ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ರೇವಣ್ಣ ಸೂಪರ್ ಸಿಎಂ ಅನ್ನೋ ಮಾತು ಚರ್ಚೆಯಲ್ಲಿವೆ. ಈ ಸಮಯದಲ್ಲಿಯೇ ಶುಕ್ರವಾರ ರೇವಣ್ಣರಿಗಾಗಿಯೇ ಸಿಎಂ ಕುಮಾರಸ್ವಾಮಿ ಸಂಪುಟ ಸಭೆ ಕರೆದಿದ್ದಾರೆ.
ಮುಖ್ಯವಾಗಿ ಹೊಳೆನರಸೀಪುರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹಾಸನ ಜಿಲ್ಲೆಯ ಏತ ನೀರಾವರಿ ಯೋಜನೆ, ಹೊಸ ಕಾಲೇಜಗಳ ಸ್ಥಾಪನೆ ಬಗ್ಗೆ ಚರ್ಚೆ ಆಗಲಿದೆ ಎನ್ನಲಾಗಿದೆ. ಈ ಬಗ್ಗೆ ರೇವಣ್ಣ ಅವರನ್ನ ಪ್ರಶ್ನಿಸಿದಾಗ, ಹಾಗೆಲ್ಲಾ ಇಲ್ಲ. ನನ್ನ ಕ್ಷೇತ್ರದಷ್ಟೇ ಅಲ್ಲ ಬೇರೆ ವಿಷಯಗಳು ಚರ್ಚೆಗೆ ಬರಲಿವೆ. ಕಾಂಗ್ರೆಸ್ ನಾಯಕರು ನನ್ನ ಸೂಪರ್ ಸಿಎಂ ಅಂದ್ರೆ ಆಶೀರ್ವಾದ ಅಂದ್ಕೋತೀನಿ ಅಂದ್ರು.
Advertisement
Advertisement
ಡಿ.ಕೆ.ಶಿವಕುಮಾರ್ ನಾವು ಚೆನ್ನಾಗಿಯೇ ಇದೀವಿ. ಬೇರೆ ಮಾಡಬೇಕು ಅಂತ ಅಂದ್ರೆ ಏನು ಮಾಡೋದು. ಎಂಜಿನಿಯರ್‍ಗಳ ವರ್ಗಾವಣೆಯಲ್ಲಿ ಅಸಮಾಧಾನ ವಿಚಾರಗೊತ್ತಿಲ್ಲ ಅಂದ್ರು. ಇದರ ಬೆನ್ನಲ್ಲೇ ಬಜೆಟ್ ಪೂರ್ವ ಭಾವಿ ಸಭೆಗಾಗಿ ಶಕ್ತಿಭವನಕ್ಕೆ ಕಂದಾಯ ಸಚಿವ ದೇಶಪಾಂಡೆ ಅವರು ಬಂದಾಗ ಗೇಟ್ ಒಂದಕ್ಕೆ ಬೀಗ ಹಾಕಿತ್ತು. ಪೊಲೀಸರು ಇದನ್ನ ತೆಗೆಯದೇ ದೂರ ಉಳಿದಿದ್ರು. ಹಾಗಾಗಿ, ಬೇರೊಂದು ಗೇಟ್ ಮೂಲಕ ದೇಶಪಾಂಡೆ ನಡೆದುಕೊಂಡು ಹೋದ್ರು.
Advertisement
ಇತ್ತ ರೇವಣ್ಣವರು ಬಂದು ಕ್ಲೋಸ್ ಆಗಿರುವ ಗೇಟ್‍ನ ಬೀಗ ತೆಗೆಸಿ ಒಳಗೆ ಹೋದ್ರು. ಈ ಮಧ್ಯೆ, ಸಿಎಂ ಬೆಂಗಾವಲು ವಾಹನಕ್ಕೆ ಅಡ್ಡಿ ಅಂತ ಸಚಿವ ಡಿಕೆಶಿ ಕಾರನ್ನ ಎತ್ತಿಸಿದ ಘಟನೆಯೂ ನಡೆದಿದೆ. ಇನ್ನು, ಶುಕ್ರವಾರ ಕ್ಯಾಬಿನೆಟ್‍ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಫೈನಲ್ ಸಾಧ್ಯತೆ ಇದೆ.
Advertisement
https://www.youtube.com/watch?v=LHr-hAmzNAw