ಹುಬ್ಬಳ್ಳಿ: ಸಿಎಂ ಟಗರು. ಟಗರು ಯಾವತ್ತಿಗೂ ಟಗರೇ. ಭಯ ಬೀಳೋ ಪ್ರಶ್ನೆನೇ ಬರಲ್ಲ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khan) ಸಿಎಂ ಸಿದ್ದರಾಮಯ್ಯ (Siddaramaiah) ಪರ ಬ್ಯಾಟ್ ಬೀಸಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹುಲಿ ಇದ್ದಂತೆ. ಸಿದ್ದರಾಮಯ್ಯ ಜೊತೆ ಹೈಕಮಾಂಡ್, ಶಾಸಕರು, ರಾಜ್ಯದ ಜನ ಇದ್ದಾರೆ. ಸಿದ್ದರಾಮಯ್ಯ ಬಂದು ನಿಂತರೆ ಸಾಕು, ಸಾವಿರಾರು ಜನ ಬಂದು ಕೂರುತ್ತಾರೆ. ಬಿಜೆಪಿ ಅವರು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ದರ್ಶನ್ ವಿಚಾರದಲ್ಲಿ ನಾನು ಯಾವುದೇ ಪ್ರಭಾವ ಬೀರಿಲ್ಲ: ಜಮೀರ್
ಕಾಂಗ್ರೆಸ್ ಮುಡಾ ಚಲೋ ಮಾಡಲಿ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಬಗ್ಗೆ ಜುಲೈನಲ್ಲಿ ಖಾಸಗಿ ವ್ಯಕ್ತಿ ದೂರು ನೀಡುತ್ತಾರೆ. ಅದೇ ದಿನ ಪ್ರಾಸಿಕ್ಯೂಷನ್‌ಗೆ ಕೊಡುತ್ತಾರೆ. ಅದಕ್ಕಿಂತ ಮುಂಚೆ 8 ತಿಂಗಳ ಹಿಂದೆಯೇ ಕುಮಾರಸ್ವಾಮಿಗೆ ಪ್ರಾಸಿಕ್ಯೂಷನ್ ಕೇಳುತ್ತಾರೆ, ಆದ್ರೆ ಕೊಡಲ್ಲ. ಕುಮಾರಸ್ವಾಮಿ, ಜೊಲ್ಲೆ, ನಿರಾಣಿ, ಜನಾರ್ದನ ರೆಡ್ಡಿಗೆ ಕೊಟ್ಟಿಲ್ಲ. ಇದು ಯಾವ ನ್ಯಾಯ ಸರ್ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ
ಶನಿವಾರ ವಕೀಲರು ವಾದ ಮಾಡೋದನ್ನು ನೋಡಿದೆ. ಅದರಲ್ಲಿ ಸಿದ್ದರಾಮಯ್ಯನವರದು ಬೇನಾಮಿ ಆಸ್ತಿ ಅನ್ನೋ ಥರ ಮಾತನಾಡುತ್ತಾರೆ. ಲಿಂಗ ಅವರು 1930ರಲ್ಲಿ ಹರಾಜಲ್ಲಿ ಸೈಟ್ ತೆಗೆದುಕೊಂಡಿದ್ದರು. ಅವಾಗ ಸಿದ್ದರಾಮಯ್ಯ ಹುಟ್ಟೇ ಇರಲಿಲ್ಲ. ಮಲ್ಲಿಕಾರ್ಜುನ ಅವರ ಅಕ್ಕನಿಗೆ ಸೈಟ್ ಗಿಫ್ಟ್ ಕೊಡುತ್ತಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ ಸೈಟ್ ಕೊಟ್ಟಿದ್ದು. 125 ಸೈಟ್‌ನಲ್ಲಿ 14 ಸೈಟ್ ಇವರಿಗೆ ಕೊಡುತ್ತಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನಿದೆ? ಮುಡಾ ಹಗರಣ ಮುಖ್ಯಮಂತ್ರಿಗಳಿಗೆ ಯಾಕೆ ಮುಳ್ಳಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇಂಡಿಗೋ ವಿಮಾನದ ವಾಶ್‍ರೂಮ್‍ನಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ – ತುರ್ತು ಭೂಸ್ಪರ್ಶ
ಬಿಜೆಪಿಗೆ ಹಿಂದುಳಿದ ನಾಯಕನನ್ನು ಸಹಿಸೋಕೆ ಆಗುತ್ತಿಲ್ಲ. ದೇವರಾಜ ಅರಸು ನಂತರ ಹಿಂದುಳಿದವರು ಯಾರೂ ಮುಖ್ಯಮಂತ್ರಿ ಆಗಿಲ್ಲ. ಇವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಇವರ ಜನಪ್ರಿಯತೆ ಬಿಜೆಪಿ ಅವರಿಗೆ ಸಹಿಸೋಕೆ ಆಗುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಟ್ಟರೆ ಕಾಂಗ್ರೆಸ್ ತೆಗಿಬಹುದು ಅಂದುಕೊಂಡಿದ್ದಾರೆ. ಬಿಜೆಪಿ ಅವರಿಗೆ ಹೊಟ್ಟೆಕಿಚ್ಚು ಇದೆ. ಬೇರೆ ಅವರು ದುಡ್ಡು ಖರ್ಚು ಮಾಡಿ ಜನರನ್ನು ಕರಿಸಬೇಕು. ಆದರೆ ಸಿದ್ದರಾಮಯ್ಯ ಬಂದು ನಿಂತರೆ ಸಾವಿರಾರು ಜನ ಬರುತ್ತಾರೆ. ನಮ್ಮ ನಾಯಕ ಸಿದ್ದರಾಮಯ್ಯ ಅವರು ಎಂದರು. ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ಜೂ.ಎನ್‌ಟಿಆರ್
ದಾಖಲೆ ಬಿಡುಗಡೆ ಮಾಡಿದ್ದೇ ಕಾಂಗ್ರೆಸ್‌ನವರು ಎಂಬ ವಿಚಾರದ ಕುರಿತು ಮಾತನಾಡಿ, ಮುಡಾ ಹಗರಣದಲ್ಲಿ ಏನಿಲ್ಲ ಅಂದಕೂಡಲೇ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಏನು ನಡೆಯುತ್ತಿದೆ ಎಂದು ಬಿಜೆಪಿ ಅವರಿಗೆ ಗೊತ್ತಾಗಿದೆ. ಏನು ಸಿಗಲ್ಲ ಅಂತ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: SSLC ವಿದ್ಯಾರ್ಥಿನಿಗೆ ತನ್ನ ಬೆತ್ತಲೆ ಫೋಟೋ ಕಳಿಸಿ ಕಿರುಕುಳ – ಕಾಮುಕ ಶಿಕ್ಷಕನ ವಿರುದ್ಧ ಕೇಸ್