ಬೆಂಗಳೂರು: ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ (CM Ibrahim) ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಬಳಿಕ ದೇವೇಗೌಡರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಹೊಣೆ ನಾನು ಹೊರುತ್ತೇನೆ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ದೇವೇಗೌಡ (HD Devegowda) ರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಹೊಸ ಸರ್ಕಾರ ಬಂದಿದೆ. ಅವರಿಗೆ ಶುಭವಾಗಲಿ. ರಾಜ್ಯದಲ್ಲಿ ಬಿಜೆಪಿ (BJP) ಆಡಳಿತ ವಿರೋಧಿ ಇತ್ತು. ಇದನ್ನ ಕಾಂಗ್ರೆಸ್ (Congress) ಅವರು ಹಣದಿಂದ ಮತ್ತೊಂದು ಮಗದೊಂದು ವಿಚಾರದಲ್ಲಿ ಗೆದ್ದಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ, ಹಣ ಇಲ್ಲ. ನಮಗೆ ಯಾರ ಬೆಂಬಲವೂ ಇರಲಿಲ್ಲ. ಆದರೂ ನಾವು 60 ಲಕ್ಷ ಮತ ಪಡೆದಿದ್ದೇವೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯ್ತಿ, ಲೋಕಸಭೆ ಚುನಾವಣೆ (Loksabha Election) ಗೆ ನಾವು ಸಿದ್ಧವಾಗಿ ಕೆಲಸ ಮಾಡ್ತೀವಿ. ಸಿಎಂಗೆ ಒಳ್ಳೆಯದಾಗಲಿ. ಕೊಟ್ಟ ಭರವಸೆ ಈಡೇರಿಸಲಿ. 3 ತಿಂಗಳು ಅವರಿಗೆ ಸಮಯ ಕೊಡ್ತೀವಿ. 3 ತಿಂಗಳು ಹನಿಮೂನ್ ಸಮಯ. ಜನರಿಗೆ ಕೊಟ್ಟ ಭರವಸೆ ಕಾಂಗ್ರೆಸ್ ಅವರು ಈಡೇರಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?
ನಮ್ಮ ಸಮಾವೇಶಕ್ಕೆ ಜನ ಸೇರುತ್ತಿದ್ದರು. ಆದರೆ ಮತವಾಗಿ ಅದನ್ನ ಕನ್ವರ್ಟ್ ಮಾಡೋಕೆ ನಮ್ಮ ಸ್ಥಳೀಯ ನಾಯಕರುಗಳಿಗೆ ಆಗಲಿಲ್ಲ. ನಮ್ಮ ನಾಯಕರು ಮತ ಪಡೆಯಲು ವಿಫಲರಾದ್ರು. 15-20 ಕ್ಷೇತ್ರದಲ್ಲಿ 2 ಸಾವಿರ ಮತಗಳಲ್ಲಿ ಸೋತಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಅವರು ಜೆಡಿಎಸ್ ಮುಗಿಸೋಕೆ ಒಳ ಒಪ್ಪಂದ ಮಾಡಿಕೊಂಡಿದ್ರು. ಹಾಸನ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳೇ ಇದಕ್ಕೆ ಸಾಕ್ಷಿ. ಹಾಸನದಲ್ಲಿ ಕಾಂಗ್ರೆಸ್ ವೋಟ್ ಯಾರಿಗೆ ಹೋಯ್ತು. ಬಿಜೆಪಿ- ಕಾಂಗ್ರೆಸ್ ಒಳ ಒಪ್ಪಂದ ಎಂದು ಇದೇ ವೇಳೆ ಇಬ್ರಾಹಿಂ ಗಂಭೀರ ಆರೋಪ ಮಾಡಿದರು.
ಜೆಡಿಎಸ್ ನಲ್ಲಿ ಇಬ್ರಾಹಿಂ ಪಾತ್ರ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸದಾ ಜನರ ಮಧ್ಯೆ ಇರೋನು. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ ಎಂದ ಅವರು, ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಗೌರವ ಇಲ್ಲದ ಕಡೆ ನಾನು ಇರೊಲ್ಲ. ಸ್ಥಾನಕ್ಕೆ ನಾನು ಹೋಗಿಲ್ಲ. ಮಾನಕ್ಕಾಗಿ ನಾನು ಬಿಟ್ಟು ಬಂದೆ. ಅಧಿಕಾರದ ಆಸೆ ಇಲ್ಲ ಎಂದರು.