ಬೆಂಗಳೂರು: ಮಣಿಪುರದಲ್ಲಿ (Manipur) ಹೆಣ್ಣುಮಕ್ಕಳ ಮೇಲೆ ರೇಪ್ ಆಗಿದೆ. ಇಲ್ಲಿ ಕ್ಯಾಮೆರಾ ಅಂತೀರಾ ಎಂದು ಉಡುಪಿ ವೀಡಿಯೋ ಪ್ರಕರಣ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ವೋಟ್ ಬ್ಯಾಂಕ್. ಮಧ್ಯದಲ್ಲಿ ಶಿಕಾರಿ ನಾವು. ಇಬ್ಬರೂ ನಮ್ಮನ್ನು ತೋರಿಸಿ ವೋಟು ಮಾಡಿದ್ರು. ಭಯೋತ್ಪಾದನೆ ಶುರುವಾಗುತ್ತಿದೆ ಎನ್ನುವುದೇ ಇವರಿಗೆ ಲೋಕಸಭಾ ವಿಷಯವಾಗಿದೆ. ಮಣಿಪುರದಲ್ಲಿ ಸುಡುತ್ತಿದೆ. ಅದರ ಬಗ್ಗೆ ಮಾತನಾಡುತ್ತಿಲ್ಲ. ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ರೇಪ್ ಆಗಿದೆ. ಇಲ್ಲಿ ಕ್ಯಾಮೆರಾ ಎನ್ನುತ್ತಿದ್ದೀರಾ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ – ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು
Advertisement
ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ಬಗ್ಗೆ ತನ್ವೀರ್ ಸೇಠ್ ಪತ್ರದ ವಿಚಾರವಾಗಿ ಮಾತನಾಡಿ, ನ್ಯಾಯಾಂಗ ತನಿಖೆ ಆಗಬೇಕು. ಇದು ಮತೀಯ ಗಲಭೆಯಲ್ಲ ಎಂದು ವರದಿ ಬಂದಿತ್ತು. ಎರಡು ತಂಡಗಳು ಡ್ರಗ್ಸ್ ಮಾಫಿಯಾ ನಡೆಸುತ್ತಿತ್ತು. ಡ್ರಗ್ಸ್ ಮಾರಾಟ ಮಾಡಲು ಆಗದವರು ಆ ದಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ.
Advertisement
Advertisement
ಅಂದಿನ ಬಿಜೆಪಿ ಸರ್ಕಾರ ಎನ್ಐಎ ತನಿಖೆಗೆ ಕೊಟ್ಟಿದ್ದರು. ಯಾಕೆ ಅದನ್ನು ಎನ್ಐಎ ತನಿಖೆಗೆ ಕೊಟ್ಟಿದ್ದು? ಅಲ್ಲೇನಾದರೂ ಕೊಲೆ ನಡೆದಿತ್ತಾ? ಹುಬ್ಬಳ್ಳಿ ವಿಚಾರವನ್ನು ಸಹ ಎನ್ಐಎಗೆ ವಹಿಸಿದ್ದೀರಿ. ಹುಬ್ಬಳ್ಳಿಯಲ್ಲಿ ಎಸ್ಪಿಗೆ ಧಿಕ್ಕಾರ ಕೂಗಿದರೆ ಕೇಸ್ ಹಾಕಲಾಗಿದೆ. ಗೃಹ ಸಚಿವರು ಇದನ್ನು ನ್ಯಾಯಾಂಗ ತನಿಖೆ ಮಾಡಿಸಲಿ. ತಪ್ಪು ಎಂದು ಗೊತ್ತಾದರೆ ಗಲ್ಲಿಗೆ ಹಾಕಲಿ. ಈಗ ಅಮಾಯಕರನ್ನ ಒಳಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಸರ್ಕಾರ ಉರುಳಿಸಲು ಮಾಜಿ ಸಿಎಂ ಕುಮಾರಸ್ವಾಮಿಯವರು ಸಿಂಗಪೂರ್ನಲ್ಲಿ ತಯಾರಿ ನಡೆಸಿದ್ದಾರೆ ಎಂಬುದು ಕಾಂಗ್ರೆಸ್ನವರ ಊಹೆ. ಕುಮಾರಸ್ವಾಮಿಯವರು ಕುಟುಂಬದ ಜೊತೆಗೆ ಸಿಂಗಾಪೂರ್ಗೆ ತೆರಳಿದ್ದಾರೆ. ಕಾಂಗ್ರೆಸ್ನವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಇವರಿಗೆ ಸರ್ಕಾರ ನಡೆಸಲು ಆಗುತ್ತಿಲ್ಲ. ಅದಕ್ಕೆ ಹೀಗೆ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆದರು.
ಕುಮಾರಸ್ವಾಮಿ ಬಿಜೆಪಿ ಪತ್ರದಲ್ಲಿ ಸಹಿ ಹಾಕಿದ ವಿಚಾರಕ್ಕೆ ಕಾಂಗ್ರೆಸ್ ಟೀಕಿಸಿದೆ. ಶಾಸಕರಾಗಿ ಪರಸ್ಪರವಾಗಿ ವಿಪಕ್ಷವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ನವರು ಆಫೀಸ್ಗೆ ಬಂದಿದ್ದರು. ಅವರು ಮಾಡಿದರೆ ತಪ್ಪಲ್ಲ. ಜನತಾದಳ ಮಣ್ಣಿನ ಪಕ್ಷ, ರೈತರ ಪಾರ್ಟಿ ಏನಾದರೂ ಮಾಡಿದರೆ ಟೀಕಿಸುತ್ತೀರಿ. ಮಮತಾ ಹಾಗೂ ನಿತೀಶ್ ಇಬ್ಬರೂ ಬಿಜೆಪಿ ಜೊತೆಗೆ ಹೋಗಿ ಬಂದವರೇ ಆಗಿದ್ದಾರೆ. ನಿಮ್ಮದು ಬಿಳಿ ಬಟ್ಟೆ, ಹಳೇ ಪಾರ್ಟಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ (BJP) ಜೊತೆ ವಿಲೀನವಾಗಲಿ ಅಥವಾ ಮೈತ್ರಿ ಆಗಲಿ ಮಾಡಿಕೊಳ್ಳುವುದಿಲ್ಲ. ನಾವು ಯಾರ ಜೊತೆಗೂ ಇಲ್ಲ ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ. ಇಷ್ಟು ದೊಡ್ಡ ಪಕ್ಷವಾಗಿ ಬಿಜೆಪಿಗೆ ವಿಪಕ್ಷ ನಾಯಕರ ಆಯ್ಕೆ ಮಾಡಲು ಆಗಿಲ್ಲ. ಆದರೂ ಇನ್ನೂ ನಮಗೆ ಬುದ್ದಿ ಹೇಳುತ್ತಾರೆ ಎಂದು ಕುಟುಕಿದರು.
ಗೃಹಲಕ್ಷ್ಮಿ ಯೋಜನೆ ಶುರುವಾದರೆ ಅತ್ತೆ ಸೊಸೆ ನಡುವೆ ಜಗಳ ಶುರುವಾಗಲಿದೆ. ಅದನ್ನು ಬೇಗ ಮಾಡಿ. ಕರೆಂಟ್ ಬಿಲ್ 200 ಯೂನಿಟ್ ಫ್ರೀ ಎಂದು ಹೇಳಿ ಡಬಲ್ ರೇಟ್ ಮಾಡಿದ್ದೀರಿ. ಹೀಗಾದರೆ ಜನ ಬೀದಿಗೆ ಬರುತ್ತಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI
Web Stories