ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜ್‍ಗೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿ ಪ್ರತಿಕ್ರಿಯಿಸಿದ್ದಾರೆ.
ಮೋದಿ ಅವರ ಚಾಲೆಂಜ್‍ಗೆ ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ “ನರೇಂದ್ರ ಮೋದಿ ಅವರೇ, ನನಗೆ ಗೌರವವಿದೆ ಹಾಗೂ ನನ್ನ ಆರೋಗ್ಯದ ಬಗ್ಗೆ ನೀವು ಕಾಳಜಿ ತೋರಿಸಿದ್ದಕ್ಕೆ ಧನ್ಯವಾದಗಳು. ನಾನು ಒಪ್ಪುತ್ತೇನೆ ದೈಹಿಕ ವ್ಯಾಯಾಮದಲ್ಲಿ ಆರೋಗ್ಯಕ್ಕೆ ತುಂಬಾ ಅವಶ್ಯಕತೆ ಇದೆ ಹಾಗೂ ನಮಗೆ ಅದು ಒಳ್ಳೆಯ ರೀತಿಯಲ್ಲಿ ಸಹಾಯವಾಗುತ್ತದೆ. ನನ್ನ ದಿನನಿತ್ಯದ ಜೀವನದಲ್ಲಿ ನಾನು ಯೋಗ ಹಾಗೂ ಟ್ರೇಡ್‍ಮಿಲ್ ಮಾಡುತ್ತೇನೆ” ಎಂದು ಹೇಳಿದ್ದಾರೆ.
Advertisement
ಇದರ ಜೊತೆಗೆ ನಾನು ರಾಜ್ಯದ ಫಿಟ್ನೆಸ್ ಗೆ ಹೆಚ್ಚು ಗಮನ ನೀಡುತ್ತೇನೆ ಹಾಗೂ ಅಭಿವೃದ್ಧಿಯ ವಿಷಯದಲ್ಲಿ ನಾನು ನಿಮ್ಮಿಂದ ಸಹಾಯ ನಿರೀಕ್ಷಿಸುತ್ತೇನೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
Advertisement
I am delighted to nominate the following for the #FitnessChallenge:
Karnataka’s CM Shri @hd_kumaraswamy.
India’s pride and among the highest medal winners for India in the 2018 CWG, @manikabatra_TT.
The entire fraternity of brave IPS officers, especially those above 40.
— Narendra Modi (@narendramodi) June 13, 2018
Advertisement
ಮೋದಿಯವರು ತಮ್ಮ ಫಿಟ್ನೆಸ್ ವಿಡಿಯೋ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ “ಇದು ನನ್ನ ಬೆಳಗ್ಗಿನ ವ್ಯಾಯಾಮಗಳು. ಯೋಗ ಹೊರತಾಗಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಿಂದ ಪ್ರೇರಣೆಗೊಂಡು ನಾನು ಟ್ರ್ಯಾಕ್‍ಗಳ ಮೇಲೆ ನಡೆಯುತ್ತೇನೆ. ಇದರ ಜೊತೆ ನಾನು ಉಸಿರಾಟದ ವ್ಯಾಯಾಮವನ್ನು ಮಾಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.
Advertisement
Dear @narendramodi ji
I am honoured& thankU very much for d concern about my health
I believe physical fitness is imptnt for all&support d cause. Yoga-treadmill r part of my daily workout regime.
Yet, I am more concerned about devlpment fitness of my state&seek ur support for it.
— CM of Karnataka (@CMofKarnataka) June 13, 2018
ತಮ್ಮ ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡಿದ ನಂತರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಭಾರತದ ಹೆಮ್ಮೆಯ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರಿಗೆ ಈ ಚಾಲೆಂಜ್ ನೀಡಿದರು.
ಮುಖ್ಯಮಂತ್ರಿಗಳ ಸಚಿವಾಲಯದಿಂದ ನಿರ್ವಹಣೆಯಾಗುವ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ತನ್ನ ವೈಯಕ್ತಿಕ ಆರೋಗ್ಯಕ್ಕಿಂತಲೂ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುವ ಕುಮಾರಸ್ವಾಮಿ ಚೆನ್ನಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಖಾತೆಯಿಂದ ಕುಮಾರಸ್ವಾಮಿಯವರ ವೈಯಕ್ತಿಕ ಖಾತೆಗೆ ಟ್ವೀಟ್ ಮಾಡಿದ್ದಾರೆ ಹೊರತು ಮುಖ್ಯಮಂತ್ರಿಗಳ ಖಾತೆಗೆ ಅಲ್ಲ. ಕುಮಾರಸ್ವಾಮಿಯವರ ಖಾತೆಯನ್ನು ನಿರ್ವಹಣೆ ಮಾಡುವವರು ಈ ವಿಚಾರವನ್ನು ಗಮನಿಸಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಎಚ್‍ಡಿಕೆಗೆ ಸವಾಲ್- ವಿಡಿಯೋ ನೋಡಿ
Amazing response @hd_kumaraswamy sir!! Personal fitness is one's personal issue. What people care about is the fitness of the state. #HumFitTohIndiaFit pic.twitter.com/jXc2v4Btei
— Priyanka Patil (@MissFurioso) June 13, 2018
https://twitter.com/shetty_shailesh/status/1006767339306614784
Well it was at personal level and bot at CM of Karnataka! You could have used your personal handler @hd_kumaraswamy to reply! As this handle keep changing owners!
— Chintan Shah (@chintan_rs) June 13, 2018