ರಾಯಚೂರು: ಜಿಲ್ಲೆಯಲ್ಲಿ ನಾಡದೊರೆ ಮುಖ್ಯಮಂತ್ರಿಗಳು ಬುಧವಾರ ಗ್ರಾಮ ವಾಸ್ತವ್ಯ ಮಾಡಿದರು. ಸಿಎಂ ಜನತಾ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಿ ದೂರು, ಮನವಿಗಳನ್ನು ಸಲ್ಲಿಸಿ ಹಲವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಆದರೆ ಗ್ರಾಮ ವಾಸ್ತವ್ಯಕ್ಕೆ ಪ್ರತಿಭಟನೆಯ ಬಿಸಿ ಕೂಡ ತಟ್ಟಿತ್ತು.
ಸಾರಿಗೆ ಬಸ್ ಮೂಲಕ ಕರೇಗುಡ್ಡಕ್ಕೆ ಹೊರಟ ಸಿಎಂ ನಂತರ ಮಾರ್ಗದುದ್ದಕ್ಕೂ ಬರುವ ಗ್ರಾಮಗಳಲ್ಲಿ ಬಸ್ ನಿಲ್ಲಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸೋದಾಗಿ ಭರವಸೆ ನೀಡಿದರು. ಸುಮಾರು 3 ಗಂಟೆ ಸುಮಾರಿಗೆ ಕರೇಗುಡ್ಡ ತಲುಪಿದ ಸಿಎಂ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿದು ಜನತಾ ದರ್ಶನದಲ್ಲಿ ಬ್ಯುಸಿಯಾದರು.
Advertisement
Advertisement
ರಾತ್ರಿ 10 ಗಂಟೆವರೆಗೆ ನಡೆದ ಜನತಾ ದರ್ಶನದಲ್ಲಿ ಒಟ್ಟು 1,462 ಮನವಿಗಳು ಬಂದಿದೆ. ಇದೇ ವೇಳೆ ಮಾತನಾಡಿದ ಸಿಎಂ, ಬಿಜೆಪಿ ಸರ್ಟಿಫಿಕೇಟ್ ಗೋಸ್ಕರ ಕಾರ್ಯಕ್ರಮ ಮಾಡುತ್ತಿಲ್ಲ. ಹೆಲಿಕಾಪ್ಟರ್‍ನಲ್ಲಿ ಹೋದರೆ 12 ಲಕ್ಷ ಖರ್ಚಾಗುತ್ತೆ. ಹೀಗಾಗಿ ಗುರುವಾರ ರಸ್ತೆ ಮಾರ್ಗವಾಗಿಯೇ ಬಸವಕಲ್ಯಾಣಕ್ಕೆ ಹೋಗುತ್ತೇನೆ ಎಂದರು.
Advertisement
Advertisement
10.30ರಿಂದ ಜನತಾ ದರ್ಶನ ವೇದಿಕೆಯಿಂದ ಹೊರಟ ಸಿಎಂ ಕುಮಾರಸ್ವಾಮಿ 5 ನಿಮಿಷ ರೆಸ್ಟ್ ಮಾಡಿದರು. ನಂತರ ಅಧಿಕಾರಿಗಳ ಜೊತೆ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ್ರು. ತಡವಾಗಿದರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಸಮಯವನ್ನು ಮೊಟಕುಗೊಳಿಸಲಾಯ್ತು. ಕೇವಲ ಎರಡೇ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಯ್ತು. ಒಟ್ಟು 40 ನಿಮಿಷ ಕಾರ್ಯಕ್ರಮ ವೀಕ್ಷಿಸಿ ಬಳಿಕ ಶಾಲೆಯತ್ತ ಹೊರಟರು. ಅತ್ತ ಮಕ್ಕಳು ಸಿಎಂಗಾಗಿ ಮಧ್ಯರಾತ್ರಿವರೆಗೂ ಊಟಕ್ಕಾಗಿ ಕಾದು ಕುಳಿತಿದ್ದರು. ಬಳಿಕ ತಡವಾಗಿ ಶಾಲೆಗೆ ಬಂದ ಸಿಎಂ ಐವರು ಮಕ್ಕಳು ಮತ್ತು ಅಧಿಕಾರಿಗಳೊಂದಿಗೆ ಊಟ ಮಾಡಿದರು. ಶಾಲೆಯಲ್ಲಿ ಸಾಮಾನ್ಯ ಛಾಪೆಯಲ್ಲಿಯೇ ಮಲಗಿದ ಮುಖ್ಯಮಂತ್ರಿ ನಿದ್ದೆಗೆ ಜಾರಿದರು.
https://www.youtube.com/watch?v=H8s1zyKFRVk