ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜೊತೆ ಮಂಡ್ಯ ರೆಬಲ್ಸ್ ಡಿನ್ನರ್ ಸಭೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಕುಮಾರಸ್ವಾಮಿ ಇದೀಗ ಮಂಡ್ಯ ಕಾಂಗ್ರೆಸ್ ಬಂಡಾಯ ನಾಯಕರ ನಡೆಯ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿದ್ದಾರೆ.
ಬುಧವಾರವೇ ಸಿಎಂ ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ವೇಣುಗೋಪಾಲ್ ಅವರಿಗೆ ದೂರು ಕೊಟ್ಟಿದ್ದಾರೆ. ಜೊತೆ ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಮನಕ್ಕೆ ತರುವಂತೆ ಒತ್ತಾಯ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಫಲಿತಾಂಶಕ್ಕೂ ಮುನ್ನವೇ ರೆಬಲ್ಸ್ ವಿರುದ್ಧ ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದು, ಒಂದು ವೇಳೆ ಕ್ರಮ ತೆಗೆದುಕೊಳ್ಳದೆ ಹೋದರೆ ಫಲಿತಾಂಶದ ಬಳಿಕ ಮೈತ್ರಿಗೆ ಕಂಟಕವಾಗುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ರೆಬಲ್‍ಗಳ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಸಿಎಂ ಕುಮಾರಸ್ವಾಮಿ ವೇಣುಗೋಪಾಲ್ ಅವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
Advertisement
ಹಾಗಾದರೆ ಕಾಂಗ್ರೆಸ್ ಹೈಕಮಾಂಡ್ ರೆಬಲ್ಸ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾ? ಕ್ರಮ ತೆಗೆದುಕೊಳ್ಳದೇ ಇದ್ದರೆ ಮೈತ್ರಿ ಸರ್ಕಾರಕ್ಕೆ ಕಂಟಕನಾ? ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಹೈಕಮಾಂಡ್ ಕ್ರಮದ ಮೇಲೆ ಮೈತ್ರಿ ಭವಿಷ್ಯ ನಿಂತಿದಿಯಾ ಎನ್ನುವ ಗೊಂದಲವೂ ಮೂಡಿದೆ.
Advertisement
ದೋಸ್ತಿಗಳ ನಡುವೆ ವಾರ್!
ಈಗ ರೆಬಲ್ಸ್ ವರ್ಸಸ್ ರೆಬಲ್ಸ್ ಪಾಲಿಟಿಲ್ಸ್ ಶುರುವಾಗಿದ್ದು, ಇತ್ತ ಮಂಡ್ಯ ರೆಬಲ್ಸ್ ವಿರುದ್ಧ ಕ್ರಮಕ್ಕೆ ಸಿಎಂ ಹೆಚ್‍ಡಿಕೆ ಒತ್ತಾಯ ಮಾಡಿದ್ದರೆ. ಅತ್ತ ಜಿ.ಟಿ.ದೇವೇಗೌಡ ಮತ್ತು ಸಾರಾ ಮಹೇಶ್ ವಿರುದ್ಧ ಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಯಾರು ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದೇ ಇಲ್ಲಿ ಗೊಂದಲವಾಗಿದೆ. ಒಂದು ವೇಳೆ ಜೆಡಿಎಸ್ ಸಚಿವರ ವಿರುದ್ಧ ಕ್ರಮವಾದರೆ ಸಿದ್ದರಾಮಯ್ಯ ಕೈ ಮೇಲಾದಂತೆ. ಮಂಡ್ಯ ರೆಬಲ್ಸ್ ತಲೆದಂಡವಾದರೆ ಸಿಎಂ ಕುಮಾರಸ್ವಾಮಿ ಕೈ ಮೇಲಾದಂತೆ. ಹೀಗಾಗಿ ಯಾರು ಕ್ರಮ ಕೈಗೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲವಾಗಿದೆ.