ಬೆಂಗಳೂರು: ಕುಮಾರಸ್ವಾಮಿಯವರು (H.D Kumaraswamy) ಸ್ವಾಮೀಯೇ ಅಯ್ಯಪ್ಪ ಎನ್ನುತ್ತಿಲ್ಲ. ಬದಲಿಗೆ ಸ್ವಾಮಿಯೇ ಅಮಿತ್ ಅಯ್ಯಪ್ಪ ಎಂದು ಮಾಲೆ ಹಾಕಿದ್ದಾರೆ ಎಂದು ಜೆಡಿಎಸ್‍ನಿಂದ (JDS) ಅಮಾನತುಗೊಂಡ ಮಾಜಿ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿ (C.M Ibrahim) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಮಾಲೆ ಹಾಕುತ್ತೇನೆ ಎಂಬ ಮಾಜಿ ಸಿಎಂ ಹೆಚ್‍ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮೊದಲು ಆತ್ಮ ಶುದ್ಧವಾಗಿ ಇಟ್ಟುಕೊಳ್ಳಿ. ನಿಮಗೆ ಮತ ಕೊಟ್ಟ ಚನ್ನಪಟ್ಟಣದ ಜನರಿಗೆ ನೀವು ಧನ್ಯವಾದವನ್ನೂ ಹೇಳಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತೆಲಂಗಾಣ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕದ ಜನರ ಹಣ ಲೂಟಿ – ಕೇಂದ್ರ ಸಚಿವ ಕಿಶನ್ ರೆಡ್ಡಿ ಕಿಡಿ
Advertisement
Advertisement
ದತ್ತಮಾಲೆ ಹಾಕಲು ಸಿಟಿ ರವಿ ಖಾಲಿ ಇದ್ದಾರೆ ಇಬ್ಬರು ಸೇರಿ ಹಾಕಿಕೊಳ್ಳಲಿ. ಬೇಕಾದರೆ ದೇವೇಗೌಡರನ್ನು ಕರೆದುಕೊಂಡು ಹೋಗಿ ದತ್ತಾತ್ರೇಯ ಪೂಜೆ ಮಾಡಿ. ನೀವು ಮಾಲೆ ಹಾಕುತ್ತಿರುವುದು ಅಮಿತ್ ಶಾ ಖುಷಿಗೋಸ್ಕರ. ಅವರಿಗೆ ನಾನು ಹಿಂದೂ ಎಂದು ತೋರಿಸಲು ಹೋಗುತ್ತಿದ್ದೀರಿ. ಇದು ತಮಾಷೆಯ ವಿಚಾರವಾಗಿ ಕಾಣುತ್ತಿದೆ. ಕರ್ನಾಟಕದ ರಾಜಕೀಯ ಈ ಹಂತಕ್ಕೆ ಬಂದಿರುವುದು ನೋವಿನ ಸಂಗತಿಯಾಗಿದೆ ಎಂದಿದ್ದಾರೆ.
Advertisement
Advertisement
ಇವರಿಗೆ ಧೈರ್ಯ ಇದ್ದರೆ 19 ಜನರ ಕೈಯಲ್ಲಿ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಮಾಡಲಿ. ಕುಮಾರಸ್ವಾಮಿ ಒಬ್ಬರೇ ರಾಜೀನಾಮೆ ಕೊಟ್ಟು ಮತ್ತೆ ಗೆದ್ದು ಬರಲಿ. ಆಗ ಬೇಕಾದರೆ ಬಿಜೆಪಿ ಹಾಗೂ ದತ್ತಪೀಠಕ್ಕೆ ಹೋಗಲಿ. ಚುನಾವಣೆ ವೇಳೆ ನನಗೆ ಒಂದು ಕಪ್ ಟೀ ಕೊಡಲಿಲ್ಲ. ನನ್ನ ಕಾರಿಗೆ ಪೆಟ್ರೋಲ್ ಹಾಕಿಸಿಲ್ಲ. ನನ್ನ ಸಹಾಯ ಪಡೆದು ಚುನಾವಣೆ ಗೆದ್ದಿದ್ದಿರಿ, ಈಗ ನನ್ನನ್ನ ಅಮಾನತು ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಮುರುಘಾ ಶ್ರೀ ಮತ್ತೆ ಅರೆಸ್ಟ್