಾಜ್ಯಕ್ಕೆ ತಂದ ಕೊಡುಗೆ ಇದಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿದಾಗ ಬಿಜೆಪಿ ನಾಯಕರು ಅದನ್ನು ಲಾಲಿಪಪ್ ಎಂದರು. ಆದರೆ ಇಂದು 6 ಸಾವಿರ ಬಗ್ಗೆ ಅವರ ಅಭಿಪ್ರಾಯವೇನು? ಬಜೆಟ್‍ನಲ್ಲಿ ತಾತ್ಕಾಲಿಕ ಖುಷಿ ಆದ್ರು ಸಿಗುತ್ತೇ ಎಂಬ ಆಸೆ ಇತ್ತು. ಆದರೆ ನನ್ನ ಮೇಲೆ ಹಾಕಿದ ಒತ್ತಡವೂ ವ್ಯಕ್ತವಾಗಿದೆ. ಏಕೆಂದರೆ ನಗರ ಉಪನಗರ ರೈಲ್ವೇಗೆ ಒಪ್ಪಿಗೆ ಸಿಗುತ್ತೇ ಎಂಬ ಆಶ್ವಾಸನೆ ನೀಡಿದ್ದರು. ಆದರೆ ಅದಕ್ಕೂ ಅನುಮತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಕೇಂದ್ರ ಕಳೆದ 5 ಬಜೆಟ್‍ಗಳು ಕೂಡ ಸಾರ್ವಜನಿಕ ನಿರೀಕ್ಷೆಗೆ ಅನುಗುಣವಾಗಿ ಇರಲಿಲ್ಲ. ಈ ಬಾರಿ ಮುಂದಿನ ಚುನಾವಣೆಯಲ್ಲಿ ಮತ ಪಡೆಯಲಾದ್ರು ಜನರಿಗೆ ತಾತ್ಕಾಲಿಕ ಖುಷಿ ನೀಡವ ಯೋಜನೆ ಬರುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಬಜೆಟ್ ಹಣಕಾಸು ಇಲಾಖೆ ಅವರು ಮಾಡಿದ್ದಾರೋ ಅಥವಾ ಆರ್ ಎಸ್‍ಎಸ್, ಬಿಜೆಪಿ ಕೇಂದ್ರ ಕಚೇರಿ ಅವರು ಮಾಡಿದಂತೆ ಇದೆ ಎಂದರು.
Advertisement
ಕಳೆದ 5 ವರ್ಷಗಳಿಂದ ಆದಾಯ ಮಿತಿ ಹೆಚ್ಚಳ ಆಗಿರಲಿಲ್ಲ. ಅದು ಈ ವರ್ಷ ಮಾಡಿದ್ದಾರೆ ಅಷ್ಟೇ ಎಂದರು. ಅಲ್ಲದೇ ರೈತರಿಗೆ 6 ಸಾವಿರ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎಕರೆಗೆ 1,200 ರೂ.ಬರುತ್ತೆ, ಇದು ರೈತರಿಗೆ ತೀರಾ ಕಡಿಮೆ. ಆರು ಸಾವಿರದಿಂದ 75 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಅದರಲ್ಲಿ ಕರ್ನಾಟಕ ರೈತರಿಗೆ ಸುಮಾರು 3,579 ಕೋಟಿ ಲಾಭ ಆಗಬಹುದು ಎಂದು ಅಭಿಪ್ರಾಯ ಪಟ್ಟರು.
Advertisement
ರೈತ ಮುಖಂಡರು ಹಾಗೂ ಆರ್ಥಿಕ ತಜ್ಞರು ಬಜೆಟ್ ಸರಿ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ರೈತನಿಗೆ 48 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುತ್ತಿದ್ದೇವೆ. ಇದರಿಂದ 44 ಲಕ್ಷ ರೈತರಿಗೆ ಸಾಲಮನ್ನಾ ಆಗುತ್ತಿದೆ. ಆದರೆ ರೈತರಿಗೆ 2% ಬಡ್ಡಿ ವಿನಾಯ್ತಿ ಎಂದು ಕೇಂದ್ರ ಕ್ರಮ ಬರಿ ಬೋಗಸ್ ಅಷ್ಟೇ. ನಮ್ಮದು ಲಾಲಿ ಪಪ್ ಅಂದರೆ ಮೋದಿ ಬಜೆಟ್ ಬೊಂಬೆ ಮಿಠಾಯಿ ಬಜೆಟ್ ಎನ್ನಬಹುದಾ? ಎಂದು ಟಾಂಗ್ ಕೊಟ್ಟರು. ಅಲ್ಲದೇ 11 ಸಾವಿರ ಕೋಟಿ ರೂ. ಮೊತ್ತದಲ್ಲಿ ರೈತರಿಗೆ ವಿದ್ಯುತ್ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಆದರೆ ಹಾಲಿನ ಸಬ್ಸಿಡಿ 1,200 ಕೋಟಿ ರೂ. ನೀಡುತ್ತಿದ್ದೆ. ಇದನ್ನ ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಬರಗಾಲ ಇದ್ದರು ನಮ್ಮ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv