ಬೆಂಗಳೂರು: ನಮ್ಮ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ನಾವು ಅಧಿಕಾರಕ್ಕೆ ಬರದೇ ಹೋದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ. ಕಾಂಗ್ರೆಸ್‍ನವರು ಈ ಚಾಲೆಂಜ್ ತಗೋತಾರಾ ಎಂದು ಸಿಎಂ ಇಬ್ರಾಹಿಂ ಪ್ರಶ್ನಿಸುತ್ತಾ ಸವಾಲೆಸೆದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಪರಿಷತ್ ನಲ್ಲಿ ಹೆಚ್ಚು ಸ್ಥಾನ ಇದ್ದರೂ ಮುಸ್ಲಿಮರಿಗೆ ಯಾಕೆ ವಿಪಕ್ಷ ಸ್ಥಾನ ಕೊಟ್ಟಿಲ್ಲ. ಎರಡನೇ ಅಭ್ಯರ್ಥಿ ಯಾಕೆ ಕಾಂಗ್ರೆಸ್ ಹಾಕಿದ್ದಾರೆ ಅಂತ ಬಂದು ಪ್ರಮಾಣ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು.
Advertisement
Advertisement
ಜೆಡಿಎಸ್ ಅಭ್ಯರ್ಥಿಯನ್ನ ಸೋಲಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸೋಕೆ ಕಾಂಗ್ರೆಸ್ ಅಭ್ಯರ್ಥಿ ಹಾಕಿದೆ. ಜೆಡಿಎಸ್ 2023 ಕ್ಕೆ ಬರೊಲ್ಲ ಅಂತ ಕಾಂಗ್ರೆಸ್ ಅವರು ಚಾಲೆಂಜ್ ತಗೋತಾರಾ ಎಂದು ಪ್ರಶ್ನಿಸಿದರು. ಎರಡು ಪಕ್ಷಗಳಿಗಿಂತ ಹೆಚ್ಚು ಸ್ಥಾನ ನಾವು ಪಡೆಯುತ್ತೇವೆ. ಇಲ್ಲದೆ ಹೋದರೆ ನಾನು ರಾಜೀನಾಮೆ ನಿವೃತ್ತಿ ಪಡೆಯುತ್ತೇನೆ. ಕಾಂಗ್ರೆಸ್ ಈ ಚಾಲೆಂಜ್ ತೆಗೆದುಕೊಳ್ಳಲಿ ಎಂದು ಹೇಳಿದರು.
Advertisement
ಲೆಹರ್ ಸಿಂಗ್ ಜೊತೆ ಸಿದ್ದರಾಮಯ್ಯ ಡೀಲ್ ಮಾಡಿಕೊಂಡಿದ್ದಾರೆ. ಲೆಹರ್ ಸಿಂಗ್ ಬಿಜೆಪಿ ಅಭ್ಯರ್ಥಿ ಅಲ್ಲ, ಯಡಿಯೂರಪ್ಪ ಅಭ್ಯರ್ಥಿ. ಯಡಿಯೂರಪ್ಪ ಸಿಎಂ ಆಗೋಕೆ ಯಾರು ಕಾರಣ ಎಂದು ಸಿದ್ದರಾಮಯ್ಯ ವಿರುದ್ದ ಇಬ್ರಾಹಿಂ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಶ್ವದ ಎರಡನೇ ದುಬಾರಿ ಲೀಗ್ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?
Advertisement
ಯಡಿಯೂರಪ್ಪರನ್ನ ಇಷ್ಟು ಬೇಗ ಇಳಿಸುತ್ತಾರೆ ಅಂತ ಯಾರು ಅಂದುಕೊಂಡಿರಲಿಲ್ಲ. ಯಡಿಯೂರಪ್ಪರನ್ನ ಕೆಳಗೆ ಇಳಿಸಿದ್ದಕ್ಕೆ ಕಾಂಗ್ರೆಸ್ ನವರು ಆಳುತ್ತಿದ್ದಾರೆ. ಯಡಿಯೂರಪ್ಪರನ್ನ ಸಿದ್ದರಾಮಯ್ಯ ಸಿಎಂ ಮಾಡಿದ್ರಾ ಅಂತ ಡಿಕೆ ಶಿವಕುಮಾರ್ ಗೆ ಹೋಗಿ ಕೇಳಿ. ಲೆಹರ್ ಸಿಂಗ್ ಜೊತೆ ಸಿದ್ದರಾಮಯ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಇಬ್ರಾಹಿಂ ಆರೋಪ ಮಾಡಿದರು.
ಮುಸ್ಲಿಂ ಮೇಲೆ ಕಾಂಗ್ರೆಸ್ ಗೆ ಪ್ರೀತಿ ಇದ್ದರೆ ಜೈರಾಮ್ ರಮೇಶ್ ರನ್ನ ಎರಡನೇ ಅಭ್ಯರ್ಥಿ ಮಾಡಲಿ. ಮನ್ಸೂರ್ ಖಾನ್ ರನ್ನ ಮೊದಲ ಅಭ್ಯರ್ಥಿ ಮಾಡಲಿ. ಯಾಕೆ ಎರಡನೇ ಅಭ್ಯರ್ಥಿ ಮಾಡಿದ್ರಿ. ಪರಿಷತ್ ನಲ್ಲಿ ಹೆಚ್ಚು ಸ್ಥಾನ ಇದ್ದರು ನನಗೆ ವಿಪಕ್ಷ ಸ್ಥಾನ ಕೊಡಲಿಲ್ಲ. ಈಗ ಮುಸ್ಲಿಂ ಪರ ಎನ್ನುತ್ತೀರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಇಬ್ರಾಹಿಂ ಕಿಡಿಕಾರಿದರು.