ಬೆಂಗಳೂರು: ಉತ್ತರ ಕರ್ನಾಟಕ ಇಬ್ಭಾಗದ ವಿಚಾರಕ್ಕೆ ಮಾಧ್ಯಮಗಳೇ ಕಾರಣ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ಇಂದು ವಿಧಾನಸಭೆಯ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಗೂ ಮುಂಚೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಇಬ್ಭಾಗವಾಗೋದಕ್ಕೆ ಮಾಧ್ಯಮಗಳೇ ಕಾರಣ. ರಾಜ್ಯದಲ್ಲಿ ಬೆಂಕಿ ಹಚ್ಚುತ್ತಿರುವುದು ಮಾಧ್ಯಮಗಳು. ಒಂದು ವಾರದಿಂದ ಪ್ರತ್ಯೇಕ ಕರ್ನಾಟಕ ಚರ್ಚೆ ಮಾಡುತ್ತಿದ್ದೀರಿ, ರಾಜ್ಯ ಹಾಳೋಗೋಕೆ ಮಾಧ್ಯಮಗಳೇ ಕಾರಣ ಎಂದು ದೂರಿದರು.
Advertisement
ನಿಮಗೆ ಚರ್ಚೆ ಮಾಡೋಕೆ ಬೇರೆ ವಿಷಯ ಇಲ್ಲ. ಇದಕ್ಕಾಗಿ ಇಂತಹ ಸುದ್ದಿ ಮಾಡ್ತಿದ್ದೀರಾ. ನಿಮ್ಮ ಆತ್ಮಸಾಕ್ಷಿಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ನೀವು ಮಾಡ್ತಿರೋದು ಸರಿನಾ ಅಂತ. ನನ್ನನ್ನು ಕೇವಲ 4 ಜಿಲ್ಲೆ ಸಿಎಂ ಅಂತೀರಾ. ಬಜೆಟ್ ತೆಗೆದು ನೋಡಿ 2.18 ಲಕ್ಷ ರೂಪಾಯಿ ಬಜೆಟಿನಲ್ಲಿ 500 ಕೋಟಿ ನಾಲ್ಕು ಜಿಲ್ಲೆಗೆ ಕೊಟ್ಟಿದ್ದಕ್ಕೆ ಅಪರಾಧ ಅಂತಿದ್ದೀರಾ ಎಂದು ಆರೋಪಿಸಿದರು.
Advertisement
ಪ್ರತಿಯೊಂದು ತಪ್ಪು ಕಂಡು ಹಿಡಿಯುತ್ತಿದ್ದರೆ, ರಾಜ್ಯ ಹಾಳಾಗಬೇಕಾ? ಉದ್ದಾರ ಆಗಬೇಕಾ ನೀವೇ ನಿರ್ಧಾರ ಮಾಡಿ ಎಂದು ಪ್ರಶ್ನಿಸಿದರು. ನಾನು ನೂರು ಬಾರಿ ಹೇಳಿದ್ದೇನೆ. ಅಖಂಡ ಕರ್ನಾಟಕ ಒಂದೇ ಅಂತ, ನಾನೇನು ಮಾತಾಡಿಲ್ಲ. ಆದರೆ ದಿನ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದೀರಿ. ಮುಂದಿನ ದಿನಗಳಲ್ಲಿ ರಾಜ್ಯಗಳಲ್ಲಿ ಪ್ರತ್ಯೇಕ ರಾಜ್ಯ ವಿರುದ್ಧ ಏನಾದರೂ ಅನಾಹುತ ಸಂಭವಿಸಿದರೆ ಮಾಧ್ಯಮಗಳೇ ನೇರ ಹೊಣೆ. ಜನ ಏನು ಕೇಳೂತ್ತಿಲ್ಲ, ಜನ ಸರ್ಕಾರದ ಪರ ಇದ್ದಾರೆ. ಮಾಧ್ಯಮಗಳೇ ಎಲ್ಲ ಸೃಷ್ಟಿ ಮಾಡಿ ಬೆಂಕಿ ಹಚ್ಚುತ್ತಿದ್ದೀರಿ ಎಂದು ಕಿಡಿಕಾರಿದರು.
Advertisement
https://www.youtube.com/watch?v=GFlhwAVluO8