ಹಾವೇರಿ: ರಾಜ್ಯದ 154 ತಾಲೂಕುಗಳನ್ನ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಯರೆಕುಪ್ಪಿ ಗ್ರಾಮದ ಬಳಿ ಕತ್ತಲದಲ್ಲಿಯೇ ಬೆಳೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವೀಕ್ಷಣೆ ಮಾಡಿದ್ದಾರೆ.
ಯರೇಕುಪ್ಪಿ ಗ್ರಾಮದ ರೈತ ದ್ಯಾವಪ್ಪ ಕಡ್ಲಗುಂದಿ ಎಂಬ ರೈತರ ಜಮೀನಿನಲ್ಲಿ ಜೋಳದ ಬೆಳೆಯನ್ನ ವೀಕ್ಷಣೆ ಮಾಡಿದ್ದಾರೆ. ನಂತರ ರೈತರ ಜೊತೆ ಸಾಲಮಾನ್ನಾ ಹಾಗೂ ಬೆಳೆ ಪರಿಹಾರ, ಬೆಳೆ ವಿಮೆ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆಗೆ ಬಗ್ಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲದೇ ರೈತರು ಮತ್ತು ಅಧಿಕಾರಿಗಳಿಂದ ಬೆಳೆಯ ಖರ್ಚು ಹಾಗೂ ಸಂಪೂರ್ಣ ಬೆಳೆ ಹಾನಿ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಇದೆ ವೇಳೆ ರೈತರು ಮುಂಗಾರು ಮತ್ತು ಹಿಂಗಾರು ಮಳೆ ಕೊರತೆ ಕುರಿತು ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ವೀಕ್ಷಣೆ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಇಲ್ಲಿನ ಬೆಳೆ ಹಾನಿ ಮತ್ತು ಮಳೆ ಕೊರತೆ ಪರಿಶೀಲನೆ ಮಾಡಿದ್ದೇನೆ. ರೈತರು ಅಧಿಕಾರಿಗಳು ನೀಡಿದ ಮಾಹಿತಿಯನ್ನು ಕೇಳಿದ್ದೇನೆ. ಈರುಳ್ಳಿ, ಮೆಕ್ಕೆಜೋಳ, ಜೋಳ ಬೆಳೆ ಮಳೆ ಕೊರತೆಯಿಂದ ರೈತರ ಕೈಗೆ ಏನು ಸಿಕ್ಕಿಲ್ಲ. ಇದನ್ನು ನಾನು ಗಮನಿಸಿದ್ದು, ಹೆಕ್ಟರ್ ಗೆ 6 ಸಾವಿರ ಕೊಡುತ್ತೇವೆ. ಹೀಗಾಗಿ ಬೆಳೆ ವಿಮೆಯ ಹಣ ಕೊಡಲಿಕ್ಕೆ ತೊಂದರೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ರಾಜ್ಯದ 154 ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಹೀಗಾಗಿ ಮೊದಲು ಕುಡಿಯುವ ನೀರು, ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ನಗರ ಪ್ರದೇಶಕ್ಕೆ ನೀರಿನ ಕೊರತೆ ಇದೆ ಅಂತ ಕಂದಾಯ ಸಚಿವರು ಹೇಳಿದ್ದಾರೆ. ಅದಕ್ಕೂ ಅನುದಾನ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದೇವೆ. ಬರ ಸಮಸ್ಯೆ ಪರಿಹಾರಕ್ಕೆ ಸಮರೋಪಾದಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜನರಿಗೆ ಕೂಲಿ ಕೆಲಸ ಎಲ್ಲವನ್ನು ನೀಡಬೇಕಿದೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv