ಬೆಂಗಳೂರು: ತಲೆ ಮೇಲೆ ಬಟ್ಟೆ ಹಾಕೋದು ಹಿಜಬ್ ಅದು ಬುರ್ಖಾ ಅಲ್ಲ. ಅಯ್ಯೋ.. ಕೋವಿಡ್ ಗೆ ಹಾಕುವುದನ್ನೆ ಇವರು ಹಾಕಿದ್ದಾರೆ. ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ. ಸಚಿವರು ಹಾಕಿದ್ದಾರೆ, ನಾನೂ ಹಾಕಿದ್ದೇನೆ ಎಂದು ಸಿಎಂ ಇಬ್ರಾಹಿಂ ಹೇಳಿದರು.
Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ವಿವಾದಗಳ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ. ಯಾವುದೇ ವಿವಾದ ಸೃಷ್ಟಿ ಮಾಡಿದರೂ ಸಕ್ಸಸ್ ಆಗ್ತಿಲ್ಲ. ಗೋಹತ್ಯೆ, ಧಾರ್ಮಿಕ ಬಿಲ್ ತಂದರು ಅಲ್ಲೆ ನಿಲ್ತು. ಈಗ ಹಿಜಬ್ ವಿವಾದ ತಂದಿದ್ದಾರೆ ಎಂದು ಗರಂ ಆದರು. ಇದನ್ನೂ ಓದಿ: ದಾವಣಗೆರೆಯಲ್ಲಿ ಜೆಡಿಎಸ್ ಸೇರುತ್ತೇನೆ: ಸಿಎಂ ಇಬ್ರಾಹಿಂ
Advertisement
Advertisement
ಹಿಜಾಬ್ ಅನಾದಿ ಕಾಲದಿಂದಲೂ ಇದೆ. ಮೈಸೂರು ಮಹಾರಾಜರು ಅಂದಿನ ಶಾಲಾ-ಕಾಲೇಜಿಗೆ ಹೆಣ್ಣುಮಕ್ಕಳು ಹೋಗುವ ಗಾಡಿಗೆ ಪರದೆ ಹಾಕಿದ್ದರು. ಹೆಣ್ಣು ಮಕ್ಕಳಿಗೆ ಪರದೆ ಅಲ್ಲದೆ ಗಾಡಿಗೂ ಪರದೆ ಹಾಕಿದ್ದರು. ಉತ್ತರ ಕರ್ನಾಟಕದಲ್ಲಿ ತಲೆ ಮೇಲೆ ಸೆರಗು ಹಾಕದ ಹೆಣ್ಣು ಮಕ್ಕಳು ಸಿಗಲ್ಲ ಅದು ಅವರ ಸಂಸ್ಕೃತಿ ಎಂದರು.
Advertisement
ಹೆಣ್ಣು ಮಕ್ಕಳು ಮುಖ ಮುಚ್ಚಿಕೊಂಡರೆ ನಿಮಗೇನು ಸಮಸ್ಯೆ. ಅವರ ಮುಖ ನೋಡೋ ಆನಂದ ನಿಮಗ್ಯಾಕೆ. ಅವರು ಬ್ಯೂಟಿ ಕಂಟೆಸ್ಟ್ ಗೆ ಬರುತ್ತಿಲ್ಲ. ಕೆಲವು ಮುಸ್ಲಿಂ ಹೆಣ್ಣು ಮಕ್ಜಳು ಹಿಜಬ್ ಹಾಕಲ್ಲ. ಅವರಿಗೆ ಹಾಕಿ ಅಂತ ಒತ್ತಾಯ ಮಾಡಲ್ಲ. ಹಾಕುವವರನ್ನ ಯಾಕೆ ತಡೆಯುತ್ತೀರಾ ಎಂದು ಪ್ರಶ್ನಿಸಿದರು.