ಕೊಪ್ಪಳ: ಸಿಎಂ ಬೇರೆ ಸಮುದಾಯಗಳಿಗೆ ಸ್ಪಂದನೆ ನೀಡುತ್ತಿದ್ದಾರೆ, ಆದರೆ ನಮ್ಮ ಸಮುದಾಯಕ್ಕೆ ಸ್ಪಂದನೆ ಇಲ್ಲ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಹೇಳಿದ್ದಾರೆ.
ಕೊಪ್ಪಳದಲ್ಲಿ (Koppal) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ಸಿಎಂ ಅವರು ಬೇರೆ ಸಮುದಾಯಗಳಿಗೆ ಸ್ಪಂದನೆ ನೀಡಿದ್ದಾರೆ. ಆದರೆ ನಮ್ಮ ಸಮುದಾಯಕ್ಕೆ ಸ್ಪಂದನೆ ಇಲ್ಲ. ಹೀಗಾಗಿ ಬೆಳಗಾವಿ (Belagavi) ಅಧಿವೇಶನದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನ ಮಾಡಲಾಗಿದೆ. 5 ಸಾವಿರ ಟ್ರ‍್ಯಾಕ್ಟರ್‌ಗಳ ಮೂಲಕ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: Chitradurga| ರೈತರ ತಂಟೆಗೆ ಬಂದ್ರೆ ಸುಮ್ಮನೆ ಕೂರಲ್ಲ – ವಕ್ಫ್ ವಿರುದ್ಧ ಭಾರತೀಯ ಕಿಸಾನ್ ಸಂಘ ಪ್ರತಿಭಟನೆ
Advertisement
Advertisement
ಸರ್ಕಾರ ನಮ್ಮ ಸಮುದಾಯದಿಂದಲೇ ಅಧಿಕಾರಕ್ಕೆ ಬಂದಿದೆ. ಈಗಾಗಲೇ ನಾವು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ನಮ್ಮ ಸಮುದಾಯದ ಶಾಸಕರು ಇದುವರೆಗೂ ಯಾವುದೇ ರೀತಿಯ ಧ್ವನಿ ಎತ್ತಿಲ್ಲ. ಈಗ ನಡೆಯುವ ಅಧಿವೇಶನದಲ್ಲಿ ಧ್ವನಿ ಎತ್ತಿ, ಇಲ್ಲವಾದರೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ. ಬೆಳಗಾವಿಯಲ್ಲಿ ಹೋರಾಟಕ್ಕೆ ಮುತ್ತಿಗೆ ಹಾಕಲು ರೂಪ ರೇಷಗಳನ್ನು ಹಾಕಲಾಗುತ್ತಿದೆ. ಎಲ್ಲ ಪಂಚಮಸಾಲಿ ಸಮುದಾಯದವರು ಬಂದು ಭಾಗವಹಿಸಬೇಕು. ಇದರಲ್ಲಿ ಜನರು ಯಾವುದೇ ರೀತಿ ಉದ್ರೇಕಗೊಂಡರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ. ಈಗ ಯಾವುದೇ ರೀತಿ ಉಪವಾಸ ಸತ್ಯಾಗ್ರಹ ಇಲ್ಲ ಹೀಗಾಗಿ ಉಗ್ರಹೋರಾಟ ಮಾಡಲಾಗುತ್ತಿದೆ ಎಂದರು.
Advertisement
ಈಗಾಗಲೇ ನಾವು ವಕೀಲರ ಮೂಲಕ ಹೋರಾಟ ಆರಂಭ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ನಮ್ಮ ಶಾಸಕರು ಸಚಿವರು ಮಾತನಾಡುತ್ತಿದ್ದರು. ಆದರೆ ಈಗಿರುವ ಶಾಸಕರು ಸಮುದಾಯದ ಪರವಾಗಿ ಮಾತನಾಡುತ್ತಿಲ್ಲ. ಮೊದಲೆಲ್ಲ ಸಿಎಂ ನಮ್ಮ ಕೈಗೆ ಸಿಗುತ್ತಿದ್ದರು. ಕರೆದಾಗ ಬರುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಸಿಎಂ ಅವರು ನಮ್ಮ ಮನವಿಗೆ ಸ್ಪಂದನೆ ನೀಡುತ್ತಿಲ್ಲ. ರೈತರ ಜಮೀನಲ್ಲಿ ವಕ್ಫ್ ಹೆಸರು ಸೇರಿದ ವಿಚಾರವಾಗಿ, ವಕ್ಫ್ ವಿರುದ್ಧ ಹೋರಾಟಕ್ಕೆ ನಾನು ದುಮುಕಿದ್ದೇನೆ. ಈಗಾಗಲೇ ಹಲವು ಮನವಿಗಳನ್ನು ಕೊಟ್ಟಿದ್ದೀವಿ. ಸಿಎಂ ಅವರು ವಕ್ಫ್ ವಾಪಸ್ ತೆಗೆದುಕೊಂಡಿದ್ದಾರೆ. ಆದರೆ ಪಹಣಿಯಲ್ಲ ಹೆಸರು ತೆಗೆದಿಲ್ಲ. ವಿಜಯಪುರದಲ್ಲಿ ಮಾತ್ರ ಬಂದ್ ಆಗಿದೆ ಬೇರೆ ಕಡೆ ಆಗುತ್ತಿದೆ ಎಂದು ಹೇಳಿದರು.
Advertisement
ಶಿಗ್ಗಾಂವಿ ಉಪಚುನಾವಣೆಯಲ್ಲಿ ಭರತ್ ಬೊಮ್ಮಾಯಿ ಸೋಲಿನ ವಿಚಾರವಾಗಿ ಅದರಲ್ಲಿ ಸಮುದಾಯದ ವಿಚಾರ ತರುವುದು ತಪ್ಪು. ಉಪಚುನಾವಣೆ ಸ್ಥಳೀಯ ವಿಚಾರವಾಗಿ ನಡೆಯುತ್ತದೆ. ನಾವು ಯಾವುದೇ ರೀತಿಯ ಸಂದೇಶ ಕೊಡುವುದಿಲ್ಲ. 80 ಸಾವಿರ ಮತ ಬಂದಿದೆ ಅಂದಾಗ ನಮ್ಮ ಸಮುದಾಯದವರು ಮತ ಹಾಕಿದ್ದಾರೆ ಎಂದು ಅರ್ಥ ಎಂದು ತಿಳಿಸಿದರು.ಇದನ್ನೂ ಓದಿ: ತುಮಕೂರು| ಗುರಾಯಿಸುತ್ತೀಯಾ ಎಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿತ