ಬೆಂಗಳೂರು: ಏಳು ಕ್ಷೇತ್ರಗಳಲ್ಲೂ ಗೆಲ್ಲಿಸಿದ್ದ ಮಂಡ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 5 ಸಾವಿರ ಕೋಟಿ ರೂ. ಗಿಫ್ಟ್ ನೀಡುತ್ತಿದ್ದಾರೆ. ಈ ಮೂಲಕ ಕುಮಾರಸ್ವಾಮಿಯವರು ಜೆಡಿಎಸ್ ಪ್ರಾಬಲ್ಯ ಇರುವ ಜಿಲ್ಲೆಗಳಿಷ್ಟೆನಾ ಮುಖ್ಯಮಂತ್ರಿ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸಿಎಂ ಕುಮಾರಸ್ವಾಮಿ ಅವರು ಬಜೆಟ್ ನಲ್ಲಿ ಮಂಡ್ಯ ಜಿಲ್ಲಾದ್ಯಂತ ನೀರಾವರಿ ಅಭಿವೃದ್ಧಿಗಾಗಿ 5 ಸಾವಿರಕ್ಕೂ ಅಧಿಕ ಕೋಟಿ ಹಣವನ್ನು ಅನುದಾನವಾಗಿ ಫೋಷಣೆ ಮಾಡಿದ್ದರು. ಈ ಮೂಲಕ ಏಳು ಕ್ಷೇತ್ರಗಳಲ್ಲೂ ಗೆಲ್ಲಿಸಿದ್ದ ಮಂಡ್ಯಕ್ಕೆ 5 ಸಾವಿರ ಕೋಟಿ ರೂ. ಗಿಫ್ಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಶನಿವಾರ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ಕಳೆದ 25 ವರ್ಷಗಳಿಂದ ಮಂಡ್ಯ ಅಭಿವೃದ್ಧಿಯಾಗಿಲ್ಲ. ಇತ್ತ ಯಾವ ಅಧಿಕಾರಿ, ರಾಜಕಾರಣಿ ಕೂಡ ಗಮನವನ್ನು ಹರಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ 25 ವರ್ಷದ ಅಭಿವೃದ್ಧಿಯಿಂದ ಕುಂಠಿತವಾಗಿರುವ ಮಂಡ್ಯ ಜಿಲ್ಲೆಗೆ ನಾನು ಅನುದಾನ ಕೊಡುವುದಾಗಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರು. ಅಷ್ಟೆ ಅಲ್ಲದೆ ನಾನು ಮಂಡ್ಯಕ್ಕೆ ಘೋಷಣೆ ಮಾಡಿದ ಅನುದಾನದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ 25 ವರ್ಷಗಳಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಲು ನಾನು ಈ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ಮಾಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರ ಅನುದಾನಕ್ಕೆ ಜನಪ್ರತಿನಿಧಿಗಳು ಹಾಗೂ ಜನತೆ ಖಷಿಯಾಗಿದ್ದಾರೆ. ನಾವು ಕುಮಾರಸ್ವಾಮಿ ಅವರನ್ನು ನಂಬಿ ವೋಟ್ ಹಾಕಿದ್ದೇವೆ. ಹೀಗಾಗಿ ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಜನತೆ ಹೇಳುತ್ತಿದ್ದಾರೆ. ಇತ್ತ ಸಿಎಂ ಕುಮಾರಸ್ವಾಮಿ ಅವರು ಕೂಡ ನಾನು ಮಂಡ್ಯ ಜನತೆಯ ಋಣವನ್ನು ತೀರಿಸುತ್ತಿದ್ದೀನಿ ಎಂದು ಹೇಳಿದ್ದರು. ಇದರಿಂದ ಬೇರೆ ಜಿಲ್ಲೆಯ ಜನತೆ ಆಕ್ರೋಶಗೊಂಡಿದ್ದು, ನಮಗೆ ಯಾಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಹಾಸನ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳ ಮೇಲೆ ಸಿಎಂಗೆ ಅಕ್ಕರೆ ಹೆಚ್ಚಾಗಿದೆ. ಜೆಡಿಎಸ್ `ಕೈ’ ಹಿಡಿದ ಜಿಲ್ಲೆಗಳ ಋಣ ತೀರಿಸಲು ಮುಖ್ಯಮಂತ್ರಿ ಕಸರತ್ತು ಮಾಡುತ್ತಿದ್ದಾರೆ. ಉಳಿದ ಜಿಲ್ಲೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ತಮ್ಮ ಪಕ್ಷದ ಅಸ್ತಿತ್ವದಲ್ಲಿರುವ ಜಿಲ್ಲೆಗಳಿಗೆ ಭರಪೂರ ಅನುದಾನ ನೀಡುವ ಮೂಲಕ ಮತ್ತೆ ಕುಮಾರಸ್ವಾಮಿ `ಮಲತಾಯಿ ಮುಖ್ಯಮಂತ್ರಿ’ ಕಳಂಕ ಹೊತ್ತುಕೊಂಡರಾ ಎಂಬ ಅನುಮಾನ ಮೂಡಿಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv