ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು, ಬಂಡೆಯ ರೀತಿ ಇದೆ ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಾವ್ಡೇಕರ್ ಹೇಳಿಕೆಗೆ ಉತ್ತರ ಕೊಡೋಕೆ ಆಗುತ್ತಾ? ಕಳೆದ ಆರು ತಿಂಗಳಿಂದಲೂ ಹೀಗೆ ಭೂಕಂಪ ಆಗುತ್ತದೆ ಎಂದು ಸೌಂಡ್ ಮಾಡುತ್ತಲೇ ಇದ್ದಾರೆ. ಅದರೆ ಇದೂವರೆಗೂ ಭೂಕಂಪದ ಎಫೆಕ್ಟ್ ಕಾಣಿಸಿಲ್ಲ. ನಮ್ಮ ಸರ್ಕಾರ ಭದ್ರವಾಗಿ ಬಂಡೆಯ ರೀತಿಯಲ್ಲಿದೆ. ಸರ್ಕಾರಕ್ಕೆ ಏನು ಮಾಡಲು ಸಾಧ್ಯವಿಲ್ಲವೆಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
Advertisement
Advertisement
ಜಾವ್ಡೇಕರ್ ಹೇಳಿದ್ದೇನು?
ರಾಜಸ್ಥಾನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಅವರು, ಕರ್ನಾಟಕ ರಾಜಕೀಯದಲ್ಲಿ ಯಾವಾಗ ಬೇಕಾದರೂ ಭೂಕಂಪ ಆಗಬಹುದು. ಈ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಆಗ್ತಿಲ್ಲ. ಹೀಗಾಗಿ ಜೆಡಿಎಸ್-ಕಾಂಗ್ರೆಸ್‍ನಲ್ಲಿ ಧಮಾಕ ಆಗೋದಂತೂ ನಿಶ್ಚಿತವಾಗಿದೆ. ಆದ್ರೆ ಆ ಧಮಾಕ ಯಾವಾಗ ಅಂತ ಯಡಿಯೂರಪ್ಪ ಅಷ್ಟೇ ಹೇಳಬಹುದು. ಕರ್ನಾಟಕದಲ್ಲಿ ನಮ್ಮದೇ ಅತೀ ದೊಡ್ಡ ಪಕ್ಷ. ನಮಗೆ 7 ಶಾಸಕರ ಸಂಖ್ಯೆಯಷ್ಟೇ ಕೊರತೆ ಇದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉತ್ತಮವಾದ ಸರ್ಕಾರ ನೀಡುತ್ತಿಲ್ಲವೆಂದು ಹೇಳಿದ್ದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv