ಬೆಂಗಳೂರು: ಎಷ್ಟು ದಿನ ಸದನದಲ್ಲಿ ನಾನು ಸದನದಲ್ಲಿ ಇರ್ತೀನೋ ಗೊತ್ತಿಲ್ಲ. ನನಗೆ ಮಾತಾಡಲು ಅವಕಾಶ ಕೊಡಿ ಅಂತ ಕಾಂಗ್ರೆಸ್‍ನ ರೆಬೆಲ್ ಸದಸ್ಯ ಸಿ.ಎಂ. ಇಬ್ರಾಹಿಂ ಸದನದಲ್ಲಿ ಪಟ್ಟು ಹಿಡಿದ ಘಟನೆ ಇಂದು ನಡೀತು.
Advertisement
ಶೂನ್ಯ ವೇಳೆ ಮುಗಿದ ಕೂಡಲೇ ಎದ್ದು ನಿಂತ ಇಬ್ರಾಹಿಂ, ಇಲ್ಲಿ ಎಷ್ಟು ದಿನ ನಾನು ಇಲ್ಲಿಯೇ ಇರ್ತೀನೋ ನನಗೆ ಗೊತ್ತಿಲ್ಲ. ನನಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು. ಇದನ್ನೂ ಓದಿ: ನೀನು ಜಮೀರ್ ಥರಾ ಆಡ್ತೀಯಲ್ಲೋ – ರೇಣುಕಾಚಾರ್ಯಗೆ ಮಾತಿನಿಂದ ತಿವಿದ ಬಿಎಸ್‍ವೈ
Advertisement
ಹಿಜಬ್ ವಿಚಾರವಾಗಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಲು ಸಿಎಂ ಇಬ್ರಾಹಿಂ ಮುಂದಾಗಿದ್ದರು. ಆದರೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವಕಾಶ ಕೊಡಲಿಲ್ಲ. ಇದಕ್ಕೆ ಸಿಟ್ಟಿಗೆದ್ದು ಸಿಡಿಮಿಡಿಗೊಂಡ ಸಿಎಂ ಇಬ್ರಾಹಿಂ, ಯಾಕೆ ಈ ತರಹ ತಾರತಮ್ಯ ಮಾಡ್ತಿದ್ದೀರಿ..? ಯಾವಾಗ ನನಗೆ ಅವಕಾಶ ಕೊಡ್ತೀರಿ ಎಂದು ಪ್ರಶ್ನೆ ಮಾಡಿದರು.
Advertisement
Advertisement
ನನ್ನ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಆಗುತ್ತೆ ಅಂತ ನನಗೆ ಶೂನ್ಯವೇಳೆ ಅವಕಾಶ ಕೊಡ್ತಿಲ್ವಾ? ನಾಳೆ ಕೊಡ್ತೀರೋ, ನಾಡಿದ್ದು ಕೊಡ್ತೀರೋ ಹೇಳಿ. ಇಲ್ಲಿ ಇದ್ದಾಗಲೇ ನಾನು ಮಾತಾಡಬೇಕು ಎಂದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಭಾಪತಿಗಳು ಇವತ್ತು ಅಜೆಂಡಾದಲ್ಲಿ ಸೇರಿಸಿಲ್ಲ, ಅವಕಾಶ ಇಲ್ಲ ಅಂತಾ ತಿಳಿಸಿದರು. ಸಭಾಪತಿಗಳ ಮಾತಿನಿಂದ ಸಿಟ್ಟಿಗೆದ್ದು ಇಬ್ರಾಹಿಂ ಕಲಾಪದಿಂದ ಹೊರ ನಡೆದರು.