ಉಡುಪಿ: ಸಿಎಂ ಕುಮಾರಸ್ವಾಮಿಗೆ ಕೋಪನೇ ಬರಲ್ಲ. ಅವರು ಜಗತ್ತಲ್ಲೇ ಕೋಪ ಮಾಡಿಕೊಳ್ಳದ ವ್ಯಕ್ತಿ ಅಂತ ಮಂಡ್ಯ ಸಂಸದ ಶಿವರಾಮೇಗೌಡ ಸಿಎಂ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
ಉಡುಪಿಯ ಕಾಪುವಿನಲ್ಲಿರುವ ಸಾಯಿರಾಧಾ ರೆಸಾರ್ಟ್ ಗೆ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆಗಮಿಸಿದ್ದು, ಅವರ ಆರೋಗ್ಯ ವಿಚಾರಿಸಲು ಸಂಸದ ಶಿವರಾಮೇಗೌಡ ಬಂದಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ಸಿಎಂಗೆ ಕೋಪ ಇಲ್ಲ. ಜಗತ್ತಿನಲ್ಲಿ ಕೋಪ ಮಾಡಿಕೊಳ್ಳದಿರುವ ವ್ಯಕ್ತಿ ಒಬ್ಬರಿದ್ದರೆ ಅದು ಕುಮಾರಸ್ವಾಮಿ ಎಂದರು. ಬಳಿಕ ಮಂಡ್ಯ ಚೆನ್ನಾಗಿದೆ, ಯಾವ ಟೆನ್ಶನ್ ಇಲ್ಲ ಎಂದು ತಿಳಿಸಿದರು.
Advertisement
Advertisement
ಕುಮಾರಸ್ವಾಮಿ ಹಾಗೂ ದೇವೇಗೌಡರ ಆರೋಗ್ಯ ವಿಚಾರಣೆಗೆ ಬಂದಿದ್ದೇನೆ. ಮಾಧ್ಯಮಗಳಿಂದ ಸಿಎಂ ದೂರವಿದ್ದಾರೆ. ಇದು ಸಿಎಂ ಅವರ ಖಾಸಗಿ ಭೇಟಿ. ಆರೋಗ್ಯದ ಚಿಕಿತ್ಸೆಗಾಗಿ ಉಡುಪಿಗೆ ಬಂದಿರುವುದರಿಂದ ನಿಮ್ಮ ಕೈಗೆ ಅವರು ಸಿಗುತ್ತಿಲ್ಲ ಎಂದು ತಿಳಿದರು.
Advertisement
ಪುತ್ರ ನಿಖಿಲ್ ಚುನಾವಣಾ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಂಡಿರುವ ಸಿಎಂ ಶಿವರಾಮೇಗೌಡ ಅವರನ್ನು ಕರೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.