-80 ವರ್ಷವಾದರೂ ಇವರಿಗೆ ಮದುವೆ ಆಗುವ ಚಿಂತೆ
-ಸಿದ್ದರಾಮಯ್ಯ ದಾರಿ ತಪ್ಪಿಬಿಟ್ಟರು
-ಸಿದ್ದರಾಮಯ್ಯ ದಾರಿ ತಪ್ಪಿಬಿಟ್ಟರು
ಕೊಪ್ಪಳ: ಯಡಿಯೂರಪ್ಪ ತ್ಯಾಗ ಮಾಡಿಲ್ಲ. ಯಡಿಯೂರಪ್ಪ ಅವರನ್ನು ಪಕ್ಷದಿಂದ ದಬ್ಬಿದ್ರು ಎಂದು ಜೆಡಿಎಸ್ ರಾಜ್ಯದ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕ್ಷೇತ್ರವನ್ನು ತ್ಯಾಗ ಮಾಡಿಲ್ಲ. ಯಡಿಯೂರಪ್ಪ ಅವರನ್ನ ಪಕ್ಷದಿಂದ ದಬ್ಬಿದ್ದಾರೆ. ಹಾಗಾಗಿ ಮಗನಿಗೆ ಆ ಟಿಕೆಟ್ ಕೊಡಲಿ ಎಂದು ಯಡಿಯೂರಪ್ಪ ಅನೌನ್ಸ್ ಮಾಡಿದ್ದಾರೆ. ಯಡಿಯೂರಪ್ಪಗೆ ಎಂತಹ ಕಾಲ ಬಂತು ನೋಡಿ ವ್ಯಂಗ್ಯವಾಡಿದರು. ಇದನ್ನೂ ಓದಿ: ತನ್ನ ಹೆಸರಲ್ಲಿ ಹೋಟೆಲ್ ರಿಜಿಸ್ಟರ್ ಮಾಡಿಲ್ಲ ಅಂತಾ ಅಪ್ಪ-ಅಮ್ಮನ ತಲೆಗೆ ಗುಂಡಿಕ್ಕಿ ಕೊಂದ
Advertisement
Advertisement
ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಮತಗಳು ಕಾರಣ. ವೀರಶೈವ ಸಮಾಜದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಲ್ಪ ಸಂಖ್ಯಾತರು, ದಲಿತರು ಕಾಂಗ್ರೆಸ್ ಬಿಟ್ಟಿದ್ದಾರೆ. ಸಿದ್ದರಾಮಯ್ಯ ತಬ್ಬಲಿ ನೀನಾದೆಯಾ ಮಗನೇ. ಸಿದ್ದರಾಮಯ್ಯ ಬಗ್ಗೆ ನಾನು ಪಕ್ಷ ಬಿಡುವಾಗ ಹೇಳಿದ್ದೆ. ಸಿದ್ದರಾಮಯ್ಯಗೆ ನಿಲ್ಲೋಕೆ ಜಾಗ ಇರಲಿಲ್ಲ. ಚಿಮ್ಮನಕಟ್ಟಿ ಒಪ್ಪಿಸಿ ನಾನೇ ಬದಾಮಿಗೆ ಕರೆದುಕೊಂಡು ಬಂದೆ. ಸಿದ್ದರಾಮಯ್ಯ ಗೆಲುವಿಗೆ ನಾನೇ ಕಾರಣ. ಸಿದ್ದರಾಮಯ್ಯ ನಮಗೆ ಸಾಮಾಜಿಕ ನ್ಯಾಯ ಕೊಡಲಿಲ್ಲ. ಸಿದ್ದರಾಮಯ್ಯ ಈ ಬಾರಿ ಎಲ್ಲೇ ನಿಂತರೂ ಕಷ್ಟ. ಸಿದ್ದರಾಮಯ್ಯ ಬಗ್ಗೆ ನನಗೆ ಅನುಕಂಪ ಇದೆ. ಸಿದ್ದರಾಮಯ್ಯ ವಿಧಾನಸಭೆಗೆ ಬರಬೇಕು. ಆದರೆ ಸಿದ್ದರಾಮಯ್ಯಗೆ ಈ ಬಾರಿ ಕಷ್ಟ ಇದೆ. ಸಿದ್ದರಾಮಯ್ಯ ದಾರಿ ತಪ್ಪಿಬಿಟ್ಟರು ಎಂದು ಲೇವಡಿ ಮಾಡಿದರು.
Advertisement
Advertisement
ಕಾಂಗ್ರೆಸ್, ಬಿಜೆಪಿ ಇಂದ ಜೆಡಿಎಸ್‍ಗೆ ಸುಮಾರು 80 ಜನ ಬರುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ ರಿಸಲ್ಟ್ ಸರ್‌ಪ್ರೈಸ್ ಆಗಿರಲಿದೆ. ನವೆಂಬರ್‌ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ ಸೇರಿ 70 ರಿಂದ 80 ಜನ ಸೇರಲಿದ್ದಾರೆ. ಇದರಲ್ಲಿ ಹಾಲಿ ಶಾಸಕರು ಇದ್ದಾರೆ ಎಂದರು. ಇದನ್ನೂ ಓದಿ: ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಿ ನಿಧನ: ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ
ಅತಂತ್ರ ಬಂದರೆ ನಿಮ್ಮ ನಿಲುವು ಯಾರ ಕಡೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮಗೆ ಯಾರು ಅನುಕೂಲವಾಗುತ್ತಾರೋ ಅವರ ಕಡೆ. ನಮ್ಮ ಗುರಿ ಈ ಬಾರಿ ಪಕ್ಷ ಅಧಿಕಾರಕ್ಕೆ ತರುವುದು. ನಾವು ಈಗಾಗಲೇ ಮಹಿಮಾ ಪಾಟೀಲ್ ಜೊತೆ ಮಾತುಕತೆ ನಡೆಸಿದ್ದೇವೆ. ವೀರೇಂದ್ರ ಪಾಟೀಲ್‍ರ ಮಗನ ಜೊತೆ ಮಾತುಕತೆ ನಡೆಯುತ್ತಿದೆ. ನಾನು ಯಾವತ್ತು ಉಹಾಪೋಹ ಮಾತನಾಡುವುದಿಲ್ಲ. ನಾನು ಆಧಾರ ಇಲ್ಲದೇ ಮಾತನಾಡಲ್ಲ. ಸಂಪೂರ್ಣ ಆಗುವವರೆಗೂ ಯಾವುದೂ ಹೇಳಲ್ಲ ಎಂದು ಹೇಳಿದರು.
ಜನತದಳ ಇದೀಗ ಮತ್ತೆ ನಂಬರ್ 1 ಆಗಿದೆ. ಜನತಾದಳ ಅಸ್ತಿತ್ವದ ಮೇಲೆ ಸರ್ಕಾರ ರಚನೆ ಮಾಡುತ್ತದೆ. ನಾವು ಪಕ್ಷದಲ್ಲಿ ನಿಷ್ಠೆ ಹೊಂದಿರುವವರನ್ನು ಕಡೆಗಣಿಸುವುದಿಲ್ಲ. ನಾವು ಈಗಾಗಲೇ ಅಭ್ಯರ್ಥಿಗಳನ್ನು ನಿಯೋಜಿತ ಅಭ್ಯರ್ಥಿ ಎಂದು ಕರೆಯುತ್ತಿದ್ದೇವೆ. ನಾನು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಜನತದಳದ್ದು ತನ್ನದೇ ಆದ ವೋಟ್ ಬ್ಯಾಂಕ್ ಇದೆ. ಗುಜರಾತ್ ಜೊತೆ ಕರ್ನಾಟಕದ ಚುನಾವಣೆ ನಡೆಯತ್ತದೆ ಎಂದು ತಿಳಿಸಿದರು.
ಬಿಜೆಪಿಗೆ ಮೋದಿ ಚಿಂತೆ, ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಚಿಂತೆ. ನನಗೆ ಆಶ್ಚರ್ಯ ಅಂದರೆ ಸೋನಿಯಾ ಗಾಂಧಿಗೆ ಸಮನ್ಸ್ ಕೊಟ್ಟಿದ್ದಕ್ಕೆ ಹೋರಾಟ ಮಾಡುತ್ತಿದ್ದಾರೆ. ಇಲ್ಲಿ ಜನ ಪ್ರವಾಹದಿಂದ ಮನೆ ಕಳೆದುಕೊಂಡರೂ ಕಾಂಗ್ರೆಸ್ ಹೋರಾಟ ಮಾಡುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಬರಲಿಲ್ಲ. ಅದಕ್ಕೆ ಕಾಂಗ್ರೆಸ್ ಹೋರಾಟ ಮಾಡಿಲ್ಲ. ಕೋಲಾರ ಮತ್ತು ಚಿಕ್ಕಮಗಳೂರು ಜಿಲ್ಲೆ ಎರಡು ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಐದಕ್ಕೆ ಐದು ನಾವು ಗೆಲ್ಲುತ್ತೇವೆ. ಕೆಲವರು ಪಕ್ಷಕ್ಕೆ ಬರುವವರು ಇದ್ದಾರೆ. ಆದರೆ ಯಾರು ಅಂತೂ ಹೇಳಿಲ್ಲ. ತಾಳಿ ಕಟ್ಟಿದ ಮೇಲೆ ನಾವು ಯಾರು ಅಂತ ಹೇಳುತ್ತೇವೆ ಎಂದರು.
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಅಂದಿದ್ದರು. ಇದೀಗ ಕಾಂಗ್ರೆಸ್ ನಡಿಗೆ ರಥೋತ್ಸವದ ಕಡೆ ನಡೆಯುತ್ತಿದೆ. 80 ವರ್ಷವಾದರೂ ಇವರಿಗೆ ಮದುವೆ ಆಗುವ ಚಿಂತೆ ಎಂದು ಪರೋಕ್ಷವಾಗಿ ಸಿದ್ದರಾಮೋತ್ಸವದ ಬಗ್ಗೆ ವ್ಯಂಗ್ಯವಾಡಿದರು. ಇದನ್ನೂ ಓದಿ: ಅರ್ಧರಾತ್ರಿಯಲ್ಲಿ ಅತೃಪ್ತ ಶಾಸಕರ ಬಗ್ಗೆ ಕೈ ನಾಯಕರಿಗೆ ಮಾಹಿತಿ ಕೊಡ್ತಿದೆ – ಮುಂಬೈ ರಹಸ್ಯ ಬಿಚ್ಚಿಟ್ಟ ನವ್ಯಶ್ರೀ
ಮುಖ್ಯಮಂತ್ರಿ ಕುರ್ಚಿಗೆ ಕುಸ್ತಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಅವರ ಅವ್ವ ಸೋನಿಯಾ ಗಾಂಧಿ ಚಿಂತೆ. ಬಿಜೆಪಿಗೆ ಅವರಪ್ಪ ಮೋದಿ ಚಿಂತೆ. ನಾವು ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ನಮ್ಮದು ಸಿಂಗಲ್ ಕ್ಯಾಂಡಿಡೇಟ್ ಕುಮಾರಸ್ವಾಮಿ. ನಮ್ಮದು ಕ್ಲೀಯರ್. ಉಪಮುಖ್ಯಮಂತ್ರಿ ವಿಚಾರವಾಗಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]