ಮೈಸೂರು: ಮುಡಾ ಹಗರಣ (MUDA Scam) ಹೊರಗೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರ ಜೀವಕ್ಕೆ ಕಂಟಕ ಎದುರಾಗುತ್ತಾ ಎಂಬ ಅನುಮಾನ ಮೂಡಿದೆ.
ಮಾಜಿ ಮಂತ್ರಿ ತನ್ವೀರ್ ಸೇಠ್ ಆಪ್ತ ಬ್ಯಾಂಕ್ ಮಂಜು ಆಡಿರುವ ಮಾತು ಇಂತಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೈಸೂರಿನ ಬೆಲವತ್ತ ಬಳಿಯ ಜಮೀನು ವಿಚಾರದಲ್ಲಿ ಕುಟುಂಬವೊಂದಕ್ಕೆ ಡಿ.5ರಂದು ಬ್ಯಾಂಕ್ ಮಂಜು ಧಮ್ಕಿ ಹಾಕಿದ್ದ. ಈ ವೇಳೆ ಜಮೀನು ಮಾಲೀಕ, ಸ್ನೇಹಮಯಿ ಕೃಷ್ಣ ಅಂಥವ್ರೇ ಸಿಎಂ ವಿರುದ್ಧ ಹೋರಾಡುತ್ತಿದ್ದಾರೆ. ನಾನು ನಿಮ್ಮ ವಿರುದ್ದ ಹೋರಾಡ್ತಿನಿ ಎಂದಿದ್ದರು.
ಈ ಮಾತಿಗೆ ಟಕ್ಕರ್ ನೀಡುವ ಭರದಲ್ಲಿ ಬ್ಯಾಂಕ್ ಮಂಜು, ಸ್ನೇಹಮಯಿ ಕೃಷ್ಣರನ್ನು ಸಿಎಂ ಸುಮ್ನೆ ಬಿಡ್ತಾರೆ ಅಂದ್ಕೊಂಡಿದ್ದಿಯಾ. ಸಮಯಕ್ಕಾಗಿ ಕಾಯ್ತಿದ್ದಾರೆ ಎಂದು ಹೇಳಿದ್ದ. ಅಂದ ಹಾಗೇ, ಈ ಘಟನೆ ನಡೆದ 17 ದಿನಕ್ಕೆ ಅಂದರೆ ಡಿ.22ರಂದು ಜಮೀನು ಮಾಲೀಕ ಹನುಮಂತು ನಡು ರಸ್ತೆಯಲ್ಲಿ ಕೊಲೆಯಾಗಿದ್ದ. ಈ ಕೇಸಲ್ಲಿ ಬ್ಯಾಂಕ್ ಮಂಜು ನಾಲ್ಕನೇ ಆರೋಪಿ ಆಗಿದ್ದಾನೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ನನಗೆ, ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಆದ್ರೆ ಸಿಎಂ ಹೊಣೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನೂ ಪೊಲೀಸರಿಗೆ ಮನವಿ ಮಾಡಿದ್ರೂ ಭದ್ರತೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೊಲೆಯಾದ ಹನುಮಂತು ಪುತ್ರ, ಕೊಲೆಯಾಗುವ ಮುನ್ನ ನಡೆದ ಗಲಾಟೆಯಲ್ಲಿ ನಮ್ಮ ತಂದೆಗೆ ಬ್ಯಾಂಕ್ ಮಂಜು ಅವಾಜ್ ಹಾಕಿದ್ದ. ಕತ್ತು ಕೊಯ್ದು ಕೊಲೆ ಮಾಡುವ ಬೆದರಿಕೆ ಹಾಕಲಾಗಿತ್ತು. ಅದೇ ಮಾದರಿಯಲ್ಲಿ 18 ಭಾರಿ ಚುಚ್ಚಿ ನಮ್ಮ ತಂದೆಯನ್ನು ಕೊಲೆ ಮಾಡಿದ್ದಾರೆ. ಕಾನೂನಿನ ಮೂಲಕ ನಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.