ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ಮಾಡಿರುವ ವಾಗ್ದಾಳಿಗೆ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಮೋದಿ ಮತ್ತೆ ಸುಳ್ಳು ಹೇಳುತ್ತಿದ್ದಾರೆ. ಯೋಧರನ್ನ ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ಅವರ ಸರ್ಕಾರ ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡಲು ಏನಿಲ್ಲದೆ ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ:ಸೈನಿಕರ ಬಗ್ಗೆ ಲಘುವಾಗಿ ಮಾತನಾಡಿದವರು ಮುಳುಗಿ, ಮುಳುಗಿ ಸಾಯ್ತಾರೆ – ಎಚ್‍ಡಿಕೆಗೆ ಮೋದಿ ತಿರುಗೇಟು
Advertisement
ರಾಜ್ಯ #BJP ಯ ಕುತಂತ್ರಿಪೋಸ್ಟ್ ಗೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ.ಆದರೂ ಪ್ರಧಾನಿ ಮೋದಿ ಅವರು ಈ ತಪ್ಪುಮಾಹಿತಿಗಳನ್ನೇ ನೆಚ್ಚಿಕೊಂಡಿರುವುದು ವಿಷಾದನೀಯ.ಸೈನಿಕರು, ದೇಶಪ್ರೇಮದ ಹೆಸರಲ್ಲಿ ಲಾಭಮಾಡಿಕೊಳ್ಳುವ ಅವರ ನಡೆ ಖಂಡಿತಾ ಸರಿಯಲ್ಲ.ತಮ್ಮಸರ್ಕಾರದ ಹೇಳಿಕೊಳ್ಳುವ ಸಾಧನೆ ಏನೂ ಇಲ್ಲದಕಾರಣ ಇಂತಹ ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ pic.twitter.com/I0luGQYM8Q
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 12, 2019
Advertisement
ಟ್ವೀಟ್‍ನಲ್ಲಿ ಏನಿದೆ?
ರಾಜ್ಯ ಬಿಜೆಪಿಯ ಕುತಂತ್ರಿ ಪೋಸ್ಟ್ ಗೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಆದರೂ ಪ್ರಧಾನಿ ಮೋದಿ ಅವರು ಈ ತಪ್ಪು ಮಾಹಿತಿಗಳನ್ನೇ ನೆಚ್ಚಿಕೊಂಡಿರುವುದು ವಿಷಾದನೀಯ. ಸೈನಿಕರು, ದೇಶಪ್ರೇಮದ ಹೆಸರಲ್ಲಿ ಲಾಭಮಾಡಿಕೊಳ್ಳುವ ಅವರ ನಡೆ ಖಂಡಿತ ಸರಿಯಲ್ಲ. ತಮ್ಮ ಸರ್ಕಾರ ಮಾಡಿರುವ ಹೇಳಿಕೊಳ್ಳುವ ಸಾಧನೆ ಏನೂ ಇಲ್ಲದ ಕಾರಣ ಇಂತಹ ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ ಎಂದು ಬರೆದು, ಈ ಬಗ್ಗೆ ತಾವು ಮಾತನಾಡಿರುವ ವಿಡಿಯೋ ಹಾಕಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ದೇವೇಗೌಡ್ರು ರಾಜಕೀಯ ಸನ್ಯಾಸ ಸ್ವೀಕರಿಸಿಲ್ಲ, ಈಗ ಮಗ ಸ್ವೀಕರಿಸುತ್ತಾರಾ: ರೇವಣ್ಣಗೆ ಮೋದಿ ಟಾಂಗ್
Advertisement
Advertisement
ಮೋದಿ ಹೇಳಿದ್ದೇನು?
ಗಂಗಾವತಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ಸೈನಿಕರು ಎರಡು ಹೊತ್ತಿನ ಊಟಕ್ಕಾಗಿ ದೇಶ ಕಾಯಲು ಹೋಗುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನು ನಾನು ನಿನ್ನೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ದೇಶದ ಸೇನೆಯ ವಿಚಾರದಲ್ಲಿ ಇಷ್ಟೊಂದು ಅಪಮಾನ ಮಾಡಬಾರದು. ಎರಡು ಹೊತ್ತು ಊಟ ಇಲ್ಲದವರು ಸೇನೆ ಸೇರಿದ್ದಾರೆ ಎನ್ನುವುದು ಸೈನಿಕರಿಗೆ ಮಾಡಿದ ಅಪಮಾನ ಎಂದು ಹೇಳಿ ಕಿಡಿಕಾರಿದ್ದರು.