ಬೆಂಗಳೂರು: ಹಿಜಬ್ ತೀರ್ಪಿನ ವಿಚಾರ ಇಲ್ಲಿಗೆ ನಿಲ್ಲುವುದಿಲ್ಲ. ನಾವು ಸುಪ್ರೀಂ ಕೋರ್ಟ್‍ಗೆ ಹೋಗುತ್ತೇವೆ ಎಂದು ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಬ್ ತೀರ್ಪು ವಿಚಾರವಾಗಿ ಇವತ್ತು ನ್ಯಾಯಲಯದ ತೀರ್ಪು ಬಂದಿದೆ. ಇದರಲ್ಲಿ ಮೂಲಭೂತವಾಗಿ ಧರ್ಮಕ್ಕೆ ಅಡಚಣೆ ಇಲ್ಲ ಎಂದಿದ್ದಾರೆ. ಇದರ ಮೇಲೆ ಸುಪ್ರೀಂಗೆ ಹೋಗಲು ಇವತ್ತು ಸಮಾಜದ ಮುಖಂಡರ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಧರ್ಮದ ದೃಷ್ಠಿಯ ಬದಲು ಸಂವಿಧಾನದ ದೃಷ್ಟಿಯಿಂದ ನೋಡಬೇಕು ಎಂದು ತಿಳಿಸಿದರು.
Advertisement
Advertisement
ಇಂದು ತಿಲಕ, ವಿಭೂತಿ, ಬಿಂದಿ ಇಟ್ಕೊಳ್ಳೋದು ಚಾಯ್ಸ್ ಇದೆಯೋ, ಅದೇ ರೀತಿ ಹಿಜಬ್ ಕೂಡ ಆಗಿದೆ. ನಮ್ಮ ತಾಯಂದಿರು ಸೆರಗು ಹಾಕ್ತಾರೆ, ನಾಳೆ ಸೆರಗು ಹಾಕಿಕೊಳ್ಳೋದು ಬೇಡ ಎಂದು ನ್ಯಾಯಾಲಯ ಹೇಳಿದರೆ ಅದನ್ನ ಸುಪ್ರಿಂ ಕೋರ್ಟ್‍ನಲ್ಲಿ ನಿರ್ಧರಿಸಬೇಕಾಗುತ್ತದೆ. ಅದೇ ರೀತಿ ಇದು ಆಗಿದೆ. ಯಾರು ಕೂಡ ಬೀದಿಗೆ ಇಳಿಯುವ ಅವಶ್ಯಕತೆ ಇಲ್ಲ. ನಾವು ಒಗ್ಗಟ್ಟಾಗಿ ಸುಪ್ರೀಂಕೋರ್ಟ್‍ಗೆ ಹೋಗಲು ಪ್ರಯತ್ನ ಪಡ್ತಿದ್ದೇವೆ ಎಂದು ಭರವಸೆ ನೀಡಿದರು. ಹಿಜಬ್ ನಿಷೇಧದ ಹೈಕೋರ್ಟ್ ತೀರ್ಪು ತೀವ್ರ ನಿರಾಶಾದಾಯಕ: ಕಾಶ್ಮೀರ ಮಾಜಿ ಸಿಎಂ
Advertisement
ಮುಂಬೈನ ಖ್ಯಾತ ವಕೀಲರ ಜೊತೆ ಕೂಡ ನಾನು ಮಾತನಾಡಿದ್ದೇನೆ. ಇದು ಇಲ್ಲಿಗೆ ನಿಲ್ಲೋದಿಲ್ಲ. ನಾಳೆ ಜೀನ್ಸ್ ಪ್ಯಾಂಟ್ ಹಾಕಬಾರದು ಅಂತಾರೆ. ಅದು ಕೂಡ ಇದೇ ರೀತಿ ಆದರೆ ಏನು. ಕೂಡಲೇ ಈ ಎಲ್ಲಾ ವಿಚಾರದ ಬಗ್ಗೆ ಸಿಎಂ ತೀರ್ಮಾನ ಮಾಡಬೇಕು ಎಂದು ಹೇಳಿದರು. ಶಾಲೆಲಿ ಎಲ್ರೂ ಪ್ರೀತಿ ವಿಶ್ವಾಸದಿಂದ ಇರಿ, ಬೇರೆಯದಕ್ಕೆ ಅವಕಾಶ ನೀಡ್ಬೇಡಿ: ಸಿದ್ದಗಂಗಾ ಶ್ರೀ