ಮೈಸೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಕ್ಕಳು ಇನ್ನೂ ಬದುಕಿದ್ದಾರೆ. ಸ್ವಸ್ಥ ಸಮಾಜ ಕಟ್ಟುತ್ತೇವೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಲು ಇವರು ವಿರೋಧಿಸುತ್ತಾರೆ. ಮೈಸೂರಿನ ಮಹಾರಾಜರು ಹೆಣ್ಣು ಮಕ್ಕಳು ಸ್ಕೂಲ್ ಗೆ ಹೋಗುವ ಗಾಡಿಗೆ ಪರದೆ ಹಾಕಿಸುತ್ತಿದ್ದರು. ಇದನ್ನು ಇವರು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಹುಚ್ಚು ಮುಂಡೇವು ಅಧಿಕಾರಕ್ಕೆ ಬಂದು ನಮಗೆ ಹೆದರಿಸುತ್ತಿವೆ. ಗೌಡ್ರ ಮಕ್ಕಳು ಇನ್ನೂ ಬದುಕಿದ್ದಾರೆ. ಸ್ವಸ್ಥ ಸಮಾಜ ಕಟ್ಟುತ್ತೇವೆ. 1995 ರಲ್ಲಿ ಜನತಾ ಸರಕಾರ ತದ್ದಂತೆ 2023 ರಲ್ಲೂ ಸರ್ಕಾರ ತರೋಣ ಎಂದು ಹೇಳಿದರು. ಇದನ್ನೂ ಓದಿ: ಮುಸ್ಕಾನ್‍ಳನ್ನು ಅಲ್‍ಖೈದಾ ಮುಖ್ಯಸ್ಥ ಬೆಂಬಲಿಸಿರುವುದು ಆತಂಕಕಾರಿ: ಮುತಾಲಿಕ್
Advertisement
Advertisement
ಮುಸ್ಕಾನ್‍ಗೆ ಅಲ್ ಖೈದಾ ಸಂಘಟನೆ ಬೆಂಬಲದ ವಿಚಾರ ಕುರಿತು ಪ್ರತಿಕ್ರಿಯಿಸಿ, ಅಲ್ ಖೈದಾಗೂ ಕರ್ನಾಟಕ ಹಾಗೂ ಭಾರತಕ್ಕೆ ಸಂಬಂಧವಿಲ್ಲ. ಮುಸ್ಕಾನಾ ಹುಡುಗಿಗೆ ಅಲ್ ಖೈದಾ ಸಂಘಟನೆಯೆ ಗೊತ್ತಿಲ್ಲ. ಇದೆಲ್ಲಾ ಇವರ ಸೃಷ್ಟಿ. ಅಲ್‍ಖೈದಾ, ಪಾಲಾಖೈದಾ ಎಂದು ಇವರೇ ಸೃಷ್ಟಿ ಮಾಡುತ್ತಿದ್ದಾರೆ. ಅಲ್ ಖೈದಾ ಇದ್ದರೆ ಅವರನ್ನು ಹುಡುಕಿ ಬಂಧಿಸಿ. ಸುಮ್ಮನೆ ಏನೇನೋ ಮಾತಾಡಬೇಡಿ ಎಂದು ಗರಂ ಆದರು.
ಬೆಂಗಳೂರಿನಲ್ಲಿ ನಡೆದ ಯುವಕನ ಕೊಲೆ ವಿಚಾರದಲ್ಲಿ ಗೃಹ ಸಚಿವರ ಭಿನ್ನ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ತಲೆ ಕೆಟ್ಟಿದೆ. ಮಂಗನಿಗೆ ಹೆಂಡ ಕುಡಿಸಿದರೆ ಹೇಗೆ ನೃತ್ಯ ಮಾಡುತ್ತೋ ಹಾಗೇ ಇವರು ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ