ಬೆಂಗಳೂರು: ಮದುವೆ ಮಾಡುವುದು ದೊಡ್ಡ ವಿಷಯವಲ್ಲ. ಗಂಡು ಮಾಡಿ ತಂದ ಬಳಿಕ ಉಳಿದ ಕೆಲಸ ನಾವು ಮಾಡುತ್ತೇವೆ ಅಂತ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಇಂದು ಪ್ರತಿಕ್ರಿಯಿಸಿದ್ದಾರೆ.
ಅವರು ಇಂದು ನಗರದಲ್ಲಿ ಸಿಎಂ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಮದುವೆ ಮಾಡುವುದು ಬಾರಿ ದೊಡ್ಡ ಮಾತು. ಒಂದು ಸಲ ಗಂಡು ಕೂರಿಸಿದ ಮೇಲೆ ಮುಂದಿನ ಕೆಲಸ ನಮ್ಮದು ಅಂತ ನಕ್ಕಿದ್ದಾರೆ.
ಆದ್ರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದಾಗ, ರೀ ಅದೆಲ್ಲಾ ಫೇಕ್ ನ್ಯೂಸ್. ಅವೆಲ್ಲಾ ನ್ಯೂಸ್ ಗಳಿಗೆ ಉತ್ತರ ಕೊಡಕ್ಕಾಗಲ್ಲ ಅಂತ ಹೇಳಿ ಸಿಎಂ ಜಾರಿಕೊಂಡಿದ್ದಾರೆ.
ಇದನ್ನೂ ಓದಿ: ಮದುಮಗಳು ಚೆನ್ನಾಗಿ ಇದ್ರೆ ಗಂಡುಗಳು ಜಾಸ್ತಿ ಬರ್ತಾವೆ: ಸಿಎಂ ಇಬ್ರಾಹಿಂ ಈ ಮಾತು ಹೇಳಿದ್ಯಾಕೆ?
ಇಬ್ರಾಹಿಂನನ್ನು ಪರಿಷತ್ ಸದಸ್ಯನಾಗಿ ಮಾಡಿದ್ದೇ ಹೆಚ್ಚು. ಇನ್ನೂ ಮಂತ್ರಿ ಸ್ಥಾನ ಕೊಡ್ತೀನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡಿದ್ದಾರೆ. ಅವರು ತುಮಕೂರಿನಲ್ಲಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಇಬ್ರಾಹಿಂಗೆ ಮಂತ್ರಿಸ್ಥಾನ ಸಾಧ್ಯತೆ ಎಂದು ವರದಿ ಮಾಡಲಾಗಿತ್ತು. ಈ ವರದಿ ಓದಿದ ಸಿಎಂ, ಯಾವುದೇ ಕಾರಣಕ್ಕೆ ಇಬ್ರಾಹಿಂನನ್ನು ಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಏಕವಚನದಲ್ಲೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯರ ಈ ಮಾತಿಗೆ ಎದುರಿಗೆ ಕುಳಿತಿದ್ದ ಸಚಿವ ಜಯಚಂದ್ರ, ಶಾಸಕ ರಫಿಕ್ ಅಹಮದ್ ಸೇರಿದಂತೆ ಇತರೇ ಕಾಂಗ್ರೆಸ್ ಮುಖಂಡರು ಗೊಳ್ ಎಂದು ನಕ್ಕಿದ್ದರು.