ಬೆಂಗಳೂರು: ನಾನು ಕಿಂಗ್ ಆಗುವುದಕ್ಕೆ ಇಚ್ಛೆ ಇಲ್ಲ, ಕಿಂಗ್ ಮೇಕರ್ ಆಗೋಕೆ ಇಷ್ಟ ಪಡುತ್ತೇನೆ. ರಾಜ್ಯವೇ ನನ್ನ ಕ್ಷೇತ್ರ ಎಂದು ಎಂಎಲ್‍ಸಿ ಸಿಎಂ ಇಬ್ರಾಹಿಂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸೈದ್ಧಾಂತಿಕವಾಗಿ ಹೋರಾಟ ಮಾಡಿ ಬಂದವನು. ಹಾಗಾಗಿ ಜೆಡಿಎಸ್ ಕಡೆ ಹೋಗ್ತಿದ್ದೇನೆ. ಜೆಡಿಎಸ್‍ಗೆ ಹೋದರೆ ಪಕ್ಷದ ಅಧ್ಯಕ್ಷ ಮಾಡೋದು ಅಥವಾ ನನಗೆ ಯಾವ ಸ್ಥಾನ ಕೊಡೋದು, ಬಿಡೋದು ಅವರಿಗೆ ಬಿಟ್ಟಿದ್ದು. ನಾನು ಯಾವುದೇ ಸ್ಥಾನ ಅಪೇಕ್ಷೆ ಮಾಡುತ್ತಿಲ್ಲ, ಮಾನ ನಿರೀಕ್ಷೆ ಮಾಡಿ ಹೋಗ್ತೀನಿ. ನಾನು ಕ್ಷೇತ್ರ ರಾಜಕಾರಣದ ನಾಯಕ ಅಲ್ಲಾ ಎಂದರು.
Advertisement
Advertisement
ದೇವೇಗೌಡರ ವ್ಯಕ್ತಿತ್ವಕ್ಕೆ ನಾನು ಬೆಲೆ ಕೊಡುತ್ತೇನೆ. ಕಾಂಗ್ರೆಸ್‍ನಿಂದ, ಬಿಜೆಪಿಯಿಂದ ಎಲ್ಲಾ ಕಡೆಯಿಂದಲೂ ಈಗ ಆಚೀಚೆ ಹೋಗುತ್ತಾರೆ. ಟೆಂಟಿಗೆ ಬೆಂಕಿಗೆ ಬಿದ್ದಾಗ ಹೇಗೆ ಓಡ್ತಾರೋ, ಹಾಗೆ ಆಚೀಚೆ ಓಡಿ ಹೋಗ್ತಾರೆ ಎಂದು ಟೀಕಿಸಿದರು.
Advertisement
ನಾವು ರಾಜ್ಯದಲ್ಲಿ 21% ಇದ್ದೀವಿ. 70 ವರ್ಷ ರಾಜ್ಯದಲ್ಲಿ ಯಾರಾದರೂ ಮುಸ್ಲಿಂ ಅಧ್ಯಕ್ಷರಾದ್ರಾ? ಯಾರಾದರೂ ನಮಗೆ ಒಳ್ಳೆಯ ಖಾತೆ ನೀಡಿದ್ರಾ? ಹಿಜಾಬ್ ವಿಚಾರ ಪ್ರಶ್ನೆ ಮಾಡಿದವರು, ಚೆನ್ನಮ್ಮ, ಇಂದಿರಾ ಗಾಂಧಿ ಸೆರಗಾಕುತ್ತಿದ್ದರು. ಅದನ್ನ ಪ್ರಶ್ನೆ ಮಾಡಿದ್ರಾ.? ನಮಗೆ ಸ್ಥಾನ ಕೊಡೋದು ಬೇಡಾ, ನಮ್ಮನ್ನ ಗೌರವಯುತವಾಗಿ ಕಾಣಿ ಎಂದರು.
Advertisement
ನಾನು ಸೃಷ್ಟಿ ಮಾಡಿದ ಜಾಗದಲ್ಲಿ ಕೂರೋಕೆ ಇಷ್ಟ ಪಡಲ್ಲ, ನಾನೇ ಸೃಷ್ಟಿ ಮಾಡಿದ ಜಾಗದಲ್ಲಿ ಕೂರೋಕೆ ಇಷ್ಟ ಪಡುತ್ತೇನೆ. ಮುಂದೆ ಜೆಡಿಎಸ್‍ನಿಂದ ಎಷ್ಟು ಜನ ಮುಸ್ಲಿಂ ಆಯ್ಕೆ ಆಗಿ ಬರ್ತಾರೆ ನೋಡಿ. ಕಾಂಗ್ರೆಸ್‍ನಲ್ಲಿ ನಮ್ಮನ್ನ ತುಂಬಾ ಚೆನ್ನಾಗಿ ನೋಡಿಕೊಂಡರು. ಬಸ್‍ಸ್ಟಾಂಡ್‍ನಲ್ಲಿ ಮೇಕಪ್ ಮಾಡಿ ನಿಲ್ಸಿ, ಗಿರಾಕಿ ಕರೆಯೋಕೆ ನಿಲ್ಸಿದರು. ಬರೀ ಒಕ್ಕಲಿಗರು, ಸಾಬ್ರು ಸೇರಿದರೆ 65 ಸೀಟು ಬರುತ್ತೆ. ಲಿಂಗಾಯತರು, ಸಾಬ್ರು ಸೇರಿದರೆ 120 ಸೀಟು ಬರುತ್ತೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್‍ನಲ್ಲಿ ಗೊಡ್ಡೆಮ್ಮೆ ಇದಾವೆ. ಒಬ್ಬರಿಗಾದ್ರೂ ನಾಲ್ಕು ಓಟ್ ಹಾಕ್ಸೋ ತಾಖತ್ ಇದೆಯಾ.? ಶಾಮನೂರ್ ಶಿವಶಂಕರಪ್ಪ ಅವರಿಗೆ ಮುಸ್ಲಿಮರು ಓಟ್ ಹಾಕಿದ್ದಕ್ಕೆ ಗೆಲ್ತಿದ್ದಾರೆ. ಅವರ ಮನೆಯವರೇ ಅವರಿಗೆ ಓಟ್ ಹಾಕ್ತಾರ ಗೊತ್ತಿಲ್ಲ. ಯಡಿಯೂರಪ್ಪ ವಿರುದ್ಧ ಯಾರಾದ್ರೂ ಕ್ರಮ ಕೈಗೊಂಡ್ರೆ ಹುಷಾರ್ ಅಂತ ಶಾಮನೂರ್ ಶಿವಶಂಕರಪ್ಪ ಹೇಳಿದರು. ಅವರ ವಿರುದ್ಧ ಕ್ರಮ ಕೈಗೊಂಡ್ರಾ.? ನಾನು ದೇವೇಗೌಡರ ಮನೆಗೆ ಹೋಗಿದ್ದೇ ತಡ ಇವರಿಗೆ ಹೊಟ್ಟೆ ಉರಿ ಬಂತು ಎಂದು ಕಿಡಿಕಾರಿದರು. ಇದನ್ನೂ ಓದಿ: ಜನರ ಉದ್ದಾರ ಮಾಡುತ್ತೇವೆ ಅಂತ ಸ್ವಯಂ ಉದ್ಧಾರ ಆದ ಸಾವಿರಾರು ಉದಾಹರಣೆಗಳಿವೆ: ಬೊಮ್ಮಾಯಿ
ನಾನು ಧ್ವನಿ ಎತ್ತಿದ ಬಳಿಕ ಯು.ಟಿ ಖಾದರ್‌ಗೆ ಸ್ಥಾನ ಕೊಡಬೇಕಾಯ್ತಾ. ನಾನು ಕಮ್ಯುನಲ್, ಕರೆಪ್ಟ್ ಅಂತ ಯಾರೂ ಕರೆದಿಲ್ಲ.
ಆರ್‍ಎಸ್‍ಎಸ್ ಕೂಡ ನನ್ನನ್ನ ಕಮ್ಯೂನಲ್ ಅಂತ ಕರೆದಿಲ್ಲ. ನಾನು ನಾಗ್ಪುರದಲ್ಲಿ ಕೂಡ ಭಾಷಣ ಮಾಡಿ ಬಂದಿದ್ದೆ. ಪ್ರಶಾಂತ್ ಭೂಷಣ್ ಕಡೆಯವರು ಬಂದು ನನ್ನ ಭೇಟಿ ಮಾಡಿದರು. ಇಲ್ಲಿ ಆಪ್ ಬರೋದಿಲ್ಲ. ಇಲ್ಲಿ ಕಸಬರಕೆ ಒಂದೆರಡು ಸಾಕಾಗಲ್ಲ. ಇಲ್ಲಿ ಅವರು ಪಕ್ಷ ಕಟ್ಟೋದಕ್ಕೆ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಒಂದಾದ್ರೆ ದೇಶಕ್ಕೆ ಒಳ್ಳೆಯದು: ಹೆಚ್‍ಡಿಡಿ